ಪಡುಪೆರಾರ `ತಂಬಾಕು ಮುಕ್ತ ಗ್ರಾಮ’ವೆಂದು ಘೋಷಣೆ
ಕೈಕಂಬ : ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಘಟಕ, ಪಡುಪೆರಾರ ಗ್ರಾಪಂ ಜಂಟಿ ಆಶ್ರಯದಲ್ಲಿ ಕೈಗೊಂಡಿರುವ `ತಂಬಾಕು ಮುಕ್ತ ಪಡುಪೆರಾರ ಗ್ರಾಮ’ ಇದರ ಘೋಷಣಾ ಕಾರ್ಯಕ್ರಮ ಪಂಚಾಯತ್ ಸಭಾಭವನದಲ್ಲಿ ಜೂ. ೨೭ರಂದು ನಡೆಯಿತು.

ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಅವರು ಪಂಚಾಯತ್ ಕಚೇರಿ ಬಳಿಯಲ್ಲಿ ಅಳವಡಿಸಲಾದ `ತಂಬಾಕು ಮುಕ್ತ ಪಡುಪೆರಾರ ಗ್ರಾಮ’ ಎಂಬ ಸ್ವಾಗತ ಫಲಕ ಅನಾವರಣಗೊಳಿಸಿದರು. ಸಭೆಯಲ್ಲಿ ತಂಬಾಕು ಮುಕ್ತ ಘೋಷಣಾ ಭಿತ್ತಿಪತ್ರಗಳ ಅನಾವರಣಗೊಳಿಸಿದ ಬಳಿಕ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಪಿಡಿಒ ಸಹಿತ ಎಲ್ಲರೂ ತಂಬಾಕು ಮುಕ್ತ ಗ್ರಾಮದ ಪ್ರಮಾಣವಚನ ಸ್ವೀಕರಿಸಿದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪಿಡಿಒ) ಉಗ್ಗಪ್ಪ ಮೂಲ್ಯ ಮಾತನಾಡಿ, ಮಂಗಳೂರು ತಾಪಂ ಸಭೆಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ, ಜಿಲ್ಲೆಯಲ್ಲಿ ಇದೇ ಪ್ರಥಮ ಎಂಬAತೆ ಪಡುಪೆರಾರ ಗ್ರಾಮ ಪಂಚಾಯತ್‌ನ `ಪಡುಪೆರಾರ ಗ್ರಾಮ’ ತಂಬಾಕು ಮುಕ್ತ ಎಂದು ಘೋಷಿಸಲ್ಪಟ್ಟಿದೆ. ಈ ಬಗ್ಗೆ ಪಂಚಾಯತ್ ಸಭೆಯಲ್ಲಿ ಸಕಾರಾತ್ಮಕ ನಿರ್ಣಯ ಕೈಗೊಳ್ಳಲಾಗಿತ್ತು. ಇಲಾಖಾ ವತಿಯಿಂದ ಕಳೆದ ಒಂದು ವರ್ಷದಿಂದ ಗ್ರಾಮದಲ್ಲಿ ಈ ಅಭಿಯಾನ ಜಾರಿಯಲ್ಲಿದ್ದು, ಅಂಗಡಿ ಮಾಲಕರು ಹಾಗೂ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿದೆ ಎಂದರು.
ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಮಾಜ ಕಾರ್ಯಕರ್ತೆ ಶ್ರುತಿ ಸಾಲ್ಯಾನ್ ಮಾತನಾಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ತಿಮ್ಮಯ್ಯ ಮತ್ತು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನವೀನ್ಚಂದ್ರ ಕುಲಾಲ್ ಮಾರ್ಗದರ್ಶನದಲ್ಲಿ ಪಡುಪೆರಾರ ಗ್ರಾಮದಲ್ಲಿ ಕಳೆದ ಒಂದು ವರ್ಷದಿಂದ ತಂಬಾಕು ಮುಕ್ತ ಗ್ರಾಮ ಅಭಿಯಾನ ನಡೆಸುತ್ತಿದ್ದೇವೆ. ಗ್ರಾಮಸ್ಥರ ಪ್ರತಿಕ್ರಿಯೆ ಉತ್ತಮವಾಗಿದೆ ಎಂದರು.
ತAಬಾಕು ಕಾಯಿಲೆ :
ಕ್ಯಾನ್ಸರ್‌ಕಾರಕ ತಂಬಾಕು ಕೂದಲು ಉದುರುವಿಕೆ, ಹೃದಯ ಸಂಬAಧಿ ಕಾಯಿಲೆ, ಬಿಪಿ, ಗ್ಯಾಂಗ್ರೀನ್, ಬಂಜೆತನ ಮತ್ತಿತರ ಕಾಯಿಲೆಗಳಿಗೂ ಹೇತುವಾಗಿದೆ. ತಂಬಾಕು ವರ್ಜಿಸಿದರೆ ಮನಶಾಂತಿ ಹೆಚ್ಚಾಗಿ ಒತ್ತಡ ಕಡಿಮೆಯಾಗುತ್ತದೆ. ಕುಟುಂಬ, ಆರೋಗ್ಯ, ಆರ್ಥಿಕತೆ ದೃಷ್ಟಿಯಿಂದ ತಂಬಾಕು ವರ್ಜನ ಅತಿ ಮುಖ್ಯ. ತಂಬಾಕು ಮುಕ್ತ ಪಡುಪೆರಾರ ಗ್ರಾಮ ಇತರ ಗ್ರಾಮಗಳಿಗೆ ಮಾದರಿಯಾಗಿದೆ. ಇದು ತಾಲೂಕು, ಜಿಲ್ಲೆಯಿಂದ ರಾಜ್ಯಕ್ಕೆ ವ್ಯಾಪಿಸಬೇಕು ಎಂದು ಶ್ರುತಿ ಸಾಲ್ಯಾನ್ ಆಶಿಸಿದರು. ಈ ಸಂದರ್ಭದಲ್ಲಿ ತಂಬಾಕು ದುಷ್ಪರಿಣಾಮಗಳ ಬಗ್ಗೆ ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು.
ಜಿಲ್ಲಾ ಆರೋಗ್ಯ ನಿಯಂತ್ರಣ ಕೋಶದ ಆಪ್ತ ಸಮಾಲೋಚಕ ವಿಜಯ್ ಕುಮಾರ್ ಮಾತನಾಡಿ, ತಂಬಾಕು ಸಾಮಾಜಿಕ ಪಿಡುಗು. ಇದರ ನಿಯಂತ್ರಣಕ್ಕೆ ಎಲ್ಲರೂ ಪಣ ತೊಡಬೇಕು. ಏಕಾಏಕಿ ನಿಯಂತ್ರಣ ಸಾಧ್ಯವಿಲ್ಲದಿದ್ದರೂ ನಿಧಾನಗತಿಯಲ್ಲಿ ಫಲಿತಾಂಶ ಸಿಗಲಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದರು.
ಪAಚಾಯತ್ ಸದಸ್ಯರಾದ ನೂರ್ ಅಹ್ಮದ್, ಯಶವಂತ ಮಾತನಾಡಿ, ತಂಬಾಕು ಮುಕ್ತ ಅಭಿಯಾನ ಅಗತ್ಯವಿದ್ದರೂ, ಇಂತಹ ಸಂದರ್ಭಗಳಲ್ಲಿ ಪರ್ಯಾಯ ವಿಚಾರಗಳ ಬಗ್ಗೆಯೂ ಆಲೋಚಿಸಬೇಕಾಗುತ್ತದೆ. ತಂಬಾಕು ಅಥವಾ ಮದ್ಯ ಉತ್ಪನ್ನ ಮಾರಾಟ ನಂಬಿ ಜೀವನ ಸಾಗಿಸುವ ಅದೆಷ್ಟೋ ಕುಟುಂಬಗಳಿವೆ. `ಅವರಿಗೇನು’ ಎಂಬುದರ ಬಗ್ಗೆ ಚಿಂತಿಸಬೇಕು ಎಂದರು.
ಪAಚಾಯತ್ ಅಧ್ಯಕ್ಷೆ ಮೀನಾಕ್ಷಿ ಅಧ್ಯಕ್ಷತೆ ವಹಿಸಿ ಮಾತಾಡಿದರು. ಪಂಚಾಯತ್ ಸದಸ್ಯರಾದ ಗಣೇಶ್ ಬಿ. ಎಸ್. ವಿನೋದ್, ಆಶಾ-ಅಂಗನವಾಡಿ ಮತ್ತು ಆರೋಗ್ಯ ಕಾರ್ಯಕರ್ತೆಯರು, ಪಂಚಾಯತ್ ಸಿಬ್ಬಂದಿ, ರಿಕ್ಷಾ ಚಾಲಕರು, ಅಂಗಡಿ ಮಾಲಕರು, ಗ್ರಾಮಸ್ಥರು ಇದ್ದರು. ಪಿಡಿಒ ಉಗ್ಗಪ್ಪ ಸ್ವಾಗತಿಸಿದರೆ, ಪಂಚಾಯತ್ ಪ್ರಭಾರ ಕಾರ್ಯದರ್ಶಿ ಕಮಲಾಕ್ಷ ವಂದಿಸಿದರು.



