ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯಲ್ಲಿ ಯಕ್ಷಧ್ರುವ ಯಕ್ಷ ಶಿಕ್ಷಣ ತರಬೇತಿಗೆ ಚಾಲನೆ ನೀಡಲಾಯಿತು.
ಶಾಲೆಯ ಮಧುಕರ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮವನ್ನು ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ವಸಂತ್ ಮಾದವ ಅವರ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಚಾಲನೆ ನೀಡಿ,ಯಕ್ಷಗಾನವು ಶಿಕ್ಷಣದ ಜೊತೆ ಇರುವಂತಹ ಒಂದು ಕಲೆ ಇದರಿಂದ ಮನಸ್ಸಿನ ಭಾವನೆಯು ಹತೋಟಿಯಲ್ಲಿರುತ್ತದೆ ಎಂದು ಹೇಳಿದರು
ಭುವಿ ದೇವರ ಸ್ತುತಿಯನ್ನು ಹಾಡಿದಳು.

ಯಕ್ಷಧ್ರುವ ಪಟ್ಲ ಫೌಂಡೇಶನ್ ಇದರ ವಿಟ್ಲ ಘಟಕದ ಅಧ್ಯಕ್ಷರಾದ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ ನಿವೃತ್ತ ಉಪನ್ಯಾಸಕ ಪಿ ಪೂವಪ್ಪ ಶೆಟ್ಟಿ,ಯಕ್ಷ ದ್ರುವಪೌಂಡೇಶನ್ ವಿಟ್ಲ ಘಟಕದ ಸಹಸಂಚಾಲಕ ಭಾಸ್ಕರ್ ಶೆಟ್ಟಿ, ಉಪಸ್ಥಿತರಿದ್ದರು.
ಯಕ್ಷ ಶಿಕ್ಷಕ ಅಮ್ಮುಂಜೆ ಮೋಹನ್ ಕುಮಾರ್ ಅವರು ವಿದ್ಯಾರ್ಥಿಗಳಿಗೆ ಯಕ್ಷಗಾನದ ಮೊದಲ ಹೆಜ್ಜೆಯ ತರಬೇತಿಯನ್ನು ಕೊಟ್ಟರು.
ಇದೇ ವೇಳೆ ಯಕ್ಷಧ್ರುವ ಪಟ್ಲ ಪೌಂಡೇಶನ್ (ರಿ.) ಮಂಗಳೂರು ಇದರ ವತಿಯಿಂದ “ಯಕ್ಷಧ್ರುವ ಯಕ್ಷ ಶಿಕ್ಷಣ” ಪುಸ್ತಕವನ್ನು ಶ್ರೀ ರಾಮ ಪ್ರೌಢ ಶಾಲೆಯ ವಾಚನಾಲಯಕ್ಕೆ ಹಸ್ತಾಂತರಿಸಲಾಯಿತು.*
ಮುಖ್ಯ ಶಿಕ್ಷಕ ಗೋಪಾಲ್ ಶ್ರೀಮಾನ್ ಸ್ವಾಗತಿಸಿದರು. ಸಹ ಶಿಕ್ಷಕಿ ಸವಿತಾ ವಂದಿಸಿದರು. ಹಿರಿಯ ಶಿಕ್ಷಕರಾದ ಜಿನ್ನಪ್ಪ ಶ್ರೀಮಾನ್ ಕಾರ್ಯಕ್ರಮ ನಿರೂಪಿಸಿದರು.
