ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕೃಷಿ ಇಲಾಖೆ ಬಂಟ್ವಾಳ ತಾಲೂಕು ಇದರವತಿಯಿಂದ 2025-26 ನೇ ಸಾಲಿನ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ ಯೋಜನೆಯಡಿ ರೈತರಿಗೆ ಕೃಷಿ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ವೀರಕಂಭ ಗ್ರಾಮದ ತೆಕ್ಕಿಪಾಪು ನಳಿನಿ ಮೋನಪ್ಪ ಪೂಜಾರಿರವರ ಮನೆ ವಠಾರದಲ್ಲಿ ಬುಧವಾರ ಜರಗಿತು.

ಪ್ರಗತಿಪರ ಕೃಷಿಕರಾದ ಜಯಪ್ರಕಾಶ್ ತೆಕ್ಕಿಪಾಪು ಅವರುಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು.
ವೀರಕಂಭ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜನಾರ್ಧನ ಪೂಜಾರಿ ಗೋಳಿಮಾರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಗಾಗಿ ಭಾಗವಹಿಸಿದ್ದ ಬಂಟ್ವಾಳ ತಾಲೂಕು ತೋಟಗಾರಿಕಾ ನಿರ್ದೇಶಕ ದಿನೇಶ್, ತಾಲೂಕು, ಕೃಷಿ ಅಧಿಕಾರಿ ನಂದನ್ ಶೆಣೈ, ತಾಂತ್ರಿಕ ವ್ಯವಸ್ಥಾಪಕ ಆತ್ಮ ಯೋಜನೆ ಬಿ ಸಿ.ರೋಡ್ ಘಟಕದ ಹನುಮಂತ ಕಾಳಗಿ, ರೈತರಿಗೆ ಮಾಹಿತಿ ನೀಡಿದರು.
ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ರೆಹಮಾನ್,ಪ್ರಗತಿಪರ ಕೃಷಿಕ ಮಜಿ ತಿರುಮಲೇಶ್ವರ ಕುಮಾರ್,, ನಿವೃತ್ತ ಸೈನಿಕ ಚಂದ್ರಶೇಖರ್ ಉಪಸ್ಥಿತರಿದ್ದರು.
ವೀರಕಂಬ ಗ್ರಾಮಪಶು ಸಖಿ ಪ್ರಚೀನ ಸ್ವಾಗತಿಸಿದರು. ಸ್ನೇಹ ಸಂಜೀವಿನಿ ಒಕ್ಕೂಟದ ಮುಖ್ಯ ಬರಹಗಾರ್ತಿ ಮಲ್ಲಿಕಾ ಶೆಟ್ಟಿ, ವಂದಿಸಿದರು. ಕೃಷಿ ಸಾವಯವ ಗೊಬ್ಬರ ಸಿ ಆರ್ ಪಿ ಪುಷ್ಪಾವತಿ ಕಾರ್ಯಕ್ರಮ ನಿರೂಪಿಸಿದರು.
ಕೃಷಿ ಸಖಿಗಳಾದ ನಮಿತಾ, ಗಾಯತ್ರಿ ಅಳಿಕೆ, ಸವಿತ ಡಿಸೋಜ ತಾಂತ್ರಿಕ ವ್ಯವಸ್ಥಾಪಕರು ಆತ್ಮ ಯೋಜನೆ ವಿಟ್ಲದ ವಿರೂಪಾಕ್ಷ ಸಹಕರಿಸಿದರು.
