1937ನೇ ಮದ್ಯವರ್ಜನ ಶಿಬಿರದಲ್ಲಿ40 ಶಿಬಿರಾರ್ಥಿಗಳು ನವಜೀವನಕ್ಕೆ ಪಾದಾರ್ಪಣೆ
ಬಂಟ್ವಾಳ : ತಾಲೂಕಿನ ಮೋಂತಿಮಾರು ಮಂಚಿ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ಸಭಾಂಗಣದಲ್ಲಿ ನಡೆದ 1937ನೇ ಮದ್ಯವರ್ಜನ ಶಿಬಿರದಲ್ಲಿ 40 ಮಂದಿ ಶಿಬಿರಾರ್ಥಿಗಳು ನವಜೀವನಕ್ಕೆ ಪಾದಾರ್ಪಣೆಗೈದರು.
ಶ್ರೀಧಾಮ ಮಾಣಿಲದ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿ ಅವರು ಅಶೀರ್ವಚನಗೈದು, ದೇಶದಲ್ಲಿ ಮದ್ಯಮ ವರ್ಗದ ಜನರು ಅಭಿವೃದ್ಧಿ ಹೊಂದಿದರೆ ಅದು ನೇರವಾಗಿ ದೇಶದ ಪ್ರಗತಿಗೆ ಸಹಕಾರಿ ಆಗುತ್ತದೆ. ಇದಕ್ಕೆ ತೊಡಕಾಗಿರುವ ಮದ್ಯವ್ಯಸನದ ಪಿಡುಗನ್ನು ನಿವಾರಿಸಲು ಧರ್ಮಸ್ಥಳ ಕ್ಷೇತ್ರದಿಂದ ಕಳೆದ 30 ವರ್ಷದಿಂದಲು ಪ್ರಯತ್ನ ಪಡಲಾಗುತ್ತಿದೆ ಎಂದರು.

ಜನಜಾಗೃತಿ ವಿಭಾಗದ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ. ಪಾಯಸ್ ಕುಟುಂಬ ದಿನ ಕಾರ್ಯಕ್ರಮ ನಿರ್ವಹಿಸಿ, ಶಿಬಿರಾರ್ಥಿಗಳಿಂದ ಮಧ್ಯ ತ್ಯಜಿಸುವ ಸಂಕಲ್ಪದ ಪ್ರತಿಜ್ಞೆ ಬೋಧಿಸಿದರು.
ಮಾಜಿ ಶಾಸಕ ಏ. ರುಕ್ಮಯ ಪೂಜಾರಿ,ಉದ್ಯಮಿ ಮಾಧವ ಮಾವೆ, ಮದ್ಯವರ್ಜನ ಶಿಬಿರದ ಅಧ್ಯಕ್ಷರಾದ ಲ| ರಾಮ್ ಪ್ರಸಾದ್ ರೈ ತಿರುವಾಜೆ ಅವರು ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಮದ್ಯವರ್ಜನ ವ್ಯವಸ್ಥಾಪನಾ ಸಮಿತಿಯ ಗೌರವಾಧ್ಯಕ್ಷರಾದ ಸತೀಶ್ಚಂದ್ರ ಎಸ್ ಆರ್, ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ನಿವೃತ್ತಶಿಕ್ಷಕಿ ಲ|ದೇವಕಿ ಹೆಚ್,ಉಡುಪಿ ಪ್ರಾದೇಶಿಕ ಕಚೇರಿ ಜನಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ, ಉಡುಪಿ,ವಿಟ್ಲ ಪ್ರಾ.ವ್ಯ.ಸೇ.ಸ.ಸಂ ಕೊಡಂಗಾಯಿ ಇದರ ಅಧ್ಯಕ್ಷ
ನಾರಾಯಣ ಶೆಟ್ಟಿ ಕುಲ್ಯಾರ್ , ಪ್ರ ಬ ಸ್ವ ಸಹಾಯ ಸಂಘಗಳ ಕೇಂದ್ರ ಒಕ್ಕೂಟ ವಿಟ್ಲಿ ಇದರ ಅಧ್ಯಕ್ಷ ನವೀನ್ ಚಂದ್ರ ಕಣಂತೂರು,ಭಜನಾ ಪರಿಷತ್ ವಿಟ್ಲ ತಾಲೂಕು
ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಪಾಲ್ತಾಜೆ,ಜನಜಾಗೃತಿ ವೇದಿಕೆ ಸಾಲೆತ್ತೂರು ಘಟಕದ ಅಧ್ಯಕ್ಷ ಲ|ಅರವಿಂದ ರೈ,ಮಂಚಿ ಒಕ್ಕೂಟದ ಅಧ್ಯಕ್ಷ ದಿವಾಕರ್ ನಾಯಕ್, ಸಾಲೆತ್ತೂರು ಒಕ್ಕೂಟದ ವಲಯಾಧ್ಯಕ್ಷ ದಿನೇಶ್ ಶೆಟ್ಟಿ, ಕಲ್ಲಡ್ಕ ಒಕ್ಕೂಟವಲಯಾಧ್ಯಕ್ಷರಾದ ತುಳಸಿ,ವಿಟ್ಲ ಒಕ್ಕೂಟದ ವಲಯಾಧ್ಯಕ್ಷೆ ಪ್ರಮೀಳಾ,ಪೆರ್ನೆ ಒಕ್ಕೂಟದ ವಲಯಾಧ್ಯಕ್ಷ
ರಾಬರ್ಟ್ ಫೆರ್ನಾಂಡಿಸ್,ಕೇಪುಜನಜಾಗೃತಿ ವೇದಿಕೆವಲಯಾಧ್ಯಕ್ಷ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ ,ಮೇಲ್ವಿಚಾರಕಿಯರಾದ
ಸವಿತಾ ಸಾಲೆತ್ತೂರು, ಶಶಿಕಲಾ ಮಂಚಿ, ನಿತೇಶ್ ಕೆ, ಶಿಬಿರಾಧಿಕಾರಿ ದಿವಾಕರ್
ಆರೋಗ್ಯ ಸಹಾಯಕಿ ನೇತ್ರಾವತಿರವರು ಉಪಸ್ಥಿತರಿದ್ದರು.
ಶಿಬಿರಾರ್ಥಿಗಳ ಮನೆಯವರು, ವಿಟ್ಲ ತಾಲೂಕಿನ ಸ್ವಸಹಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳು, ಜನಜಾಗೃತಿ ವೇದಿಕೆ ಪದಾಧಿಕಾರಿಗಳು, ನವಜೀವನ ಸಮಿತಿ ಸದಸ್ಯರು, ಶೌರ್ಯ ವಿಪತ್ತು ನಿರ್ವಹಣಾ ಸ್ವಯಂ ಸೇವಕರು , ಸೇವಾ ಪ್ರತಿನಿಧಿಗಳು, ಗ್ರಾಮಸ್ಥರು ಭಾಗವಹಿಸಿದ್ದರು.
ವಿಟ್ಲ ತಾಲೂಕಿನ ಕ್ಷೇತ್ರ ಯೋಜನಾಧಿಕಾರಿ ಸುರೇಶ್ ಗೌಡ ಸ್ವಾಗತಿಸಿದರು.ವಲಯ ಮೇಲ್ವಿಚಾರಕಿ ಸವಿತಾ ವಂದಿಸಿದರು, ಶೌರ್ಯ ತಂಡದ ಗಣೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು
1937ನೇ ಮದ್ಯವರ್ಜನ ಶಿಬಿರದ
ಸಮಿತಿ ಮೋಂತಿಮಾರು ಮಂಚಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ) ವಿಟ್ಲ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ಬೆಳ್ತಂಗಡಿ, ತಾಲೂಕು ಜನಜಾಗೃತಿ ವೇದಿಕೆ ಬಂಟ್ವಾಳ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮೋಂತಿಮಾರು ಮಂಚಿ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟ ವಿಟ್ಲ, ಜಸ್ಟೀಸ್ ಕೆ ಎಸ್ ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ದೇರಳಕಟ್ಟೆ (ಕ್ಷೇಮ), ಲಯನ್ಸ್ ಕ್ಲಬ್ ವಿಟ್ಲ ತಾಲೂಕು, ನವಜೀವನ ಸಮಿತಿ ಹಾಗೂ ಶೌರ್ಯ ವಿಪತ್ತು ನಿರ್ವಹಣಾ ಸಮಿತಿ ವಿಟ್ಲ ತಾಲೂಕು, ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತಿ ಮತ್ತು ಸಂಶೋಧನಾ ಕೇಂದ್ರ ಲಾಯಿಲ ಬೆಳ್ತಂಗಡಿ ಇದರ ವಿಸ್ತರಣಾ ಅಂಗವಾಗಿ 1937ನೇ ಮದ್ಯವರ್ಜನ ಶಿಬಿರ ನಡೆಯಿತು.



