ಬಂಟ್ವಾಳ: ತುಳುಕೂಟ ಬಂಟ್ವಾಳ ಇದರ ಆಶ್ರಯದಲ್ಲಿ “ತುಳುವೆರೆನ ತುಳುನಾಡ ಸಂತೆ” ಕುಕ್ಕು,ಪೆಲಕಾಯಿದ ಒಟ್ಟು ತುಳು ಸಾಹಿತ್ಯ ಸಾಂಸ್ಕೃತಿಕ ರಂಗ್ ಮಳೆಗಾಲದ ವಿಶೇಷ ಕಾರ್ಯಕ್ರಮವು ಜೂ.20 ರಿಂದ 22 ರವರೆಗೆ ಮೂರುದಿನಗಳ ಕಾಲ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ನಡೆಯಲಿದೆ ಎಂದು ತುಳುಕೂಟದ ಅಧ್ಯಕ್ಷರಾದ ಸುದರ್ಶನ್ ಜೈನ್ ತಿಳಿಸಿದ್ದಾರೆ.

ಬುಧವಾರ ಬಿ.ಸಿ.ರೋಡಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು,ಕೃಷಿಗೆ ಪ್ರಾಧಾನ್ಯತೆ, ಸಾಹಿತ್ಯಕ್ಕೆ ಒತ್ತು, ಸಾಂಸ್ಕೃತಿಕ ಮನೋರಂಜನೆಯೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ವಿವರಿಸಿದರು.

ಜೂ. 20 ರಂದು ಬೆ. 10-00ಗಂಟೆಗೆ “ತುಳುವರೆನ ತುಳುನಾಡ ಸಂತೆ” ಕಾರ್ಯಕ್ರಮವನ್ನು ಬಂಟ್ಚಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಉದ್ಘಾಟಿಸಿ ಚಾಲನೆ ನೀಡಲಿದ್ದಾರೆ. ಮಾಜಿ ಸಚಿವರಾದ ಬಿ. ರಮಾನಾಥ ರೈ, ತಹಶೀಲ್ದಾರ್ ಅರ್ಚನಾ ಭಟ್,ಪಿರಸಭಾಧ್ಯಕ್ಷ ವಾಸುಪೂಜಾರಿ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ ಸಹಿತ ಹಲವಾರು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಈ ಸಂದರ್ಭದಲ್ಲಿ ತುಳು ಭಾಷಾ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಗುವುದು ಎಂದರು.
ಮಧ್ಯಾಹ್ನ 2-30ಕ್ಕೆ “ಸಾಂಸ್ಕೃತಿಕ ರಂಗ್ ” ಕಾರ್ಯಕ್ರಮವನ್ನು ರೋಟರಿಕ್ಲಬ್ ನ ನಿಕಟಪೂರ್ವ ಗವರ್ನರ್ ಪ್ರಕಾಶ್ ಕಾರಂತ್ ಅವರು ಉದ್ಘಾಟಿಸುವರು. ಬಳಿಕ ತುಳು ಪದರಂಗಿತೊ, ಸಂಜೆ 5-30ಕ್ಕೆ ಬಲೆ ತೆಲಿಪಾಲೆ ಮತ್ತು ಬಲೆ ಬುಲಿಪಾಲೆ ಕಾರ್ಯಕ್ರಮ ನಡೆಯಲಿದೆ ಎಂದರು.
21 ರಂದು ಶನಿವಾರ ಬೆ. 10-00ಕ್ಕೆ “ಹಣ್ಣು ಹಂಪಲುಗಳ ಕೃಷಿ ಮತ್ತು ವಿವಿಧ ಉತ್ಪನ್ನಗಳ ತಯಾರಿಕೆ ಹಾಗೂ ಮಾಹಿತಿ ವಿಚಾರಗೋಷ್ಠಿ, ಮಧ್ಯಾಹ್ನ 12-00ಕ್ಕೆ ತುಳುಕೂಟದ ಪ್ರಬುದ್ಧ ಸಂಗೀತ ಕಲಾವಿದರಿಂದ” ತುಳುವೆರೆ ಪದಗೊಂಚಿಲ್ ” ಹಾಗೂ ಹಲಸು, ಮಾವುಗಳಿಗೆ ಸಂಬಂಧಿಸಿದಂತೆ ಒಳಾಂಗಣ ಸ್ಪರ್ಧೆ, ಅಪರಾಹ್ನ 2-30 ರಿಂದ 30 ಜನ ಕವಿಗಳಿಂದ ಬಹುಭಾಷಾ ಕವಿಗೋಷ್ಠಿ ನಡೆಯಲಿದೆ.ಸಂಜೆ ಯಕ್ಷಗಾನ ನೃತ್ಯ ವೈಭವ ವಿಶೇಷ ಕಾರ್ಯಕ್ರಮ ಮತ್ತು ನೃತ್ಯ ಗಾನ ಸಂಭ್ರಮ ನಡೆಯಲಿದೆ ಎಂದು ಸುದರ್ಶನ್ ಜೈನ್ ವಿವರಿಸಿದರು.
22 ರಂದು ಬೆ.9 ಗಂಟೆಗೆ ತುಳು ಕೂಟ ಬಂಟ್ವಾಳದ ಜೊತೆ ನೇತ್ರಾವತಿ ಕೃಷಿಕರ ಅಭಿವೃದ್ಧಿ ಒಕ್ಕೂಟ ಮತ್ತು ಬಂಟ್ವಾಳ ತೋಟಗಾರಿಕಾ ಇಲಾಖೆಯ ಸಹಕಾರದಲ್ಲಿ ಕೃಷಿ ಗೇನ, ಸಾಂಸ್ಕೃತಿಕ ಅಂಗಣ ಕಾರ್ಯಕ್ರಮ ನಡೆಯಲಿದೆ ಈ ಸಂದರ್ಭ ಉಚಿತ ಸಸಿ ವಿತರಣೆಯು ನಡೆಯುವುದು. ಮಧ್ಯಾಹ್ನ 2-00 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಸಮಾರೋಪ ಭಾಷಣ ಮಾಡಲಿದ್ದಾರೆ. ಮಾಜಿ ಸಂಸದರು ನಳಿನ್ ಕುಮಾರ್ ಕಟೀಲ್ ಸಹಿತ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಹಿರಿಯ ಪ್ರಗತಿಪರ ಕೃಷಿಕರಾದ ಕೊರಗಪ್ಪ ಮೂಲ್ಯ ಮಣಿಹಳ್ಳ ಮತ್ತು ಸದಾಶಿವ ಶೆಟ್ಟಿಗಾರ್ ಅಣ್ಣಳಿಕೆ ಅವರನ್ನು ಸನ್ಮಾನಿಸಲಾಗುವುದು.ಬಳಿಕ ನೃತ್ಯ ಸಿಂಚನ, ಸಂಜೆ 6-30ಕ್ಕೆ ತುಳುನಾಟಕ ಪ್ರದರ್ಶನಗೊಳ್ಳಲಿದೆ ಎಂದು ಅವರು ವಿವರಿಸಿದರು.
ಸುಮಾರು 40 ಸ್ಟಾಲ್ ಗಳಲ್ಲಿ
ವಿವಿಧ ಬಗೆಯ ಹಲಸುಗಳ ಉತ್ಪನ್ನ ಹಾಗೂ ಮಾವುಗಳ ಪ್ರದರ್ಶನ ,ಮಾರಾಟ ನಡೆಯಲಿದ್ದು,ಹಾಗೆಯೇ ಇತರ ವಸ್ತುಗಳ ಉತ್ಪನ್ನ ,ಮಾರಾಟವು ಇರಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಎಚ್.ಕೆ. ನಯನಾಡು,ಕೋಶಾಧಿಕಾರಿ ಸುಭಾಶ್‌ಚಂದ್ರ ಜೈನ್,ವಿವಿಧ ಸಮಿತಿಯ ಪದಾಧಿಕಾರಿಗಳಾದ ದೇವಪ್ಪ ಕುಲಾಲ್,ಮಧುಸೂದನ ಶೆಣೈ,ರವೀಂದ್ರ ಕುಕ್ಕಾಜೆ,ಮೋಹನ್ ಸಾಲಿಯಾನ್,ಸುಕುಮಾರ್ ಬಂಟ್ವಾಳ,ಸೀತಾರಾಮ ಶೆಟ್ಟಿ,ಚಂದ್ರಶೇಖರ ಗಟ್ಟಿ,ಸದಾಶಿವ ಪುತ್ರನ್ ,ಮ್ಯಾಥ್ಯು,ನಾರಾಯಣ ಪೆರ್ನೆ,ಮೋಹನ್ ಶೆಟ್ಟಿ,ಸತೀಶ್ ಕುಮಾರ್ ಬಿ.ಸಿ.ರೋಡು ಮೊದಲಾದವರಿದ್ದರು
