ಮಂಗಳೂರು: ಜಪ್ಪಿನಮೊಗರು ಹೆದ್ದಾರಿಯಲ್ಲಿ ನಸುಕಿನ ವೇಳೆಗೆ ಭೀಕರ ಅಪಘಾತ ನಡೆದಿದ್ದು ಚಾಲಕನ ನಿಯಂತ್ರಣ ತಪ್ಪಿದಸ್ಕೋಡಾಕಾರು ಕಿರು ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದು ಇಬ್ಬರು ಯುವಕರು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.

ಎನ್‌ಯಸ್‌ಯುಐ ದಕಜಿಲ್ಲಾ ಉಪಾಧ್ಯಕ್ಷ ಓಂಶ್ರೀ ಪೂಜಾರಿ(೨೪) ಸೇರಿದಂತೆ ಕಾರು ಚಾಲಕ ಕದ್ರಿ ನಿವಾಸಿ ಅಮನ್ ರಾವ್(೨೩) ಮೃತಪಟ್ಟವರಾಗಿದ್ದಾರೆ.


ರಾ.ಹೆ. ೬೬ರ ಜಪ್ಪಿನಮೊಗರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯ ಎದುರಲ್ಲೆ ಅಪಘಾತ ಸಂಭವಿಸಿದೆ
ಫೋಕ್ಸೊವೇಗನ್ ವರ್ಟಸ್ ಕಾರಿನಲ್ಲಿ ಐವರು ಯುವಕರಿದ್ದು ಇಬ್ಬರು ಗಂಭೀರ ಗಾಯಗೊಂಡು ನಗರದ ಆಸ್ಪತ್ರೆಯಲ್ಲಿ ತೀವೃನಿಗಾದಲ್ಲಿದ್ದಾರೆ ಇನ್ನೊಬ್ಬನಿಗೆ ಅಲ್ಪಸ್ವಲ್ಪ ಗಾಯವಾಗಿದೆ ತಿಳಿದು ಬಂದಿದೆ.
ಚಾಲಕನ ಅತಿ ವೇಗಕ್ಕೆ ಡಿವೈಡರ್ ಡಿಕ್ಕಿಯಾಗಿ ಪೋಕ್ಸ್ ವಾಗೇನ್ ಕಾರು ಅಪ್ಪಚ್ಚಿಯಾಗಿದೆ.
