ಬಂಟ್ವಾಳ: ಇಲ್ಲಿನ ವಿದ್ಯಾಗಿರಿ‌ ಶ್ರೀ ವೆಂಕಟರಮಣ ಸ್ವಾಮಿ ಆಂಗ್ಲ ಮಾಧ್ಯಮ ಶಾಲೆಯ ೨೦೨೫-೨೬ ನೇ ಸಾಲಿನ ವಿದ್ಯಾರ್ಥಿ ಸಂಸತ್ತಿನ ರಚನೆಯು ಚುನಾವಣೆಯ ಮೂಲಕ ಶುಕ್ರವಾರ ನಡೆಯಿತು.

ಚುನಾವಣೆಯ ಭಾಗವಾಗಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ, ನಾಮಪತ್ರ ಹಿಂತೆಗೆತ ಮತ್ತು ಚುನಾವಣಾ ಪ್ರಚಾರದೊಂದಿಗೆ ಮತದಾನವು ನಡೆಯಿತು. ವಿದ್ಯಾರ್ಥಿ ಸಂಘದ ಸಲಹೆಗಾರರಾದ ಶಿಕ್ಷಕಿ  ಶರ್ಮಿಳ ಅವರ ನೇತೃತ್ವದಲ್ಲಿ ಚುನಾವಣಾ ಪ್ರಕ್ರಿಯೆ ನೆರವೇರಿತು. 

ಅಧುನಿಕ ತಂತ್ರಜ್ಞಾನದ ಮೂಲಕ ಎಲ್ಲಾ ವಿದ್ಯಾರ್ಥಿಗಳು ಮತಚಲಾಯಿಸಿದರು. ವಿದ್ಯಾರ್ಥಿ ಸಂಘದ ನಾಯಕರಾಗಿ 10 ನೇ ತರಗತಿಯ ವಿದ್ಯಾರ್ಥಿ ತನಿಷ್ ಆರ್. ಶೆಟ್ಟಿಗಾರ್ , ಉಪನಾಯಕನಾಗಿ 9 ನೇ ತರಗತಿಯ ಯದ್ವಿತ್, ಯೋಜನಾಧಿಕಾರಿಯಾಗಿ 10 ನೇ‌ತರಗತಿಯ ಅನುಷ್ಕ ಶೆಟ್ಟಿ  ಅವರು ಆಯ್ಕೆಯಾದರು. 

ಪ್ರೌಢಶಾಲಾ ಮುಖ್ಯೋಪಾಧ್ಯಯರಾದ  ಹರಿಪ್ರಸಾದ್, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ  ಶ್ರೀದೇವಿ ಪಿ  ಮತ್ತು ಪೂರ್ವಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿಯಾದ ವೀಣಾ ದೇವಾಡಿಗ ಅವರು ಮಾರ್ಗದರ್ಶನವಿತ್ತರು.

By suddi9

Leave a Reply

Your email address will not be published. Required fields are marked *