ಕಲ್ಲಡ್ಕ ಶ್ರೀ ರಾಮ ಆಂಗ್ಲ ಮಾಧ್ಯಮ ಶಾಲೆ; “ವಿಕ್ರಮಾದಿತ್ಯ”ನೂತನ ಭವನದ ಲೋಕಾರ್ಪಣೆ
ಬಂಟ್ವಾಳ: ಕಲ್ಲಡ್ಕ ಶ್ರೀ ರಾಮ ಆಂಗ್ಲ ಮಾಧ್ಯಮ ಶಾಲೆಯ ನೂತನ ಭವನ “ವಿಕ್ರಮಾದಿತ್ಯ” ವನ್ನು ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಲೋಕಾರ್ಪಣೆಗೈದರು.

ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಆರ್ಶೀವಚನಗೈದ ಅವರು ಭಾರತೀಯ ಶಿಕ್ಷಣ ಪ್ರಣಾಳಿಕೆಯು ಪ್ರಾಚೀನತೆ ಜೊತೆಗೆ ಆಧುನಿಕ ವಿಜ್ಞಾನದೊಂದಿಗೆ ಸಮನ್ವಯವಾಗಿರಬೇಕು, ಪ್ರಸ್ತುತ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳಿಗೆಆಧ್ಯಾತ್ಮಿಕ ಚಿಂತನೆಯ ಬೋಧನೆಯ ಅಗತ್ಯವಿದ್ದು,ಈ ನಿಟ್ಟಿನಲ್ಲಿ ಶ್ರೀರಾಮ ವಿದ್ಯಾ ಕೇಂದ್ರವು ಆಧುನಿಕ ಮತ್ತು ಆಧ್ಯಾತ್ಮಿಕತೆ ಸೇರಿದಂತಹ ಶಿಕ್ಷಣವನ್ನು ನೀಡುತ್ತಿರುವುದು ಎಂದು ಪ್ರಶಂಸನೀಯವಾಗಿದೆ ಎಂದರು.

ಉದ್ಯಮಿ ಶಶಿಧರ ಶೆಟ್ಟಿ ಬರೋಡ ಅತಿಥಿಯಾಗಿ ಭಾಗವಹಿಸಿ ಶುಭಕೋರಿದರು.ಇದೇ ವೇಳೆ ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿಗಳಾದ ನರಸಿಂಹಮೂರ್ತಿ, ಶ್ರೀರಾಮ ವಿದ್ಯಾ ಕೇಂದ್ರದ ಅಧ್ಯಕ್ಷರಾದ ನಾರಾಯಣ ಸೋಮಯಾಜಿ ಉಪಸ್ಥಿತರಿದ್ದರು.

ಶ್ರೀ ರಾಮ ವಿದ್ಯಾ ಕೇಂದ್ರದ ಸಂಸ್ಥಾಪಕರಾದ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರು ಪ್ರಸ್ತಾವನೆಗೈದು, ಸ್ವಾಗತಿಸಿದರು.
ಶ್ರೀ ರಾಮ ವಿದ್ಯಾಕೇಂದ್ರದ ಕಾರ್ಯನಿರ್ವಾಹಣಧಿಕಾರಿ ಕೃಷ್ಣ ಪ್ರಸಾದ್ ಕಾಯರ್ ಕಟ್ಟೆ ವಂದಿಸಿದರು.
ಇದಕ್ಕು ಮನ್ನ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಶ್ರೀ ರಾಮನಿಗೆ ಆರತಿ ಬೆಳಗಿದರು.ಸ್ವಾಮೀಜಿಯನ್ನು ಪೂರ್ಣ ಕುಂಭದೊಂದಿಗೆ ಸ್ವಾಗತಿಸಲಾಯಿತು. ಗಣಪತಿ ಸ್ತುತಿ ಮತ್ತು ಗಾಯತ್ರಿ ಮಂತ್ರದೊಂದಿಗೆ ಸ್ವಾಮೀಜಿಗಳು ವಿದ್ಯಾರ್ಥಿಗಳಿಗೆ ಮೊದಲ ಪಾಠವನ್ನು ಮಾಡಿದರು.
ಶ್ರೀ ರಾಮ ವಿದ್ಯಾ ಕೇಂದ್ರದ ಮಾತೃ ಮಂಡಳಿಯ ಸದಸ್ಯರು, ವಿದ್ಯಾ ಕೇಂದ್ರದ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.



