ಬಂಟ್ವಾಳ: ತಾಲೂಕಿನ ಇರಕೋಡಿಯಲ್ಲಿ ಹತ್ಯೆಯಾದ ಹತ್ಯೆಗೀಡಾದ ಕೊಳತ್ತಮಜಲು ನಿವಾಸಿ ಅಬ್ದುಲ್ ರಹಿಮಾನ್ ಮನೆಗೆ ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್ ಅವರು ಬುಧವಾರ ಭೇಟಿ ನೀಡಿದರು.
ರಹಿಮಾನ್ ತಂದೆ ತಾಯಿ ಮತ್ತು ಕುಟುಂಬಸ್ಥರೊಂದಿಗೆ ಮಾತನಾಡಿದ ಅವರು ಸಾಂತ್ವನ ಹೇಳಿದರು.

ಸ್ಥಳೀಯ ಮುಖಂಡರೊಂದಿಗೆ ಸಂವಾದ ನಡೆಸಿದ ಅವರು ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರಗಿಸಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ ಎಂದು ಹೇಳಿದರು.ಹಾಗೆಯೇ ಗಾಯಾಳು ಶಾಫಿಯವರನ್ನು ಭೇಟಿಯಾದ ಸ್ಪೀಕರ್ ಖಾದರ್ ಅವರಿಂದ ಘಟನೆಯ ಬಗ್ಗೆ ಮಾಹಿತಿ ಪಡೆದರು.ಈ ಸಂದರ್ಭ ಗಾಯಾಳು ಶಾಫಿ ಪ್ರಕರಣದ ತನಿಖೆಯನ್ನು ಎಸ್ ಐ ಟಿಯಿಂದ ತನಿಖೆಗೊಳಪಡಿಸುವಂತೆ ಮನವಿ ಮಾಡಿದರು.

ಕಾಂಗ್ರೇಸ್ ಪಕ್ಷದ ಮುಖಂಡರಾದ ಜಿ.ಎ.ಬಾವ,ಯು.ಕೆ.ಮೋನು, ಚಂದ್ರಪ್ರಕಾಶ್ ಶೆಟ್ಟಿ, ಅಬ್ಬಾಸ್ ಆಲಿ,ಚಂದ್ರಶೇಖರ ಭಂಡಾರಿ,ಪ್ರಶಾಂತ್ ಕಾಜವ ಹಾಗೂ ಪಕ್ಷದ ಸ್ಥಳೀಯ ಮುಖಂಡರು ಹಾಜರಿದ್ದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಪೀಕರ್ ಖಾದರ್ ಅವರು ಮೃತರ ಮನೆಯವರ ಹಾಗೂ ಗಾಯಾಳು ಶಾಫಿಯವರ ಬೇಡಿಕೆಯನ್ನು ಸರಕಾರದ,ಗೃಹ ಸಚಿವರ ಗಮನಕ್ಕೆ ತರಲಾಗವುದು,ಈ ಪ್ರಕರಣವನ್ನು ನ್ಯಾಯಾಂಗ ತನಿಖೆ ನಡೆಸುವ ನಿಟ್ಟಿನಲ್ಲು ಪ್ರಯತ್ನಿಸಲಾಗುವುದು ಎಂದು ಭರವಸೆಯಿತ್ತರು.
ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು,ಮನೆಮಂದಿ ಹಾಗೂ ಗ್ರಾಮದಲ್ಲಿ ಪರಸ್ಪರ ನಂಬಿಕೆ,ವಿಶ್ವಾಸ ಮೂಡಿಸುವ ಕೆಲಸ ಆಗಬೇಕಾಗಿದೆ ಎಂದರು.
