ಬಂಟ್ವಾಳ: ಯಕ್ಷಧ್ರುವ ಪಟ್ಲ ಫೌಂಡೇಶನ್ ಬಂಟ್ವಾಳ ಘಟಕದ ಪದಾಧಿಕಾರಿಗಳ  ಸಭೆಯು ಅಧ್ಯಕ್ಷರಾದ  ಚಂದ್ರಹಾಸ. ಡಿ. ಶೆಟ್ಟಿ ರಂಗೋಲಿ ಅವರ ಅಧ್ಯಕ್ಷತೆಯಲ್ಲಿ ಬಿ.ಸಿ. ರೋಡಿನ ಹೋಟೆಲ್ ರಂಗೋಲಿ ಸಭಾಂಗಣದಲ್ಲಿ ನಡೆಯಿತು.


ಬಂಟ್ವಾಳ ಘಟಕದ ನೂತನ ಅಧ್ಯಕ್ಷರಾಗಿ ದಿವಾಕರ ಶೆಟ್ಟಿ ಪರಾರಿ ಗುತ್ತು ಅವರು ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಜಗನ್ನಾಥ ಚೌಟ ಬದಿಗುಡ್ಡೆ,ಸಂಚಾಲಕರಾಗಿ ಭುವನೇಶ್ ಪಚ್ಚಿನಡ್ಕಾ aವರು ಅಯ್ಕೆಯಾಗಿದ್ದು,
ಪ್ರಧಾನ ಕಾರ್ಯದರ್ಶಿಯಾಗಿ ಬಿ. ದೇವದಾಸ ಶೆಟ್ಟಿ ಅವರು ಪುನರಾಯ್ಕೆಯಾಗಿದ್ದಾರೆ.


ಜತೆ ಕಾರ್ಯದರ್ಶಿಯಾಗಿ ಮೋಹನ ದಾಸ್ ಕೊಟ್ಟಾರಿ,ಉಪಾಧ್ಯಕ್ಷರಾಗಿ ಚಿತ್ತರಂಜನ್ ಶೆಟ್ಟಿ ಬೊಂಡಾಲ,ಜಯಪ್ರಕಾಶ್ ಜಕ್ರಿಬೆಟ್ಟು,ಸತೀಶ್ ಶೆಟ್ಟಿ ಮೊಡಂಕಾಪು,ಕೋಶಾಧಿಕಾರಿಯಾಗಿ ಶಂಕರ ಶೆಟ್ಟಿ ಪರಾರಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.


ಗೌರವ ಸಲಹೆ ಗಾರರಾಗಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಮಾಜಿ ಸಚಿವ ಬಿ. ರಮಾನಾಥ ರೈ,ಮಾಜಿ ಶಾಸಕರಾದ ಎ. ರುಕ್ಮಯ ಪೂಜಾರಿ, ಕೆ. ಪದ್ಮನಾಭ ಕೊಟ್ಟಾರಿ,ಚಂದ್ರಹಾಸ್. ಡಿ. ಶೆಟ್ಟಿ ರಂಗೋಲಿ, ಸತೀಶ್ ಶೆಟ್ಟಿ ಪಟ್ಲ, ಸದಾನಂದ. ಡಿ. ಶೆಟ್ಟಿ ರಂಗೋಲಿ,  ಸಂಕಪ್ಪ ಶೆಟ್ಟಿ ಸಂಚಯಗಿರಿ, ಸೇಸಪ್ಪ ಮಾಸ್ಟರ್ ಅವರು ಆಯ್ಕೆಯಾಗಿದ್ದಾರೆ.


ಪ್ರಮುಖರಾದ ಜಗನ್ನಾಥ ಚೌಟ ಬದಿಗುಡ್ಡೆ,  ಸದಾನಂದ ಶೆಟ್ಟಿ ರಂಗೋಲಿ, ಸಂಕಪ್ಪ ಶೆಟ್ಟಿ ಸಂಚಯಗಿರಿ, ಸೇಸಪ್ಪ ಮಾಸ್ಟರ್, ಸಂಜೀವ ಶೆಟ್ಟಿ ಬೋಳಂತೂರು, ಚಿತ್ತರಂಜನ್ ಶೆಟ್ಟಿ ಬೊಂಡಾಲ, ಜಯಪ್ರಕಾಶ್ ಜಕ್ರಿಬೆಟ್ಟು, ದೇವದಾಸ್ ಶೆಟ್ಟಿ, ಮೋಹನ್ ದಾಸ್ ಕೊಟ್ಟಾರಿ, ಶಂಕರ ಶೆಟ್ಟಿ ಪರಾರಿಗುತ್ತು, ದಿವಾಕರ ಶೆಟ್ಟಿ ಪರಾರಿಗುತ್ತು, ಸತೀಶ್ ಶೆಟ್ಟಿ ಮೊಡಂಕಾಪು ಸಭೆಯಲ್ಲಿ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *