ಕಲ್ಲಡ್ಕ: ವಿಶ್ವ ಪರಿಸರ ದಿನಾಚರಣೆ
ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಮತ್ತು ಕಜೆ ಶ್ರೀರಾಮ ಭಜನಾ ಮಂದಿರ ಇದರ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಕಜೆ ಶ್ರೀರಾಮ ಭಜನಾ ಮಂದಿರ ವಠಾರದಲ್ಲಿ ಆಚರಿಸಲಾಯಿತು.

ಬಂಟ್ವಾಳ ವಲಯ ಅರಣ್ಯಾಧಿಕಾರಿಗಳ ಜೊತೆ ವಿಶೇಷವಾಗಿ ಜೂನ್ ತಿಂಗಳ ಹುಟ್ಟುಹಬ್ಬ ಆಚರಿಸುತ್ತಿರುವ ವಿದ್ಯಾರ್ಥಿಗಳು ಹಾಗೂ “ಅವನಿ” ವಿಜ್ಞಾನ ಸಂಘದ ವತಿಯಿಂದ ಗಿಡಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.


ಬಂಟ್ವಾಳ ವಲಯ ಅರಣ್ಯಾಧಿಕಾರಿ ಸುನಿಲ್ ಡಿ ಸೋಜಾ, ಗಸ್ತು ಅರಣ್ಯಾಧಿಕಾರಿ ರಾಘವೇಂದ್ರ, ಉಪವಲಯ ಅರಣ್ಯಾಧಿಕಾರಿ ರವಿರಾಜ್ , ಕಜೆ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷರಾದ ಶಿವರಾಮ್ ರೈ ಮೇರಾವು, ಪ್ರಮುಖರಾದ ಗಿರಿಯಪ್ಪ ಗೌಡ ಪಂಜಾಲು, ಜಯಪ್ರಕಾಶ್ ರೈ, ಪುರುಷೋತ್ತಮ ಪೂಜಾರಿ ಪಡೀಲ್ , ಶಂಕರ ನಾಯ್ಕ ನಿರ್ಬೈಲು , ಹರೀಶ್ ಕಜೆ, ಸತೀಶ್, ಪುಷ್ಪರಾಜ್ , ರಮೇಶ್, ಗಣೇಶ್ , ಶ್ರೀಮತಿ ರಂಜನಿ , ಸುಮಿತ್ರ, ಶಶಿಕಲಾ ಹಾಗೂ ಶಾಲೆಯ ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು, ಸಹ ಮುಖ್ಯೋಪಾಧ್ಯಾಯರಾದ ಸುಮಂತ್ ಆಳ್ವ, ವಿಜ್ಞಾನ ಅಧ್ಯಾಪಕರಾದ ಜ್ಯೋತಿಶ್ರೀ, ಬಾಲಕೃಷ್ಣ, ಗುಣಶ್ರೀ, ವಾಣಿಶ್ರೀ ಉಪಸ್ಥಿತರಿದ್ದರು. ಅಧ್ಯಾಪಕರಾದ ಅನ್ನಪೂರ್ಣ ಪರಿಸರ ದಿನದ ಮಹತ್ವವನ್ನು ತಿಳಿಸಿದರು.



