ಬಂಟ್ವಾಳ: ಮಾರ್ನಬೈಲು ಅಯ್ಯಪ್ಪ  ಸ್ವಾಮಿ ಮಂದಿರದ ಅಭಿವೃದ್ಧಿ ಮತ್ತು ಭೂಮಿ ಖರೀದಿ ಸಂಕಲ್ಪ ಸಿದ್ಧಿಗಾಗಿ ೧೮ ಗುರುವಾರ ಪರ್ಯಂತ ನಡೆಯುತ್ತಿರುವ ಪಂಚಾರತಿ ಸೇವೆಯ ೧೦ನೇ ಗುರುವಾರದ ಪಂಚಾರತಿ ಸೇವೆ ನಡೆಯಿತು.

 ಪಂಚ ಅಭ್ಯಾಗತರಾಗಿ ತುಳುಕೂಟ ಬಂಟ್ವಾಳದ ಉಪಾಧ್ಯಕ್ಷ ಸೀತಾರಾಮ ಶೆಟ್ಟಿ ಕಾಂತಾಡಿಗುತ್ತು, ಪ್ರಗತಿಪರ ಕೃಷಿಕ ರಮೇಶ್ ನಾಯ್ಕ್ ಕೋಮಾಲಿ, ಮಂಜಲ್ಪಾದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಮನೋಜ್ ಆಳ್ವ ದಲಂದಿಲ, ಉದ್ಯಮಿಗಳಾದ ಮಾಧವ ಶೆಣೈ ಬೋಳಂಗಡಿ, ಲಕ್ಷ÷್ಮಣ್ ಗಟ್ಟಿ ನಂದಾವರ ಪಂಚಾರತಿ ಬೆಳಗಿ ಶುಭ ಹಾರೈಸಿದರು.

ಅಯ್ಯಪ್ಪ ಮಂದಿರದ ಪ್ರಧಾನ ಅರ್ಚಕರಾದ  ಸಂಜೀವ ಗುರುಸ್ವಾಮಿ ಅಮ್ಟೂರು ಮತ್ತು ಕೃಷ್ಣ ಗುರುಸ್ವಾಮಿ ಮಾರ್ನಬೈಲು, ಅಯ್ಯಪ್ಪ ಸ್ವಾಮಿ ಮಂದಿರದ ಆಡಳಿತ ಟ್ರಸ್ಟ್ ಅಧ್ಯಕ್ಷ ಪುರುಷೋತ್ತಮ ಪೂಜಾರಿ ನಾಗನವಳಚ್ಚಿಲು, ಪ್ರಧಾನ ಕಾರ್ಯದರ್ಶಿ ಯಶವಂತ ಕೆ. ಪುತ್ತೂರು, ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ಅಶೋಕ್ ಗಟ್ಟಿ ನಂದಾವರ, ಕೋಶಾಧಿಕಾರಿ ರಂಜಿತ್ ರಾವ್ ಬಟ್ಟಡ್ಕ, ಶಬರಿ ಮಾತೃ ಮಂಡಳಿ ಅಧ್ಯಕ್ಷೆ ಗಾಯತ್ರಿ ಆರ್. ಕಂಬಳಿ, ಪ್ರಧಾನ ಕಾರ್ಯದರ್ಶಿ ತಾರಾ ಭಾಸ್ಕರ್ ಕೊಲ್ಲುಕೋಡಿ, ಪ್ರಮುಖ ಪದಾಧಿಕಾರಿಗಳಾದ ಯಾದವ ಬಂಗೇರ ಕಂಚಿಲ, ಗಣೇಶ್ ಗುಡ್ಡೆಯಂಗಡಿ, ಯೋಗೀಶ್ ಗಟ್ಟಿ ನಂದಾವರ, ವಿಶ್ವನಾಥ ಆಚಾರ್ಯ ಮಾರ್ನಬೈಲು, ನಿತಿನ್ ಕುಮಾರ್ ಮಾರ್ನಬೈಲು, ನಾಗೇಶ್ ಕುಲಾಲ್ ಕೋಮಾಲಿ, ಜಯಾನಂದ ಪಾಡಿ, ವಸಂತ ಪೂಜಾರಿ ನಾಗನವಳಚ್ಚಿಲು, ಗಣೇಶ್ ದೇವಾಡಿಗ ದಾಸರಗುಡ್ಡೆ, ಉಮೇಶ್ ಆಚಾರ್ಯ ದಾಸರಗುಡ್ಡೆ, ಶ್ರೀನಿವಾಸ ನಾಯ್ಕ ದಾಸರಗುಡ್ಡೆ, ಜಗದೀಶ್ ಕೆ. ಖಂಡಿಗ, ಗೋಪಿನಾಥ ನಾಯ್ಕ ದಾಸರಗುಡ್ಡೆ, ಶಕುಂತಲಾ ಅಶೋಕ್ ಗಟ್ಟಿ ಮಾರ್ನಬೈಲು, ಪ್ರಮಿಳಾ ಗಣೇಶ್ ದಾಸರಗುಡ್ಡೆ, ರಕ್ಷಿತಾ ರಂಜಿತ್ ರಾವ್, ಸರಸ್ವತಿ ಎಂ. ನಾಯ್ಕ್ ಖಂಡಿಗ, ಜಯಶ್ರೀ ಅಶೋಕ್ ಗಟ್ಟಿ ನಂದಾವರ, ಸರೋಜ ವಿಶ್ವನಾಥ ಆಚಾರ್ಯ, ಸುಮಿತ್ರಾ ನವೀನ್ ಪೂಜಾರಿ ಕಂದೂರು, ಸಂತೋಷ್ ಆಚಾರ್ಯ ನಾಗನವಳಚ್ಚಿಲು, ಅಶ್ವಿನ್ ಮಾರ್ನಬೈಲು, ಸುಧೀರ್ ನಾಯ್ಕ ದಾಸರಗುಡ್ಡೆ, ಮಾಧವ ನಾಯ್ಕ್ ದಾಸರಗುಡ್ಡೆ, ಅಶೋಕ್ ಗಟ್ಟಿ ಮಾರ್ನಬೈಲು, ಗೋಪಾಲ ಪೂಜಾರಿ, ದಯಾನಂದ ಬಿ.ಎಂ. ಮತ್ತಿತರರು ಉಪಸ್ಥಿತರಿದ್ದರು.

ಭಜನಾ ಮಂಡಳಿ ಅಧ್ಯಕ್ಷ ಸುರೇಶ್ ಕುಲಾಲ್ ಕಲ್ಲಾಡಿಗೋಳಿ ಸ್ವಾಗತಿಸಿ, ಪ್ರಸ್ತಾವನೆಗೈದರು.

By suddi9

Leave a Reply

Your email address will not be published. Required fields are marked *