ದುರ್ಗಾಪ್ರಸಾದ್ ಇಂಜಿನಿಯರಿಂಗ್ ವರ್ಕ್ಸ್ ಶಾಪ್ ಮಾಲಕ ಬಾಬು ಸಪಳಿಗ ನಿಧನ
ಬಂಟ್ವಾಳ: ತಾಲೂಕಿನ ತುಂಬೆ ರಾಮಲ್ ಕಟ್ಟೆ ವಳವುರು ನಿವಾಸಿ ಬಾಬು ಸಪಳಿಗ (76) ಅಲ್ಪ ಕಾಲದ ಅಸೌಖ್ಯದಿಂದ ಜೂ.4ರಂದು ಬುಧವಾರ ನಿಧನಹೊಂದಿದರು .

ಶ್ರೀಯುತರು ಸುಮಾರು 50 ವರ್ಷಗಳಿಂದ ಬಿಸಿರೋಡ್ ಹ್ರದಯ ಭಾಗದಲ್ಲಿ ದುರ್ಗಾಪ್ರಸಾದ್ ಇಂಜಿನಿಯರಿಂಗ್ ವರ್ಕ್ಸ್ ಶಾಪ್ ನಡೆಸಿ ಕೊಂಡುಬರುತ್ತಿದ್ದು ಬಿಸಿರೋಡು ಪರಿಸರದಲ್ಲಿ ಎಲ್ಲರೊಂದಿಗೆ ಪ್ರೀತ ವಿಶ್ವಾಸದಲ್ಲಿ ಇದ್ದು ಎಲ್ಲರ ಮೆಚ್ಚುಗೆಯ ಬಾಬಣ್ಣರಾಗಿ ಗುರುತಿಸಿಕೊಂಡಿದ್ದರು. ಮೃತರು ಪತ್ನಿ ಹಾಗೂ ನಾಲ್ವರು ಪುತ್ರಿಯರನ್ನು ಇಬ್ಬರು ಗಂಡು ಮಕ್ಕಳು ಮತ್ತುಸೊಸೆ ಅಳಿಯಂದಿರನ್ನು ಮೊಮ್ಮಕ್ಕಳನ್ನು ಅಗಲಿದ್ದಾರೆ. ಮೃತರ ಅಂತ್ಯೆಕ್ರಿಯೆಯಲ್ಲಿ ಅವರ ಹಿತ್ಯಷಿಗಳು ಬಂದು ಮಿತ್ರರು ಭಾಗವಹಿಸಿದ್ದರು.



