ಬಂಟ್ವಾಳ: ಬಂಟ್ವಾಳ ತಾಲೂಕು ಗಾಣಿಗರ ಸೇವಾ ಸಂಘ(ರಿ.) ಪಾಣೆಮಂಗಳೂರು ಬಂಟ್ವಾಳ ದ.ಕ ಇದರ ನೂತನ ಅಧ್ಯಕ್ಷರಾಗಿ ೨೦೨೫-೨೮ರ ಅವಧಿಗೆ ಕೃಷ್ಣಪ್ಪ ಗಾಣಿಗ ಮಾಣಿಮಜಲು, ನರಿಕೊಂಬು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಪಾಣೆಮಂಗಳೂರು ಸುಮಂಗಲ ಕಲ್ಯಾಣ ಮಂಟಪದಲ್ಲಿ ಭಾನುವಾರ ನೂತನ ಗೌರವ ಅಧ್ಯಕ್ಷ ನರ್ಸಪ್ಪ ಅಮೀನ್ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆಮಾಡಲಾಗಿದೆ.
ಪ್ರಧಾನ ಕಾರ್ಯದರ್ಶಿಯಾಗಿ ಬಾಲಕೃಷ್ಣ ಸೆರ್ಕಳ, ಕೋಶಾಧಿಕಾರಿ ವೇದವ ಗಾಣಿಗ, ಜೊತೆ ಕಾರ್ಯದರ್ಶಿಗಳಾಗಿ ಶರತ್ ಕುಮಾರ್, ಚರಣ್‌ರಾಜ್ ಮೆಲ್ಕಾರ್, ಲೆಕ್ಕಪರಿಶೋಧಕರಾಗಿ ವಸಂತ ಪಿ..
ಗೌರವ ಸಲಹೆಗಾರರಾಗಿ ಬಾಲಕೃಷ್ಣ ಮಾಸ್ಟರ್, ನಾಗೇಶ ಎನ್., ಉಪಾಧ್ಯಕ್ಷರಾಗಿ ಕೃಷ್ಣಪ್ಪ ಕೆಮನಾಜೆ ಇಡ್ಕಿದು, ಭುವನೇಶ್ವರ ಮೊಗರ್ನಾಡು, ಲತಾ ಮೆಲ್ಕಾರ್, ಲಿಂಗಪ್ಪ ಕರ್ಕೇರ ಕಲ್ಲಡ್ಕ.
ಸಂಘಟನಾ ಕಾರ್ಯದರ್ಶಿಗಳಾಗಿ ಶ್ರೀಕಾಂತ ನೆಲ್ಯಡ್ಕ ಅಂತರ, ಪದ್ಮನಾಭ ಇಡ್ಕಿದು, ಪದ್ಮನಾಭ ಜಕ್ರಿಬೆಟ್ಟು, ಸಂದೀಪ್ ಕುಮಾರ್, ಈಶ್ವರ ಮೆಲ್ಕಾರ್, ರಾಮಣ್ಣ ಸಪಲ್ಯ ಬಡಗುಂಡಿ, ಸದಾಶಿವ ಬರಿಮಾರು ಆಯ್ಕೆಯಾಗಿದ್ದಾರೆ.
