ಬಂಟ್ವಾಳ: ಬಹುನಿರೀಕ್ಷೆಯ ಕಲ್ಲಡ್ಕ ಮೇಲ್ಸ್ ತುವೆಯಲ್ಲಿ ವಾಹನ ಸಂಚಾರಕ್ಕೆ ತೆರೆದುಕೊಂಡಿದ್ದು,ಕಲ್ಲಡ್ಕ ಶ್ರೀರಾಮ ವಿದ್ಯಾಸಂಸ್ಥೆಗಳ ಸಂಸ್ಥಾಪಕರಾದ ಕಲ್ಲಡ್ಕ ಡಾ.ಪ್ರಭಾಕರ್ ಭಟ್ ಅವರ ನೇತೃತ್ವದಲ್ಲಿ ಕಲ್ಲಡ್ಕದ ನಾಗರಿಕರು ಪ್ಲೈ ಓವರ್ ಸಂಚಾರವನ್ನು ಸ್ವಾಗತಿಸಿದರು.

ಇದಕ್ಕು ಮೊದಲು ಪೂರ್ಲಿಪಾಡಿ ಬಳಿ ಡಾ.ಭಟ್ ಅವರು ಶ್ರೀ ರಾಮನ ಭಾವಚಿತ್ರಕ್ಕೆ ಆರತಿ ಬೆಳಗಿ, ಬಳಿಕ ತೆಂಗಿನಕಾಯಿ ಒಡೆದು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.ಬಳಿಕ ಮಾತನಾಡಿದ ಅವರು ರಾಜ್ಯದಲ್ಲೇ ಅತೀ ಉದ್ಧದ ಸಂಪರ್ಕ ಸೇತು ಕಲ್ಲಡ್ಕದಲ್ಲಿ ನೀರ್ಮಾಣಗೊಂಡಿದ್ದು,ಬಹುಕಾಲದ ಕನಸು ಈಗ ಈಡೇರಿದೆ. ಗುತ್ತಿಗೆ ಸಂಸ್ಥೆಯಾದ ಕೆ.ಎನ್.ಆರ್.ಅಧಿಕಾರಿಗಳು ಕೊಟ್ಟ ಮಾತಿನಂತೆ ವಾಹನಗಳ ಸಂಚಾರಕ್ಜೆಅನುವು ಮಾಡಿಕೊಟ್ಟಿರುವುದು ಅಭಿನಂದನೀಯವಾಗಿದೆ ಎಂದರು.

ಕಾಮಗಾರಿಯಲ್ಲು ಗುಣಮಟ್ಟವನ್ನು ಕಾಯ್ದುಕೊಳ್ಳಲಾಗಿದೆ. ಕಲ್ಲಡ್ಕ ಶ್ರೀರಾಮ ಮೇಲ್ಸೆತುವೆ ಸಂಚಾರಕ್ಕೆ ಮುಕ್ತಗೊಳಿಸುವಲ್ಲಿ ಕಾರಣಿಕರ್ತರಾದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ನಾಗರಿಕರ ಪರವಾಗಿ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರುಗಳಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಬಿಜೆಪಿ ಬಂಟ್ವಾಳ ಮಂಡಲ ಅಧ್ಯಕ್ಷ ಚೆನ್ನಪ್ಪ ಆರ್.ಕೋಟ್ಯಾನ್, ಸ್ಥಳೀಯ ಪ್ರಮುಖರಾದ ವಿಠಲ ನಾಯ್ಕ, ಹಿರಣ್ಮಯಿ, ಯತೀನ್ ಪೂಜಾರಿ, ಜನಾರ್ಧನ ಬೊಂಡಾಲ, ಶಂಭು ಕೋರ್ಯ,ಲೋಕಾನಾಂದ, ಸುರೇಶ್ ಶೆಟ್ಟಿ, ಚಂದ್ರ ಶೇಖರ ಟೈಲರ್, ಪೂವಪ್ಪ, ಚಿತ್ತರಂಜನ್, ಸುಜಿತ್ ಕೊಟ್ಟಾರಿ,ಸತೀಶ್ ಕುಮಾರ್ ಶಿವಗಿರಿ,ತಿರುಮಲೇಶ್ ಭಟ್,ಗೋಪಾಲ ಶೆಣೈ,ನಾಗೇಶ್ ಕಲ್ಲಡ್ಕ,ಮಾದವ ಸಾಲ್ಯಾನ್,ಸನತ್ ರವಿಕುಮಾರ್, ಕೂಸಪ್ಪ,ಗುತ್ತಿಗೆ ಸಂಸ್ಥೆಯ ಪಿ.ಎಮ್.ಮಹೇಂದ್ರ ಸಿಂಗ್, ಎ.ಜಿ.ಎಮ್ ರೋಹಿತ್ ರೆಡ್ಡಿ, ಡಿ.ಎಮ್ ರಘನಾಥ ರೆಡ್ಡಿ, ಡೆಪ್ಯುಟಿ ಪ್ರಾಜೆಕ್ಟ್ ಮ್ಯಾನೇಜರ್ ಅಯ್ಯಪ್ಪ ಸ್ವಾಮಿ, , ಮತ್ತಿತರರು ಉಪಸ್ಥಿತರಿದ್ದರು.
ಇನ್ನು ಮುಂದೆ ಮಾಣಿ ಕಡೆಯಿಂದ ಬಿ.ಸಿ.ರೋಡಿನತ್ತ ಸಂಚರಿಸುವ ವಾಹನಗಳು ಪ್ಲೈ ಓವರ್ ಮೂಲಕ ತೆರಳಲಿದೆ
