ಬಂಟ್ವಾಳ : ಬಂಟ್ಬಾಳ ತಾಲೂಕು ಕುಲಾಲ ಸುಧಾರಕ ಸಂಘ ಇದರ 45ನೇ ವಾರ್ಷಿಕ ಮಹಾಸಭೆಯು  ಪೊಸಳ್ಳಿ ಕುಲಾಲ ಸಮುದಾಯ ಭವನದಲ್ಲಿ ಆದಿತ್ಯವಾರ ನಡೆಯಿತು.ಸಂಘದ ಅಧ್ಯಕ್ಷ ಕೃಷ್ಣಪ್ಪ ಬಿ. ಜೋಗೊಟ್ಟು ಸಭೆಯನ್ನು ಉದ್ಘಾಟಿಸಿ,ಸಭಾಧ್ಯಕ್ಷತೆ ವಹಿಸಿದ್ದರು.


ಪ್ರಧಾನ ಕಾರ್ಯದರ್ಶಿ ರಮೇಶ್ ಸಾಲ್ಯಾನ್ ಸಂಚಯಗಿರಿ ವಾರ್ಷಿಕ ವರದಿ ವಾಚಿಸಿದರು.ಕೋಶಾಧಿಕಾರಿ ಸೋಮನಾಥ ಸಾಲ್ಯಾನ್ ಲೆಕ್ಕಪತ್ರ ಮಂಡಿಸಿದರು.  ವೇದಿಕೆಯಲ್ಲಿ ಕಟ್ಟಡ ಸಮಿತಿ ಕಾರ್ಯದರ್ಶಿ ಸುಕುಮಾರ್ ಬಂಟ್ವಾಳ, ಸೇವಾದಳಪತಿ ಗಣೇಶ್ ಕುಲಾಲ್ ಬೆದ್ರಗುಡ್ಡೆ,  ಮಹಿಳಾ ಘಟಕದ ಅಧ್ಯಕ್ಷೆ ಮಾಲತಿ ಮಚ್ಚೇಂದ್ರ ಉಪಸ್ಥಿತರಿದ್ದರು. ಸದಸ್ಯೆಯರಾದ ಯಶೋಧ,  ನಳಿನಿ ರಮೇಶ್ ಕೈಕುಂಜೆ ಮತ್ತು ಯೋಗಿತಾ ಪ್ರಾರ್ಥಿಸಿದರು.


ಸಂಘದ ಉಪಾಧ್ಯಕ್ಷೆ ಜಲಜಾಕ್ಷಿ ಸ್ವಾಗತಿಸಿದರು.ಮೀನಾಕ್ಷಿ ಪದ್ಮನಾಭ ವಂದಿಸಿದರು. 

By suddi9

Leave a Reply

Your email address will not be published. Required fields are marked *