ಬಂಟ್ವಾಳ:ಮಾಣಿ ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷ ಬಾಬು ಶೆಟ್ಟಿ ತೋಟ ಅವರ ಸಕಾಲಿಕ ಸಮಯಪ್ರಜ್ಞೆಯಿಂದಾಗಿ ಅನಾಹುತವೊಂದನ್ನು ತಪ್ಪಿಸಿದ ಹಿನ್ನಲೆಯಲ್ಲಿ ಅವರನ್ನು ರೈಲ್ವೆ ಇಲಾಖೆಯ ಅಧಿಕಾರಿಗಳು ಸನ್ಮಾನಿಸಿ ಅಭಿನಂದಿಸಿದರು.

ಎರಡು ದಿನಗಳ ಹಿಂದೆ ಗಾಳಿ,ಮಳೆಗೆ ಮಾಣಿ ಸಮೀಪದ ಕೊಡಾಜೆ ಎಂಬಲ್ಲಿ ರೈಲ್ವೇ ಹಳಿ ಮೇಲೆ ಭಾರೀಗಾತ್ರದ ಮರಬಿದ್ದು ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆಯಿತ್ತು.ಕಾಲು ದಾರಿ ಮೂಲಕ ಮಾಣಿಗೆ ತೆರಳುತ್ತಿದ್ದ ಬಾಬುಶೆಟ್ಟಿ ಅವರು ಇದನ್ನು ಗಮನಿಸಿ ತಕ್ಷಣ ಪುತ್ತೂರು
ರೈಲ್ವೆ ಇಲಾಖೆಗೆ ಕರೆ ಮಾಡಿ ರೈಲು ಸಂಚಾರದ ವೇಳೆ ಅಗಬಹುದಾದ ಅಪಾಯದ ಬಗ್ಗೆ ಮಾಹಿತಿ ನೀಡಿದರು. ಕೂಡಲೇ ಕಾರ್ಯೊಪ್ರವೃತ್ತರಾದ ಪುತ್ತೂರು ರೈಲ್ವೆ ಇಲಾಖೆಯ ಅಧಿಕಾರಿಗಳು ಬಿ.ಸಿ.ರೋಡು ಹಾಗೂ ಪುತ್ತೂರು ಕಡೆಯಿಂದ ಸಂಚರಿಸುವ ರೈಲುಗಳನ್ನು ತಡೆ ಹಿಡಿದರು.
ಬಳಿಕ ಸ್ಥಳಕ್ಕೆ ಧಾವಿಸಿ ರಯುಲತವೇ ಹಳಿಮೇಲೆ ಬಿದ್ದಿರುವ ಮರಗಳನ್ನು ತೆರವುಗೊಳಿಸಿ ರೈಲುಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈಸಂದರ್ಭದಲ್ಲಿ ಕಾಮಗಾರಿ ಹಂತದಲ್ಲಿರುವ ರೈಲ್ವೇ ವಿದ್ಯುತ್ ಕಂಬಗಳು ಹಾಗೂ ತಂತಿಗಳು ಕೂಡ ಕಡಿದು ಬಿದ್ದಿದ್ದು,ರೈಲು ಸಂಚಾರದ ವೇಳೆ ದೊಡ್ಡ ಅನಾಹುತವೇ ಉಂಟಾಗುವ ಸಾಧ್ಯತೆ ಇತ್ತು.ಸಂಭವನೀಯ ಅನಾಹುತ ತಪ್ಪಿಸಿರುವ ಬಾಬು ಶೆಟ್ಟಿ ಅವರನ್ನು
ಪುತ್ತೂರು ಕಚೇರಿಗೆ ಕರೆಸಿ ಸನ್ಮಾನಿಸಿ ಈವರ ಸಮಯಪ್ರಜ್ಞೆಗೆ ಅಭಿನಂದಿಸಿದರು.
