ಬಂಟ್ವಾಳ: ತಾಲೂಕಿನ ಕಾವಳಮೂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ನೂತನ ಅಧ್ಯಕ್ಷರಾಗಿ ಪದ್ಮಶೇಖರ ಜೈನ್ ಅವರು ಅವಿರೋಧವಾಗಿ ಪುನರಾಯ್ಕೆ ಆಗಿದ್ದಾರೆ. ಉಪಾಧ್ಯಕ್ಷರಾಗಿ ದಯಾನಂದ ಶೆಟ್ಟಿ ಅಮೈ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಿರ್ದೇಶಕರಾದ ವಿಶ್ವನಾಥ ಪೂಜಾರಿ, ಹೇಮಂತ ಕುಮಾರ್, ಸದಾನಂದ ಶೆಟ್ಟಿ, ಸರಸ್ವತಿ, ಕೆ.ಗಾಯತ್ರಿ ಅರುಣ್, ಉಮ್ಮಣ್ಣ,ಕೃಷ್ಣ ನಾಯ್ಕ್ ,ಚಂದ್ರಹಾಸ, ಪ್ರವೀಣ್ ಕುಮಾರ್, ಜನಾರ್ದನ ಉಪಸ್ಥಿತರಿದ್ದರು.
ಶುಕ್ರವಾರ ಸಂಘದ ಕಚೇರಿಯಲ್ಲಿ ಮಂಗಳೂರು ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಉಪನಿಬಂಧಕರಾದ ಜ್ಯೋತಿ ಡಿ. ಅವರು ಚುನಾವಣಾಧಿಕಾರಿಯಾಗಿ ನೂತನ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಿದರು. ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಸೀಮಾ ಬಾನು ಮತ್ತು ಸಿಬಂದಿಗಳು ಸಹಕರಿಸಿದರು
