ಕೈಕಂಬ: ನನ್ನ ಮಗ ರೌಡಿಯಲ್ಲ ನನ್ನ ಮಗ ಭಜರಂಗದಳದ ಕಾರ್ಯಕರ್ತ. ಸಮಾಜದ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ನನ್ನ ಮಗನ ಕೊಲೆ ಪ್ರಕರಣವನ್ನು ಸರಿಯಾಗಿ ತನಿಖೆ ನಡೆಸಲು ಈ ಸರಕಾರ ಅವಕಾಶ ನೀಡುವುದಿಲ್ಲ. ತನಿಖೆಯನ್ನು ಎನ್ ಐಎಗೆ ವಹಿಸಬೇಕು. ಐವತ್ತಕ್ಕೂಹೆಚ್ಚು ಜನರು ಸುತ್ತುವರಿದು ನನ್ನ ಮಗನಿಗೆ ಚಿತ್ರ ಹಿಂಸೆ ಕೊಟ್ಟು ಕೊಂದು ಹಾಕಿದ್ದಾರೆ. ನನ್ನ ಮಗನ ಸಾವು ವ್ಯರ್ಥವಾಗಲು ಬಿಡಬಾರದು. ಅವನ ರಕ್ತಕ್ಕೆ, ಸಾವಿಗೆ ನ್ಯಾಯ ಸಿಗಬೇಕು. ರಾಜ್ಯದ ಸರಕಾರ ಪಿಎಫ್ ಐ ಹೇಳಿದಂತೆ ಚಾರ್ಜ್ ಶೀಟ್ ತಯಾರಿಸುವ ಸಾಧ್ಯತೆ ಇದೆ ಎಂದು ಸುಹಾಸ್ ಶೆಟ್ಟಿ ತಾಯಿ ಸುಲೋಚನಾ ಎಂ. ಶೆಟ್ಟಿ ಆಗಗ್ರಹಿಸಿದ್ದಾರೆ.

ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಎನ್ ಐಎಗೆ ನೀಡಬೇಕು ಎಂದು ಅಗ್ರಹಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಭಾನುವಾರ ಹಮ್ಮಿಕೊಂಡಿದ್ದ “ಬಜಪೆ ಚಲೋ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮುಖ್ಯ ಭಾಷಣಕಾರರಾಗಿದ ವಾಗ್ಮಿ ಶ್ರೀಕಾಂತ್ ಶೆಟ್ಟಿ ಮಾತನಾಡಿ, ಟೇಬಲ್ ಗುದ್ದಿ ಸುಹಾಸ್ ಶೆಟ್ಟಿ ಮನೆಗೆ ಹೋಗಬಾರದು ಎಂದು ಗ್ರಹ ಸಚಿವರಿಗೆ ಹಾಕಿದ ಧಮ್ಕಿಗೆ ಹೆದರಿ ಒಬ್ಬನೇ ಒಬ್ಬ ಕಾಂಗ್ರೆಸ್ ನಾಯಕ ಸುಹಾಸ್ ಮನೆಗೆ ಹೋಗಿಲ್ಲ ಇಂತಹ ಸರಕಾರ ಕೊಲೆ ಪ್ರಕರಣವನ್ನು ನಿಷ್ಪಕ್ಷಪಾತ ತನಿಖೆ ನಡೆಸಲು ಬಿಡುವುದಿಲ್ಲ. ಇಡೀ ಕಾಂಗ್ರೇಸ್ ಪಕ್ಷ ಬೆನ್ನು ಮೂಲೆ ಇಲ್ಲದೇ ಮತಾಂಧರ ಮುಂದೆ ಮಂಡಿಯೂರಿದೆ.ಮಳೆಯಿಂದ ಬಜಪೆಯ ಮಣ್ಣಿನಿಂದ ಸುಹಾಸ್ ಶೆಟ್ಟಿಯ ರಕ್ತದ ಕಲೆಗಳನ್ನು ಅಳಿಸಲು ಮಾತ್ರ ಸಾಧ್ಯ ನಮ್ಮ ಎದೆಯಲ್ಲಿ ಉರಿಯುವ ಸೇಡಿನ ಬೆಂಕಿಯನ್ನು ಆರಿಸಲು ಸಾಧ್ಯವಿಲ್ಲ. ಸುಹಾಸ್ ಶೆಟ್ಟಿ ಬಲಿದಾನಕ್ಕೆ ಉತ್ತರವನ್ನು ಎಲ್ಲಿ? ಹೇಗೆ? ಮತ್ತು ಅದು ನಿಮ್ಮದೇ ರೀತಿಯ ಭಾಷೆಯಲ್ಲಿ ಕೊಡಬೇಕು ಎಂಬುದನ್ನು ಹಿಂದೂ ಸಮಾಜ ತೀರ್ಮಾನ ಮಾಡುತ್ತದೆ.ಕೇಂದ್ರ ತನಿಖಾ ತಂಡದಿಂದ ತನಿಖೆಯಾದರೆ ಕೊಲೆಯ ಹಿಂದಿನ ಕಾಣದ ಕೈಗಳು ಯಾರು ಎಂದು ಗೊತ್ತಾಗಬಹುದು. ಯಾರನ್ನೂ ಲೂಟಿ ಮಾಡದ, ದರೋಡೆ ಮಾಡದ ಕೊಟ್ಟಿಗೆಗೆ ನುಗ್ಗಿ ಹಸುಗಳನ್ನು ಕಳವು ಮಾಡದ ಹೆಣ್ಮಕ್ಕಳನ್ನು ಅಪಹರಿಸಿ ಹತ್ಯೆ ಮಾಡದ ಕೇವಲ ಹಿಂದೂ ಸಮಾಜದ ಪರ ಪ್ರಚಾರ ಮಾಡಿದ ಹಿಂದೂ ಯುವಕರಿಗೆ ರೌಡಿ ಶೀಟರ್ ಪಟ್ಟ ಕಟ್ಟಲಾಗುತ್ತದೆ. ಎಂದರು.
ಮೂಲ್ಕಿ-ಮೂಡಬಿದ್ರಿ ಶಾಸಕ ಉಮಾನಾಥ್ ಕೋಟ್ಯಾನ್ ಮಾತನಾಡಿ, ಸುಹಾಸ್ ಶೆಟ್ಟಿ ಕೊಲೆಯಲ್ಲಿ ಪೊಲೀಸ್ ಇಲಾಖೆ ನೇರವಾಗಿ ಶಾಮೀಲಾಗಿದೆ. ಪೊಲೀಸ್ ಇಲಾಖೆಯ ಅಧಿಕಾರಿ ಮತ್ತು ಇಬ್ಬರು ಸಿಬ್ಬಂದಿ ಹಾಗೂ ಓರ್ವ ರಾಜಕಾರಣಿ ಕೊಲೆ ಪ್ರಕರಣದಲ್ಲಿ ಶಾಮೀಲಾಗಿದ್ದು,ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ತನಿಖೆ ಮಾಡಿಸಿದಲ್ಲಿ ಇವರೆಲ್ಲರ ಹೆಸರು ಬಹಿರಂಗವಾಗುತ್ತದೆ ಎಂದರು.
ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಪುರುಷೋತ್ತಮ್ ಮುಖಂಡರುಗಳಾದ ಶಿವಾನಂದ ಮೆಂಡನ್, ಶರಣ್ ಪಂಪ್ವೆಲ್, ಜಗದೀಶ್ ಶೇಣವ, ಭುಜಂಗ ಕುಲಾಲ್, ಸುಹಾಸ್ ಶೆಟ್ಟಿ ತಂದೆ ಮೋಹನ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಸಕರುಗಳಾದ ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ರಾಜೇಶ್ ನಾಯ್ಕ್, ಭಾಗೀರತಿ ಮುರುಳ್ಯ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ವಿಶ್ವಹಿಂದೂ ಪರಿಷತ್ ಭಜರಂಗದಳದ ಮುಖಂಡರುಗಳು ಪಾಲ್ಗೊಂಡಿದ್ದರು.
ಗುರುಪ್ರಸಾದ್ ಉಳ್ಳಾಲ ಸಭೆಯನ್ನು ನಿರ್ವಹಿಸಿದರು.
ಸುಹಾಸ್ ಶೆಟ್ಟಿ ಭಾವ ಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು.

ಮುಂಜಾಗ್ರತಾ ಕೃಮವಾಗಿ ಬಜಪೆ ಪೇಟೆಯ ಅಂಗಡಿಮುಂಗಟ್ಟುಗಳನ್ನು ಮುಚ್ಚಳಾಗಿತ್ತು.
ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು.

By suddi9

Leave a Reply

Your email address will not be published. Required fields are marked *