ಬಂಟ್ವಾಳ:ಸಿದ್ದಕಟ್ಟೆ ಪದವಿ ಪೂರ್ವ ಕಾಲೇಜಿನಲ್ಲಿ ಅರ್ಥ ಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀನಿವಾಸ ನಾಯ್ಕ್ ರವರು ಭಡ್ತಿಗೊಂಡು ಶಿವಮೊಗ್ಗ ಜಿಲ್ಲೆಯ ಹೊಸನಗರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ ನಿಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಸಿದ್ದಕಟ್ಟೆ ಸರಕಾರಿ ಪ್ರೌಢಶಾಲೆಯಲ್ಲಿ ಹತ್ತು ವರ್ಷಗಳ ಸೇವೆಯೊಂದಿಗೆ ಸಿದ್ದಕಟ್ಟೆ ಪದವಿ ಪೂರ್ವ ಕಾಲೇಜಿನಲ್ಲಿ 22 ವರ್ಷಗಳ ಕಾಲ ಅರ್ಥಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದು, ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಗುರುಗಳಾಗಿ, ಪೋಷಕರಲ್ಲಿ ಸಾಮಾಜಿಕ ಬದುಕಿನ ಅನುಭವದ ಕೊಂಡಿಯಾಗಿ,ಸಾರ್ವಜನಿಕರಲ್ಲಿ ಉತ್ತಮ ಭಾಂದವ್ಯದ ಸ್ನೇಹಿತರಾಗಿದ್ದರು.
ಸಿದ್ದಕಟ್ಟೆ ಪರಿಸರದಲ್ಲಿ ಸ ಅವಧಿಯಲ್ಲಿ ಸೇವೆ ಸಲ್ಲಿಸಿದ ಗುರುಗಳಿಗೆ ಪದೋನ್ನೋತಿಗೊಂಡು ಪ್ರಾಂಶುಪಾಲರಾಗಿ ನೇಮಕವಾಗಿರುವುದಕ್ಕೆ ಸಿದ್ದಕಟ್ಟೆ ಪರಿಸರದ ಎಲ್ಲಾ ಶಿಷ್ಯ ವರ್ಗದಲ್ಲಿ ಸಂತಸ ತಂದಿದೆ.
ಪ್ರಾಂಶುಪಾಲರಾಗಿ ಭಡ್ತಿಪಡೆದ ಶ್ರೀನಿವಾಸ ನಾಯ್ಕ್ ಅವರಿಗೆ ಸಿದ್ದಕಟ್ಟೆ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ಸಮಸ್ತ ಹಳೆ ವಿದ್ಯಾರ್ಥಿಗಳ ಪರವಾಗಿ ಪದವಿ ಪೂರ್ವ ಕಾಲೇಜ್ ಸಿದ್ದಕಟ್ಟೆ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಪ್ರಭಾಕರ ಪ್ರಭು ಅಭಿನಂದನೆ ಸಲ್ಲಿಸಿದ್ದಾರೆ.
