ಬಂಟ್ವಾಳ :ಕುಲಾಲ ಸುಧಾರಕ ಸಂಘ (ರಿ.) ನಾಣ್ಯ,ಫರಂಗಿಪೇಟೆ ಇದರ 32ನೇ ವಾರ್ಷಿಕೋತ್ಸವ ಸಮಾರಂಭವು ಭಾನುವಾರ ಫರಂಗೀಪೇಟೆ ಸಮೀಪದ ನಾಣ್ಯ ಕುಲಾಲ ಸಮುದಾಯ ಭವನದಲ್ಲಿ ನಡೆಯಿತು.

ಸಂಜೆ ನಡೆದ ವಾರ್ಷಿಕೋತ್ಸವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಣ್ಯ ಕುಲಾಲ ಸುಧಾರಕ ಸಂಘ ಅಧ್ಯಕ್ಷರಾದ
ಕಮಲಾ ರಮೇಶ್ ವಹಿಸಿದ್ದರು,
ಮಂಗಳೂರಿನ ಅತ್ತಾವರ ಶ್ರೀ ದೇವಿ ದೇವಸ್ಥಾನ ಸಮಿತಿ ಅಧ್ಯಕ್ಷ
ಸದಾಶಿವ ಕುಲಾಲ್ ಅತ್ತಾವರ ಅವರು ಅತಿಥಿಯಾಗಿ ಭಾಗವಹಿಸಿ ಸಮುದಾಯ ಸಂಘಟಿತವಾಗಿ ಸಮಾಜದಲ್ಲಿ ಗುರುತಿಸಿಕೊಂಡಾಗ ಸಾಮಾಜಿಕ, ರಾಜಕೀಯವಾಗಿ ಬಲಯುತವಾಗಲು ಸಾಧ್ಯ ಎಂದು ಹೇಳಿದರು.
ದೇರಳಕಟ್ಟೆ ಯೆನಪೋಯಾ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಉಪನ್ಯಾಸಕ ಡಾ.ಬಾಲಕೃಷ್ಣ ಕುಮಾರ್,
ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷ
ಕೃಷ್ಣಪ್ಪ ಬಿ., ಮಹಿಳಾ ಘಟಕದ ಅಧ್ಯಕ್ಷೆ ನಯನಾಕ್ಷಿ ಅಡ್ಯಾರ್ ವೇದಿಕೆಯಲ್ಲಿದ್ದರು.
ಇದೇ ವೇಳೆ
ಡಾಕ್ಟರೆಟ್ ಪದವಿ ಪಡೆದ ಅಸಿಸ್ಟೆಂಟ್ ಪ್ರೊಫೆಸರ್ ಡಾ| ಸೌಮ್ಯ ಎಂ.ಫಾರ್ಮ ಅವರನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ,ವಿದ್ಯಾರ್ಥಿ ವೇತನ, ವಾರ್ಷಿಕ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಫರಂಗಿಪೇಟೆ ಕುಲಾಲ ಸುಧಾರಕ ಸಂಘದ ಮಾಜಿ ಅಧ್ಯಕ್ಷರಾದ ದೇವದಾಸ ಕೆ.ಆರ್ ಪ್ರಸ್ತಾವನೆಗೈದರು,
ಉಪಾಧ್ಯಕ್ಷ ಸುರೇಶ ಕುಲಾಲ್ ನೆತ್ತರಕೆರೆ ಸ್ವಾಗತಿಸಿದರು, ಪ್ರ ಕಾರ್ಯದರ್ಶಿ ವಿಶ್ವನಾಥ ಕುಲಾಲ್ ನೆತ್ತರಕೆರೆ ವರದಿ ವಾಚಿಸಿದರು, ಜೊತೆ ಕಾರ್ಯದರ್ಶಿ ಲಿಖಿತ್ ವಿದ್ಯಾರ್ಥಿ ಪ್ರೋತ್ಸಾಹ ಧನ ಪಟ್ಟಿ ಓದಿದರು, ಸೇವಾದಳದ ಕಾರ್ಯದರ್ಶಿ ಕಾವ್ಯ ಬಹುಮಾನಿತರ ಪಟ್ಟಿ ವಾಚಿಸಿದರು,ಕೋಶಾಧಿಕಾರಿ ವಿನಯ್ ಕಡೆಗೋಳಿ ಸನ್ಮಾನಪತ್ರ ಓದಿದರು, ಸಂಘಟನಾ ಕಾರ್ಯದರ್ಶಿ ನವೀನ್ ಕೊಡ್ಮಾಣ್ ವಂದಿಸಿದರು. ಶಿಕ್ಷಕಿ ಗೌತಮಿ ಸುಜೀರು ಕಾರ್ಯಕ್ರಮ ನಿರೂಪಿಸಿದರು.
ವಾರ್ಷಿಕೋತ್ಸವದ ಪ್ರಯುಕ್ತ
ಬೆಳಿಗ್ಗೆ ಗಣಹೋಮ, 32ನೇ ವಾರ್ಷಿಕ ಮಹಾಸಭೆ, ಶ್ರೀ ಸತ್ಯನಾರಾಯಣ ಪೂಜೆ ಮಧ್ಯಾಹ್ನ ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಕುಲಾಲ ಸೇವಾದಳದ ಸದಸ್ಯರು ಮತ್ತು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
