ಬಂಟ್ವಾಳ: ಬಜ್ಪೆಯಲ್ಲಿ ಹತ್ಯೆಗೊಳಗಾದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರ ಮನೆಗೆ ಮಾಜಿ ರಾಜ್ಯಾಧ್ಯಕ್ಷ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ‌ಅವರು ಬೇಟಿ ನೀಡಿ ವೈಯಕ್ತಿಕ ನೆಲೆಯಲ್ಲಿ ರೂ ಒಂದು ಲಕ್ಷ ಅರ್ಥಿಕ ಸಹಾಯ ನೀಡಿದರು.


ಮತ್ತು ಸುಹಾಸ್ ಶೆಟ್ಟಿ ಅವರ ತಂದೆ ಹಾಗೂ ತಾಯಿಯ ಜೊತೆ ಕೆಲ ಹೊತ್ತು ಮಾತನಾಡಿದರು. ಕುಟುಂಬಕ್ಕೆ ಸಾಂತ್ವನ ನೀಡಿದ ಜೊತೆಗೆ ಕುಟುಂಬದ ಜೊತೆ ಸದಾಕಾಲವೂ ಇರುವುದಾಗಿ ಭರವಸೆ ನೀಡಿದರು.
ನಮಗೆ ರಾಜ್ಯದ ಸರಕಾರದ ಮತ್ತು ಪೋಲೀಸ್ ಇಲಾಖೆ ಮೇಲೆ ಯಾವುದೇ ಭರವಸೆ ಇಲ್ಲ. ಈವರೆಗೆ ಸರಕಾರದ ಪರವಾಗಿ ಯಾವೊಬ್ಬ ವ್ಯಕ್ತಿಯೂ ಮಾತನಾಡಿಲ್ಲ ಎಂದು ಮನೆಯವರು ಬೇಸರ ವ್ಯಕ್ತಪಡಿಸಿದರು. ಮತ್ತು ಪ್ರಕರಣದ ತನಿಖೆಯನ್ನು ಕೇಂದ್ರದ ಎನ್.ಐ.ಎ.ತನಿಖಾ ಸಂಸ್ಥೆಗೆ ವಹಿಸಿ, ಸುಹಾಸ್ ಶೆಟ್ಟಿಯ ಸಾವಿಗೆ ನ್ಯಾಯ ಒದಗಿಸಿ ಕೊಡಿ ಮತ್ತು ಮುಂದೆ ಯಾವೊಬ್ಬ ಹಿಂದೂ‌ಕಾರ್ಯಕರ್ತನಿಗೆ ಇಂತಹ ಕಷ್ಟ ಬರಬಾರದು ಎಂದು ಕಣ್ಣೀರು ಇಟ್ಟರು.
ಮಾಜಿ ಮೇಯರ್ ಸುದೀರ್ ಶೆಟ್ಟಿ ಕಣ್ಣೂರು, ಮಾಜಿ ಕಾರ್ಪೊರೇಟ್ ರ್ ವಿಜಯಕುಮಾರ್ ಶೆಟ್ಟಿ, ಪುತ್ತೂರು ಮಾಜಿ‌ಮಂಡಲ‌ ಅಧ್ಯಕ್ಷ ಸಹಜ ರಾಧಾಕೃಷ್ಣ ಆಳ್ವ, ಸುಳ್ಯ ‌ಮಂಡಲ ಮಾಜಿ ಅಧ್ಯಕ್ಷ ಹರೀಶ್ ಕಾಂಜಿಪಿಳಿ, ಪ್ರಮುಖರಾದ ರವೀಶ್ ಶೆಟ್ಟಿ ಕರ್ಕಳ, ಸುದರ್ಶನ ಬಜ, ಮಾದವ ಮಾವೆ, ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿ ಗುತ್ತು, ಪುರುಷೋತ್ತಮ ಶೆಟ್ಟಿ ವಾಮದಪದವು, ಗಣೇಶ್ ರೈ ಮಾಣಿ, ದಿನೇಶ್ ಶೆಟ್ಟಿ ದಂಬೆದಾರ್, ಅಜಿತ್ ಶೆಟ್ಟಿ ಕಾರಿಂಜ, ಹರೀಶ್ ಕುತ್ತಾರ್,ರವಿರಾಮ ರೈ, ನಾಗೇಶ್ ಶೆಟ್ಟಿ ಕೊಡಂಗಾಯಿ, ಸತೀಶ್ ಶೆಟ್ಟಿ ಮದ್ವ ಅಜಿತ್ ಪುತ್ತೂರು, ರಂಜಿತ್, ಸುಕೇಶ್ ಚೌಟ,ಕಾರ್ತಿಕ್ ಬಲ್ಲಾಳ್, ಶ್ಯಾಮಣ್ಣ ಶೆಟ್ಟಿ, ಹರೀಶ್ ರಾಯಿ ,ಅರುಣ್ ಕುವೆಲ್ಲೋ
ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *