ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ ರಾಕೇಶ್ ಮಲ್ಲಿ ಆಯ್ಕೆ
ಬಂಟ್ವಾಳ: ಮೇ ತಿಂಗಳಿನಲ್ಲಿ ನಡೆಯುವ ಬಂಟ್ವಾಳ ತಾಲೂಕಿನ ನಾವೂರು ಗ್ರಾಮದ ಅಗ್ರಹಾರ ಬೀದಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ ರಾಕೇಶ್ ಮಲ್ಲಿ ಅವರು ಆಯ್ಕೆಯಾಗಿದ್ದಾರೆ.ದೇವಸ್ಥಾನದ ವಠಾರದಲ್ಲಿ ದೇವಳದ ಪ್ರಧಾನ ಅರ್ಚಕರಾದ ವೇದಮೂರ್ತಿ ಸುದರ್ಶನ್ ಬಲ್ಲಾಳ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.

ಉಳಿದಂತೆ ಪದಾಧಿಕಾರಿಗಳು ಇಂತಿದ್ದಾರೆ.ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ,ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ರವಿಶಂಕರ ಶೆಟ್ಟಿ ಬಡಾಜೆ,ಉದ್ಯಮಿ ಸತೀಶ್ ಭಂಡಾರಿ ಕುಳತ್ತಬೆಟ್ಟು ( ಗೌರವಾಧ್ಯಕ್ಷರು),
ಸೀತಾರಾಮ ಸಾಲ್ಯಾನ್ ( ಕಾರ್ಯಾಧ್ಯಕ್ಷರು), ಸದಾನಂದ ಗೌಡ ನಾವೂರು (ಕಾರ್ಯದರ್ಶಿ), ಭುವನೇಶ್ ಪಚ್ಚಿನಡ್ಕ,ಜಯಪ್ರಕಾಶ್ ಬಂಟ್ವಾಳ,ಲೋಕನಾಥ ಶೆಟ್ಟಿ ಬಿ.ಸಿ.ರೋಡು,ಇಂದಿರಾ ಸೂರಜ್ ನಾವೂರು ಬೀದಿ,ಶೇಖರಪೂಜಾರಿ(ಉಪಾಧ್ಯಕ್ಷರು), ತೇಜ್ ಪಾಲ್ ಜೈನ್,ಶ್ರೀಹರಿಕಾರಂತ್,
ವೇಣುಗೋಪಾಲ ಆಚಾರ್ಯ,ಸತೀಶ್ ಕರ್ಕೇರ( ಜತೆಕಾರ್ಯದರ್ಶಿಗಳು), ಸುದರ್ಶನ್ ಬಲ್ಲಾಳ್ (ಕೋಶಾಧಿಕಾರಿ),ವೈಶಾಖ್ ಸಾಲಿಯಾನ್, ಅರುಣ್,ಪ್ರಭಾವತಿ ವಿಶ್ವನಾಥ್,ನವೀನ್ ನಾಯಕ್ ಬೀದಿಪಲ್ಕೆ(ಜತೆಕಾರ್ಯದರ್ಶಿಗಳು),ಚಂದ್ರಕಾಂತರಾವ್,ಉಮೇಶ್ ಕಿಳ್ತೋಡಿ,ಶಿವರಾಮ್ ಶೆಟ್ಟಿ ಜಕ್ರಿಬೆಟ್ಟು,ಪೂರ್ಣಿಮಾ ಗಣೇಶ್ ಕುಲಾಲ್,
ಪದ್ಮಲತಾ ಹಳೇಗೇಟ್ ( ಸಂಘಟನಾ ಕಾರ್ಯದರ್ಶಿಗಳು), ಮುರಳೀಧರ ಭಟ್,ಮಾಣಿಕ್ಯರಾಜ್ ಜೈನ್, ಜಗನ್ನಾಥ ತುಂಬೆ,ಗಂಗಾಧರ ಶೆಟ್ಟಿ(ಗೌರವ ಸಲಹೆಗಾರರು), ಚೈತ್ರೇಶ್ ಕುಲಾಲ್,ಸುರೇಶ್ ಕೆಮ್ಮಟೆ,ಸತೀಶ್ ಪಲ್ಲಮಜಲು,ವೆಂಕಟೇಶ್ ಬಂಟ್ವಾಳ,ನಾರಾಯಣ ಪೂಜಾರಿ ದೋಟ( ಪ್ರಚಾರ ಸಮಿತಿ) ಅವರು ಆಯ್ಕೆಯಾಗಿದ್ದಾರೆ.
ಜೀರ್ಣೋದ್ದಾರ ಸಮಿತಿ:
ದೇವಳದ ಜೀಣೋದ್ದಾರ ಸಮಿತಿಯನ್ನು ಈ ಮೊದಲೇ ರಚಿಸಲಾಗಿದ್ದು,ಮಾಜಿ ಸಚಿವ ಬಿ. ರಮಾನಾಥ ರೈ,ಉದ್ಯಮಿ ರಘುನಾಥ ಸೋಮಯಾಜಿ (ಗೌರವಾಧ್ಯಕ್ಷರು),ಪದ್ಮಶೇಖರ ಜೈನ್ (ಅಧ್ಯಕ್ಷರು),ಉಮಾಶಂಕರ್ ಬಂಟ್ವಾಳ ( ಕಾರ್ಯದರ್ಶಿ),ಭರತ್ ರಾವ್,ರಾಮಕೃಷ್ಣ
ಬಲ್ಲಾಳ್( ಜತೆಕಾರ್ಯದರ್ಶಿಗಳು),ಲೋಕೇಶ್ ಪೂಜಾರಿ ಪಲ್ಲಿಕಂಡ,ಜಗದೀಶ್ ಪೂಜಾರಿ( ಉಪಾಧ್ಯಕ್ಚರು),ಸುದರ್ಶನ್ ಬಲ್ಲಾಳ್ ( ಕೋಶಾಧಿಕಾರಿ) ಅವರು ಆಯ್ಕೆಗೊಂಡಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.
42 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಬ್ರಹ್ಮರಥವನ್ನು ಕಳೆದ ತಿಂಗಳು ದೇವಳಕ್ಕೆ ತರಲಾಗಿದ್ದು,ಬ್ರಹ್ಮಕಲಶ ಸಂದರ್ಭದಲ್ಲಿ ಸಮರ್ಪಣೆಗೊಳ್ಳಲಿದೆ. ಪ್ರಸ್ತುತ ಹನುಮಂತನ ಗುಡಿ, ಮುಂಭಾಗದ ಗೋಪುರ, ರಥದ ಕೊಟ್ಟಿಗೆ ನಿರ್ಮಾಣ ಸಹಿತ 1.27 ಕೋ.ರೂ. ವೆಚ್ಚದಲ್ಲಿ ದೇವಸ್ಥಾನದ ಜೀರ್ಣೋದ್ದಾರ ಕಾರ್ಯ ಭರದಿಂದ ನಡೆಯುತ್ತಿದೆ