ಮೂಡುಬಿದಿರೆ: ನೆಲ್ಲಿಕಾರು ಗ್ರಾ.ಪಂ.ನಲ್ಲಿ ತೆರವಾದ ಒಂದು ಸದಸ್ಯ ಸ್ಥಾನಕ್ಕೆ ನಾಲ್ಕು ತಿಂಗಳ ಅವಧಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಜಾರ್ಜ್  ಫೆನಾಂಡಿಸ್ 7 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ಪಂಚಾಯಿತಿ ಸದಸ್ಯರಾಗಿದ್ದ ರಾಜೇಶ್ ಡಿ’ಸಿಲ್ವಾ ವಿದೇಶಕ್ಕೆ ತೆರಳಿದ ಕಾರಣ ಒಂದು ಸದಸ್ಯ ಸ್ಥಾನ ತೆರವಾಗಿತ್ತು. ಡಿ.7ರಂದು ನೆಲ್ಲಿಕಾರು ಪಂಚಾಯಿತಿ ಕಚೇರಿಯಲ್ಲಿ ಉಪಚುನಾವಣೆ ನಡೆದಿದ್ದು ಮಂಗಳೂರು ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಮಂಗಳವಾರ ಚುನಾವಣಾ ಫಲಿತಾಂಶ ಪ್ರಕಟಗೊಂಡಿದೆ. ಜಾರ್ಜ್  ಫೆರ್ನಾಂಡಿಸ್ ಅವರಿಗೆ 430, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ  ಧನಂಜಯ್ ಅವರಿಗೆ 423 ಮತಗಳು ಸಿಕ್ಕಿದೆ.

9 dec Nellikaru Panchayithi Election
ಬಳಿಕ ನಡೆದ ಬಿಜೆಪಿ ಸಂಭ್ರಮಾಚಾರಣೆಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮಾನಾಥ ಕೋಟ್ಯಾನ್, ಬಿಜೆಪಿ ಮುಖಂಡರಾದ ಸುಕೇಶ್, ನಾಗರಾಜ ಪೂಜಾರಿ,ರತ್ನಾಕರ ಪೂಜಾರಿ, ಉದಯ ಮಾಂಟ್ರಾಡಿ ಮೊದಲಾದವರಿದ್ದರು.
ಪಡುಪೆರಾರ ಗ್ರಾ.ಪಂ. ಪಿಡಿಓ ದಿನೇಶ್ ಚುನಾವಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.

By suddi9

Leave a Reply

Your email address will not be published. Required fields are marked *