ಹಾವೇರಿ: ಹಿಂದೂ ಯುವತಿಯನ್ನು ಭೀಕರವಾಗಿ ಕೊಂದ ಮುಸ್ಲಿಂ ಯುವಕ, ಆಕ್ರೋಶಗೊಂಡ ಹಿಂದೂ ಸಂಘಟನೆ

ಹಾವೇರಿ ಜಿಲ್ಲೆಯಲ್ಲಿ ಒಂದು ಭೀಕರ ಘಟನೆಯೊಂದು ನಡೆದಿದೆ. ಮುಸ್ಲಿಂ ಯುವಕ ಹಿಂದೂ ಯುವತಿಯೊಬ್ಬಳನ್ನು ಭೀಕರವಾಗಿ ಹತ್ಯೆಗೈದಿದ್ದಾನೆ. ಬಾಳಬೇಕಿದ್ದ ಯುವತಿ ತುಂಗಭದ್ರಾ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಮೊದಲಿಗೆ ಯುಡಿ ಆರ್ ದಾಖಲಿಸಿ ತನಿಖೆ ಆರಂಭಿಸಿದ ಪೊಲಿಸರು ಹಂತಕರ ಸುಳಿವು ಸಿಕ್ಕಿದ್ದು, ಹಾವೇರಿ ಜಿಲ್ಲೆಯಲ್ಲಿ ನಡೆದ ಸ್ವಾತಿ ಎಂಬ ಯುವತಿ ಹತ್ಯೆ ಪ್ರಕರಣ ದೊಡ್ಡ ಸಂಚಲನ ಸೃಷ್ಟಿಸಿದೆ. ಅಲ್ಲದೇ ನಯಾಜ್ನ ಕ್ರೌರ್ಯ ಬೆಚ್ಚಿಬೀಳಿಸುವಂತಿದೆ. ನಯಾಜ್ ಸ್ವಾತಿಯನ್ನು ಬಿಟ್ಟು ತಮ್ಮ ಧರ್ಮದ ಯುವತಿ ಜೊತೆ ಮದುವೆಯಾಗಲು ಬಯಸಿದ್ದ. ಇದರಿಂದ ರೊಚ್ಚಿಗೆದ್ದಿದ್ದ ಸ್ವಾತಿ ನನಗೆ ಮೋಸ ಮಾಡಬೇಡ ಎಂದು ಜಗಳ ಮಾಡಿದ್ದಾಳೆ.
ಬಳಿಕ ನಯಾಜ್ ಹಾಗೂ ಸ್ವಾತಿ ನಡುವೆ ಭಿನ್ನಾಭಿಪ್ರಾಯ ಮನಸ್ತಾಪ ಉಂಟಾಗಿದ್ದು, ನಂತರ ನಯಾಜ್ , ವಿನಯ್ ಹಾಗೂ ದುರ್ಗಾಚಾರಿಗೂ ಈ ವಿಚಾರ ತಿಳಿಸಿದ್ದಾನೆ. ಸ್ವಾತಿ ಕಾಟ ಹೆಚ್ಚಾಗಿದೆ. ಅವಳ ಕಥೆ ಮುಗಿಸಬೇಕು ಎಂದು ಮೂವರೂ ಮಾತಾಡಿಕೊಂಡು ಆಕೆಯ ಕೊಲೆಗೆ ಸ್ಕೆಚ್ ಹಾಕಿದ್ದಾರೆ. ಸ್ಕೆಚ್ನಂತೆ ಆರೋಪಿಗಳು ಬಾಡಿಗೆ ಕಾರು ಮಾಡಿಕೊಂಡು ಬಂದು ಸ್ವಾತಿಯನ್ನು ರಾಣೇಬೆನ್ನೂರು ಹೊರ ವಲಯದ ಸುವರ್ಣ ಪಾರ್ಕ್ ಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಕಾರಿನಲ್ಲೇ ಟವೆಲ್ ನಿಂದ ಕುತ್ತಿಗೆಗೆ ಉರುಲು ಬಿಗಿದು ಉಸಿರುಗಟ್ಟಿಸಿ ಸ್ವಾತಿಯನ್ನು ಕೊಂದಿದ್ದಾರೆ.