
ಬಂಟ್ವಾಳ:ಕೊನೆಗೂ ಹೆತ್ತವರ ಮಡಿಲು ಸೇರಿದ ನಾಪತ್ತೆಯಾದ ಬಾಲಕ ದಿಗಂತ್, 15 ದಿನಗಳ ಬಳಿಕ ನಾಪತ್ತೆಯಾಗಿದ್ದ ಬಾಲಕ ದಿಗಂತ್ ಮನೆಗೆ ಮರಳಿದ್ದಾನೆ. ಮಕ್ಕಳ ಕಲ್ಯಾಣ ಸಮಿತಿ ಮುಂದೆ ಕೊನೆಗೂ ‘ನಾನು ಮನೆಗೆ ಹೋಗುತ್ತೇನೆ ‘ಎಂದು ದಿಗಂತ್ ಒಪ್ಪಿಕೊಂಡಿದ್ದಾನೆ.ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಫರಂಗಿಪೇಟೆ ದಿಗಂತ್ ನಾಪತ್ತೆ ಪ್ರಕರಣ ಸುಖಾಂತ್ಯಗೊಂಡಿದೆ.
ಇಂದು ನಡೆದ ಮಕ್ಕಳ ಕಲ್ಯಾಣ ಸಮಿತಿ ಸಭೆ ಬಳಿಕ ದಿಗಂತ್ ಮರಳಿ ಪೋಷಕರನ್ನ ಸೇರಲು ಅನುಮತಿ ನೀಡಲಾಗಿದೆ.
ಇಂದು ಹೈ ಕೋರ್ಟ್ ನಲ್ಲಿ ದಿಗಂತ್ ಪೋಷಕರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಪ್ರಕರಣ ವಿಚಾರಣೆ ನಡೆಸಲಾಗಿತ್ತು.ಬಂಟ್ವಾಳ ಪೊಲೀಸರು ದಿಗಂತ್ ನನ್ನ ಪೋಷಕರಿಗೆ ಒಪ್ಪಿಸಲು ಸಮ್ಮತಿ ಸೂಚಿಸಿದ್ದಾರೆ. ಆದರೆ ಅಫಿಡವಿತ್ ಸಲ್ಲಿಕೆ ವೇಳೆ ದಿಗಂತ್ ಮನೆಗೆ ಹೋಗಲು ಒಪ್ಪುತ್ತಿಲ್ಲ ಎಂಬ ವಿಚಾರ ಉಲ್ಲೇಖಿಸಿದ್ದ ಪೊಲೀಸರು. ಈ ಹಿನ್ನಲ್ಲೆ ಮಕ್ಕಳ ಕಲ್ಯಾಣ ಸಮಿತಿಗೆ ಪರಿಶೀಲನೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲು ಕೋರ್ಟ್ ಸೂಚಿಸಿತ್ತು . ಇಂದು ಸಂಜೆ ವೇಳೆ ಸಿ ಡಬ್ಲ್ಯೂ ಸಿ ಸಭೆ ಬಳಿಕ ತಾಯಿ ಜೊತೆ ಮನೆಗೆ ದಿಗಂತ್ ವಾಪಸ್ ಆಗಿದ್ದಾನೆ. ಸಿ ಡಬ್ಲ್ಯೂ ಸಿ ಸಭೆಯಲ್ಲಿ ನಾನ್ನು ಪೋಷಕರೊಂದಿಗೆ ಮನೆಗೆ ಹೋಗುತ್ತೇನೆ ಎಂದು ಒಪ್ಪಿಕೊಂಡಿದ್ದಾನೆ.
