ಬಂಟ್ವಾಳ :ಸರಕಾರಿ ಪಾಲಿಟೆಕ್ನಿಕ್ ನಲ್ಲಿ ಮಹಿಳಾ ದಿನಾಚರಣೆ
ಬಂಟ್ವಾಳ: ಇಲ್ಲಿನ ಸರಕಾರಿ ಪಾಲಿಟೆಕ್ನಿಕ್ ನ ಮಹಿಳಾ ಘಟಕ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಸಂಸ್ಥೆಯ ಮಹಿಳಾ ಘಟಕದ ಸಂಯೋಜಕಿ ಭುವನೇಶ್ವರಿ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಮಹಿಳಾ ದಿನಾಚರಣೆಯ ಮಹತ್ವ ಮತ್ತು ಅಗತ್ಯತೆಗಳ ಬಗ್ಗೆ ವಿವರಿಸಿದರು. ಕಲ್ಲಡ್ಕ ಶ್ರೀರಾಮ ಪದವಿ ಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾದ ಜಯಲಕ್ಷ್ಮಿ ಕೆ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಹಿಳಾ ಶಕ್ತಿ ಮತ್ತು ಮಹಿಳೆಯರ ಪ್ರಾಮುಖ್ಯತೆ ಕುರಿತು ಉಪನ್ಯಾಸ ನೀಡಿದರು.

ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಂಶುಪಾಲರಾದ ನರಸಿಂಹ ಭಟ್ ಎಚ್ ಇವರು ವಹಿಸಿದ್ದರು.
ಮೆಕ್ಯಾನಿಕಲ್ ವಿಭಾಗದ ವಿಭಾಗ ಮುಖ್ಯಸ್ಥರಾದ ಭಗವಾನ್ ಪ್ರಸಾದ್,ಸಿವಿಲ್ ವಿಭಾಗ ಮುಖ್ಯಸ್ಥರಾದ ಮೋಹನ್ ರಾಜ್,ಎಲೆಕ್ಟ್ರಾನಿಕ್ಸ್ ವಿಭಾಗ ಮುಖ್ಯಸ್ಥರಾದ ಉದಯ್ ಕುಮಾರ್,ಕಚೇರಿ ಅಧೀಕ್ಷಕರಾದ ಸುಧಾಕರ್ ಸಿ. ಎಸ್ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿ ಭಾಸ್ಕರ್ ಎಲ್ ರವರು ಉಪಸ್ಥಿತರಿದ್ದರು.
ಕು. ಚೈತ್ರ ಸ್ವಾಗತಿಸಿದರು, ಕು. ವೀಕ್ಷಾ ಕೆ ವಂದಿಸಿದರು. ಕು. ಹರ್ಷಿತಾ ಕಾರ್ಯಕ್ರಮವನ್ನು ನಿರೂಪಿಸಿದರು. ಬಳಿಕ ಸಂಸ್ಥೆಯ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.