ಬಂಟ್ವಾಳ: ವಿಟ್ಲ ಕಲ್ಲಿನ ಕೋರೆಯಲ್ಲಿ ಸ್ಪೋಟ, ಎರಡು ಮನೆಯ ಗೋಡೆ ಬಿರುಕು

ಬಂಟ್ವಾಳ: ವಿಟ್ಲ, ಕಂಬಳಬೆಟ್ಟು, ಮೇಗಿನಪೇಟೆ, ಚಂದಳಿಕೆ ಸುತ್ತಮುತ್ತಲಿನಲ್ಲಿ ಭಾರೀ ಪ್ರಮಾಣದಲ್ಲಿ ಶಬ್ದ ಉಂಟಾಗಿದೆ. ಈ ಶಬ್ದಕ್ಕೆ ಅಲ್ಲಿ ಜನ ಬೆಚ್ಚಿ ಬಿದ್ದಿದ್ದಾರೆ. ಕಲ್ಲು ಕೋರೆಯಲ್ಲಿ ಭಾರೀ ಸ್ಪೋಟದಿಂದ ಈ ಶಬ್ದ ಬಂದಿದೆ ಎಂದು ಹೇಳಲಾಗಿದೆ. ಮಾಡತ್ತಡ್ಕದಲ್ಲಿರುವ ಕಲ್ಲಿನ ಕೋರೆಯಲ್ಲಿ ಸ್ಪೋಟಗೊಂಡಿದೆ. ಕೋರೆ ಸಮೀಪದ ಗುಡ್ಡದಲ್ಲಿ ಭಾರೀ ಪ್ರಮಾಣದ ಸ್ಪೋಟಕಗಳನ್ನು ಶೇಖರಿಸಿಟ್ಟಿದ್ದರು. ಬೀಸಿಲಿನ ತಾಪಕ್ಕೆ ಅದು ಸ್ಫೋಟಗೊಂಡಿದೆ. ಈ ಸ್ಫೋಟದಿಂದ ಎರಡು ಮನೆಯ ಗೋಡೆ ಬಿರುಕುಗೊಂಡಿದೆ. ಕಿಟಕಿಯ ಗಾಜು ಪುಡಿ ಪುಡಿಯಾಗಿದೆ. ಮಾಡತಡ್ಕ ಭಾಗಕ್ಕೆ ಜನರು ತೆರಳುತ್ತಿದ್ದು, ಕೋರೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.