ಬಂಟ್ವಾಳ: ಸುಭಾಷ್ ಚಂದ್ರಬೋಸ್ ಇನ್ನೆರಡು ವರ್ಷ ಬದುಕುಳಿದಿದ್ದರೆ ದೇಶ ವಿಭಜನೆಯಾಗುತ್ತಿರಲಿಲ್ಲ: ಜಗದೀಶ್ ಕಾರಂತ್

ಬಂಟ್ವಾಳ: ಭಾನುವಾರದಂದು ಬಿ.ಸಿ.ರೋಡಿನ ಶ್ರೀರಕೇಶ್ವರೀ ದೇವಸ್ಥಾನದ ಮುಂಭಾಗದಲ್ಲಿ ಹಿಂದೂ ಜಾಗರಣ ವೇದಿಕೆಬಂಟ್ವಾಳ ತಾಲೂಕು,ಮಂಗಳೂರು ಗ್ರಾಮಾಂತರ ಜಿಲ್ಲೆಯ ಆಶ್ರಯದಲ್ಲಿ ಸ್ವಾಮೀ ವಿವೇಕಾನಂದ ಮತ್ತು ನೇತಾಜಿ ಸುಭಾಷ್ ಚಂದ್ರಬೋಸ್ ಜಯಂತಿ ಪ್ರಯುಕ್ತ “ಹಿಂದೂ ಯುವ ಸಮಾವೇಶ”ದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಹಿ.ಜಾ.ವೇ.ಯ ಕ್ಷೇತ್ರೀಯ ಸಂಯೋಜಕರಾದ ಜಗದೀಶ್ ಕಾರಂತ್ ಭಾರತದ ಸ್ವಾಭಿಮಾನವನ್ನು ಬಡಿದ್ದೆಬ್ಬಿಸಿದ ಸಿಡಿಲ ಸಂತ ಸ್ವಾಮಿ ವಿವೇಕಾನಂದರು ಹಾಗೂ ಭಾರತದ ಸ್ವಾತಂತ್ರ‍್ಯ ಸಂಗ್ರಾಮಕ್ಕೆ ಹೊಸ ಮುನ್ನುಡಿಯನ್ನು ಬರೆದ, ನೇತಾಜಿ ಸುಭಾಷ್ ಚಂದ್ರ ಬೋಸ್ ರಂತಹ ಮಹಾನ್ ವ್ಯಕ್ತಿಗಳು ಪ್ರಸ್ತುತ ಕಾಲಘಟ್ಟದಲ್ಲು ಭಾರತದ ಯುವ ಪೀಳಿಗೆಗೆ ಪ್ರೇರಣೆ ಮತ್ತು ಸ್ಪೂರ್ತಿಯಾಗಿದ್ದಾರೆ ಎಂದರು.
ಸ್ವಾಮಿವಿವೇಕಾನಂದರು ಅಪ್ಪಟ ರಾಷ್ಟ್ರಭಕ್ತರಾಗಿದ್ದರು. ದೈರ್ಯ, ಸಾಹಸ, ಪರಾಕ್ರಮ ಎಲ್ಲಾ ಸದ್ಗುಣಗಳ ಸಮುಚ್ಚಯವನ್ನು ಮೈಗೂಡಿಸಿರುವ ಕ್ರಾಂತಿಕಾರಿ ಸುಭಾಶ್ಚಂದ್ರ ಭೋಸ್ ಅವರು ಬ್ರಿಟಿಷರ ವಿರುದ್ದ ಸೇಡು ತೀರಿಸಲು ಸನ್ನದ್ದರಾಗಿದ್ದರು. ಆದರೆ ಅಹಿಂಸಾ ತತ್ವದಡಿಯಲ್ಲಿ ಮಹಾತ್ಮಗಾಂಧಿ ಮತ್ತವರ ಟೀಂ ಅಸಹಕಾರ ನೀಡಿದ್ದರಿಂದ ಇದು ಸಾಧ್ಯವಾಗಿಲ್ಲ ಸುಭಾಶ್ಚಂದ್ರರವರು ಇನ್ನೆರಡು ವರ್ಷ ಬದುಕುಳಿದಿದ್ದರೆ ದೇಶ ವಿಭಜನೆಯಾಗುತ್ತಿರಲಿಲ್ಲ, ಅಂದಿನ ನಮ್ಮ ನಾಯಕತ್ವದ ದೌರ್ಬಲ್ಯದಿಂದಾಗಿ ದೇಶ ವಿಭಜನೆಯಾಗುವಂತಾಯಿತು ಎಂದು ವಿಶ್ಲೇಷಿಸಿದರು.