ಚಿಕ್ಕಮಗಳೂರು: ಶಿವ ನನಗೆ ಎರಡು ಕೋಟಿ ರೂ. ಬೇಕು, ಮಾರ್ಕಂಡೇಶ್ವರ ಸ್ವಾಮಿಗೆ ವಿಚಿತ್ರವಾಗಿ ಹರಕೆ

ಶಿವರಾತ್ರಿಯ ದಿನ ಶ್ರೀ ಮಾರ್ಕಂಡೇಶ್ವರ ಸ್ವಾಮಿ ಬಳಿ ಭಕ್ತ ಎರಡು ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದೆ. ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಗ್ರಾಮದ ಮಾರ್ಕಂಡೇಶ್ವರ ಸ್ವಾಮಿಗೆ ಓರ್ವಭಕ್ತ ವಿಚಿತ್ರವಾಗಿ ಹರಕೆ ಕಟ್ಟಿಕೊಂಡಿದ್ದಾರೆ. ಎರಡು ಕೋಟಿ ಹಣ ಬೇಕು” ಒಂದು ಚೀಟಿಯಲ್ಲಿ ಬರೆದು ದೇವರ ಹುಂಡಿಯಲ್ಲಿ ಹಾಕಿದ್ದಾರೆ. ಎರಡು ಕೋಟಿ ಹಣ ಬೇಕು ಎಂದು ಪತ್ರದಲ್ಲಿ ಬರೆದು ಹರಕೆ ಹುಂಡಿಯಲ್ಲಿ ಹಾಕಿದ್ದಾರೆ. ಹುಂಡಿ ಹಣ ಎಣಿಕೆ ವೇಳೆ ಸಿಕ್ಕ ಭಕ್ತನ ಬೇಡಿಕೆ ಚೀಟಿ ಸಿಕ್ಕಿದೆ.