ಬಂಟ್ವಾಳ ರೋಟರಿ ಕ್ಲಬ್ ಪ್ರಸ್ತುತ ಅಧ್ಯಕರಿಂದ ತೃಪ್ತಿದಾಯಕವಾದ ಕೆಲಸ: ಗವರ್ನರ್ ವಿಕ್ರಮ್ ದತ್ತಾ
ಬಂಟ್ವಾಳ: ರೋಟರಿ ಜಿಲ್ಲೆ ೩೧೮೧ ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಾಮರಾಜನಗರ ಈ ನಾಲ್ಕು ಕಂದಾಯ ಜಿಲ್ಲೆಯನ್ನೊಳಗೊಂಡಿದ್ದು,ದ.ಕ. ಜಿಲ್ಲೆಯಲ್ಲಿ 50 ವರ್ಷವನ್ನು ಪೂರೈಸಿರುವ 10 ರೋಟರಿಕ್ಲಬ್ ಗಳ ಪೈಕಿ ಬಂಟ್ವಾಳ ರೋಟರಿ ಕ್ಲಬ್ ಕೂಡ ಒಂದಾಗಿದ್ದು,ಹಲವಾರು ಉತ್ತಮ ಜನೋಪಯೋಗಿ ಕೆಲಸಗಳನ್ನು ಮಾಡಿದ್ದಲ್ಲದೆ ಇತ್ತೀಚಿನ ವರ್ಷಗಳಲ್ಲಿ ರೋಟರಿ ದತ್ತಿನಿಧಿಗೆ 2 ಕೋ.ರೂ.ವನ್ನು ದೇಣಿಗೆ ನೀಡಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ವಿಕ್ರಮ್ ದತ್ತಾ ಹೇಳಿದ್ದಾರೆ.

ಶುಕ್ರವಾರ ಬಂಟ್ವಾಳ ರೋಟರಿಕ್ಲಬ್ ಗೆ ಅಧಿಕೃತ ಭೇಟಿ ನೀಡಿರುವ ಹಿನ್ನಲೆಯಲ್ಲಿಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಂಟ್ವಾಳ ರೋಟರಿ ಕ್ಲಬ್ ಪ್ರಸ್ತುತ ಅಧ್ಯಕ್ಷರಾದ ಬೇಬಿಕುಂದರ್ ಅವರು ಕಳೆದ 8 ತಿಂಗಳ ಅವಧಿಯಲ್ಲಿ ತೃಪ್ತಿದಾಯಕವಾದ ಕೆಲಸವನ್ನು ಮಾಡಿದ್ದಾರೆ ಎಂದರು.
ಸರ್ವೈಕಲ್ ಕ್ಯಾನ್ಸರ್ ಮಾಹಿತಿ, ಹಿರಿಯರಿಗೆ ಗಾಲಿಕುರ್ಚಿ ಸಹಿತ ಸಾಧನಗಳ ವಿತರಣೆ, ಬ್ಲಡ್, ಐ ಬ್ಯಾಂಕ್ ಗಳು, ಚರ್ಮ ಬ್ಯಾಂಕ್ ಸಹಿತ ಹಲವು ಆರೋಗ್ಯ ಸಂಬಂಧಿ ಯೋಜನೆಗಳನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ಹಾಗೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿದೆ ಎಂದು ವಿವರಿಸಿದರು.
ರೋಟರಿ ಹಾಗೂ ಎಂಆರ್ ಪಿಎಲ್ ಸಂಸ್ಥೆಗಳು ಜಂಟಿ ಸಹಯೋಗದಲ್ಲಿ ಸುಮಾರು 4.50 ಕೋ.ರೂ.ವೆಚ್ಚದಲ್ಲಿ ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಯಲ್ಲಿ ಆರಂಭಿಸಲಾದ ಹ್ಯೂಮನ್ ಮಿಲ್ಕ್ ಬ್ಯಾಂಕ್ ಅತ್ಯಂತ ಪ್ರಮುಖವಾಗಿದೆ ಎಂದ ಅವರು ರೋಟರಿ ದತ್ತಿನಿಧಿಯಿಂದ ದೊರೆತ ಅನುದಾನ ಸಹಿತ ವಿವಿಧ ಮೂಲಗಳಿಂದ ಅನುದಾನ ಬಳಸಿಕೊಂಡು ಒಂದು ಕೋ.ರೂ.ವೆಚ್ಚದಲ್ಲಿ ಬಂಟ್ವಾಳ ರೋಟರಿಕ್ಲಬ್ ಈಗಾಗಲೇ ಬ್ಲಡ್ ಬ್ಯಾಂಕ್ ನ್ನು ಸ್ಥಾಪಿಸಿದ್ದು, ಇದಕ್ಕೆ ಬೇಕಾದ ಪರವಾನಿಗೆ ದೊರೆತಾಕ್ಷಣ ಅಧಿಕೃತವಾಗಿ ಕಾರ್ಯಾರಭವಾಗಲಿದೆ.ಅತೀಶೀಘ್ರದಲ್ಲಿ ಇದಕ್ಕೆ ಸಂಬಂಧಪಟ್ಟವರಿಂದ ಪರವಾನಿಗೆ ದೊರಕುವ ನಿರೀಕ್ಷೆ ಇದೆ ಎಂದರು.
ಇದೇ ವೇಳೆಸುದ್ದಿಗೋಷ್ಠಿಯಲ್ಲಿ ಹಾಜರಿದ್ದಬಂಟ್ವಾಳ ರೋಟರಿ ಕ್ಲಬ್ ಬೇಬಿ ಕುಂದರ್ ಅವರು ಮಾಹಿತಿ ನೀಡಿ ಗವರ್ನರ್ ಭೇಟಿಯ ವೇಳೆ ಪೊಳಲಿ ಸರಕಾರಿ ಶಾಲೆಗೆ ಅಡುಗೆ ಕೊಠಡಿಗೆ ೨.೫ ಲಕ್ಷ, ನರಿಕೊಂಬು ಶಾಲಾ ಅಡುಗೆ ಕೊಠಡಿ ಮೇಲ್ಛಾವಣಿಗೆ ೨.೫ ಲಕ್ಷ, ಅಂತರ್ ತರಗತಿ ಧ್ವನಿವರ್ಧಕಕ್ಕೆ ೩ ಲಕ್ಷ ರೂ ನೆರವು ನೀಡಲಾಗಿದೆ ಎಂದರು.
ಬಂಟ್ವಾಳದಲ್ಲಿ ಮೂರು ಹೊಸಕ್ಲಬ್,12 ಸರಕಾರಿ ಶಾಲೆಗಳಲ್ಲಿ ಇಂಟರ್ ಯಾಕ್ಟ್ ಹೊಸಕ್ಲಬ್ ಹಾಗೂ ಕಾಲೇಜ್ ಮಟ್ಟದಲ್ಲಿ ಎರಡು ಇಂಟರ್ ಯಾಕ್ಟ್ ಕ್ಲಬ್ ಗಳನ್ನು ಸ್ಥಾಪಿಸಿದ್ದಲ್ಲದೆ ವಿವಿಧಡೆಯಲ್ಲಿರುವ ಸರಕಾರಿ ಶಾಲೆಗಳಿಗೆ ತರಗತಿ ಕೊಠಡಿ,ಸಭಾಂಗಣ,ಪೀಠೋಪಕರಣ, ಪುಸ್ತಕ,ಮಕ್ಕಳ ವಿದ್ಯಭ್ಯಾಸಕ್ಕಾಗಿಸಹಾಯಧನವನ್ನುನೀಡಲಾಗಿದೆಯಲ್ಲದೆ ಹಲವಾರು ಉಚಿತ ಆರೋಗ್ಯ ಶಿಬಿರವನ್ನು ನಡೆಸಲಾಗಿದೆ.ಕಳೆದ ೫೫ ವರ್ಷಗಳಲ್ಲಿ ತನ್ನದೇ ವೈಶಿಷ್ಟ್ಯಮಯ ಚಟುವಟಿಕೆಯ ಮೂಲಕ ತನ್ನದೇ ಆದ ಛಾಪನ್ನು ಮೂಡಿಸಿದೆ ಎಂದರು.
ರೋಟರಿ ಸಹಾಯಕ ಗವರ್ನರ್ ಮಹಮ್ಮದ್ ವಳವೂರು, ಜಿಲ್ಲಾ ಕಾರ್ಯದರ್ಶಿ ರಿತೇಶ್ ಬಾಳಿಗಾ, ಜೋನಲ್ ಲೆಫ್ಟಿನೆಂಟ್ ಪುಷ್ಪರಾಜ್ ಹೆಗ್ಡೆ, ರೋಟರಿ ಬಂಟ್ವಾಳ ಜೊತೆ ಕಾರ್ಯದರ್ಶಿ ವೀರೇಂದ್ರ ಅಮೀನ್ ಹಾಗೂ ಪೂರ್ವಾಧ್ಯಕ್ಷ ಕೆ.ನಾರಾಯಣ ಹೆಗ್ಡೆ ಉಪಸ್ಥಿತರಿದ್ದರು.