ಗುರುಪುರ: ಗುರುಪುರ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘ(ನಿ)ದ ಅಧ್ಯಕ್ಷರಾಗಿ ವಿನೋದಾ ಡಿ. ಅಂಚನ್ ಆಯ್ಕೆ

ಗುರುಪುರ : ಗುರುಪುರ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘ(ನಿ) ವಾಮಂಜೂರು ಇದರ 2025-2030ನೇ ಸಾಲಿನ ಐದು ರ್ಷಗಳ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ವಿನೋದಾ ಡಿ. ಅಂಚನ್ ಬೆಜ್ಜಿಬೆಟ್ಟು ಅವರು 3ನೇ ಬಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಉಪಾಧ್ಯಕ್ಷೆಯಾಗಿ ಸುನಂದಾ ಕೆ. ರೈ ಹಾಗೂ ನಿರ್ದೇಶಕರಾಗಿ ರತಿ ಶೆಟ್ಟಿ, ಮೋಹಿನಿ ಗೌಡ, ವೀಣಾ ಶೆಟ್ಟಿ, ಕಮಲಾ ಗೌಡ, ಜಯಲಕ್ಷಿö್ಮÃ, ಪ್ರೇಮಾ ಎಂ. ಶೆಟ್ಟಿ, ಜಯಂತಿ, ಪ್ರಮೀಳಾ ಶೆಟ್ಟಿ, ಪುಷ್ಪಾ, ವಿದ್ಯಾಲತಾ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿ ಕಾವ್ಯಾ ಪಿ. ಕೆ., ಅವರ ಸಮ್ಮುಖದಲ್ಲಿ ಫೆ. ೧೪ರಂದು ಚುನಾವಣಾ ಪ್ರಕ್ರಿಯೆ ನಡೆದರೆ, ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ವಸಂತಿ ಸಹಕರಿಸಿದರು.