ಮೈಸೂರು: ಪುರುಷರಿಗೆ ಬಸ್ ಸೀಟು ಬಿಟ್ಟುಕೊಡಿ: ಸರ್ಕಾರದಿಂದ ಆದೇಶ

ಮೈಸೂರು: ಇನ್ನು ಮುಂದೆ ಬಸ್ನಲ್ಲಿ ಮಹಿಳೆಯರಿಗಾಗಿ ಎಂದು ಮೀಸಲಿಟ್ಟಿರುವ ಸಿಟ್ನಲ್ಲಿ ಇನ್ನು ಮುಂದೆ ಪುರುಷರು ಕುಳಿತುಕೊಳ್ಳಬಹುದು ಎಂದು ರಾಜ್ಯ ಸರ್ಕಾರ ಹೇಳಿದೆ. ಈ ಹಿಂದೆ ಮಹಿಲೆಯರಿಗಾಗಿ ಇಟ್ಟಿರುವ ಸಿಟ್ನಲ್ಲಿ ಪುರುಷರು ಕುಳಿತುಕೊಂಡರೆ ದಂಡ ಹಾಕುತ್ತಿದ್ದರು. ಆದರೆ ಇದೀಗ ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆ ಬಂದ ನಂತರ ಇದು ಬದಲಾಗಿದೆ. ಉಚಿತವಾಗಿ ಪ್ರಯಾಣಿಸುವ ಮಹಿಳೆಯರು ಆಸನದಲ್ಲಿ ಪುರುಷರಿಗೆ ಬಿಟ್ಟು ಕೊಡಬಹುದು. ಈ ವಿಚಾರವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮೈಸೂರು ವಿಭಾಗ ಅಧಿಕೃತ ಆದೇಶವನ್ನೂ ಹೊರಡಿಸಿದೆ.
ಮೈಸೂರು ನಗರ ಸಾರಿಗೆ ವಾಹನಗಳಲ್ಲಿನ ಪುರುಷರ ಆಸನದಲ್ಲಿ ಮಹಿಳೆಯರು ಕೂತು ಪ್ರಯಾಣಿಸುತ್ತಿದ್ದರು. ಈ ಬಗ್ಗೆ ಪ್ರಯಾಣಿಕರೊಬ್ಬರು ರಾಜ್ಯ ರಸ್ತೆ ಸಾರಿಗೆ ನಿಗಮದ ಮೈಸೂರು ವಿಭಾಗಕ್ಕೆ ದೂರು ನೀಡಿದ್ದಾರೆ. ಇದೀಗ ಮೈಸೂರು ವಿಭಾಗ ಅದರಂತೆ ತಮ್ಮ ಘಟಕಗಳಿಂದ ಕಾರ್ಯಾಚರಣೆಯಾಗುವ ಎಲ್ಲಾ ವಾಹನಗಳಲ್ಲಿ ಪುರುಷ ಪ್ರಯಾಣಿಕರಿಗೆ ಮೀಸಲಿಸಿರುವ ಆಸನಗಳಲ್ಲಿ ಪುರುಷ ಪ್ರಯಾಣಿಕರು ಕುಳಿತು ಪ್ರಯಾಣ ಮಾಡಲು ಕ್ರಮಕೈಗೊಳ್ಳುವಂತೆ ಎಲ್ಲಾ ಚಾಲನಾ ಸಿಬ್ಬಂದಿಗಳಿಗೆ ಸೂಕ್ತ ತಿಳಿವಳಿಕೆ ನೀಡಲು ಸೂಚಿಸಲಾಗಿದೆ.