ನಿಷ್ಠೆ, ಶ್ರದ್ಧೆ, ಅಚಲ ಮನಸ್ಸು ಯಾವುದೇ ವ್ಯವಹಾರದಲ್ಲಿ ಪ್ರಗತಿ ಗಳಿಸಲು ಸಾಧ್ಯ: ನಳಿನ್ ಕುಮಾರ್ ಕಟೀಲು

ಸ್ವಪ್ನ ಎಂಟರ್ಪ್ರೈಸ್ಸಸ್ ನ ನೂತನ ಕಾರ್ಯಾಲಯದ ಉದ್ಘಾಟನ ಸಮಾರಂಭದಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಯಾವುದೇ ಕೆಲಸ ಕಾರ್ಯದಲ್ಲಿ ಅಚಲವಾದ ಶ್ರದ್ಧೆ ಮುಕ್ತವಾದ ಮನಸ್ಸು ಹಾಗೂ ನಿಷ್ಠೆಯ ಭಾತೃತ್ವ ಇದ್ದಲ್ಲಿ ಅಂತಹ ಯಾವುದೇ ವಾಣಿಜ್ಯ ಸಂಸ್ಥೆಯ ಉದ್ದಿಮೆಯು ಪ್ರಗತಿಯಲ್ಲಿ ನೆಲೆಯೂರಲು ಸಾಧ್ಯ ಈ ನಿಟ್ಟಿನಲ್ಲಿ ಶ್ರೀ ವಿನಯಾನಂದ ಕಾನಡ್ಕ ಇವರ ಯಜಮಾನತ್ವದ ಸ್ವಪ್ನ ಎಂಟರ್ಪ್ರೈಸಸ್ ಸಂಸ್ಥೆಯು ತನ್ನ ಎಲ್ಲಾ ಗ್ರಾಹಕರು ಹಾಗೂ ಸಂಸ್ಥೆಯ ನೌಕರರ ಮಧ್ಯೆ ಅಚಲವಾದ ನಿಷ್ಠೆ ಶ್ರದ್ಧೆಯನ್ನು ಇರಿಸಿಕೊಂಡ ಕಾರಣ ಈ ಸಂಸ್ಥೆ ಸಮಾಜದಲ್ಲಿ ಎಲ್ಲರಿಂದಲೂ ಗುರುತಿಸಿ ಎಲ್ಲರಿಗೂ ಬೇಕಾದ ಆಭರಣವಾಗಿ ಮುಂದುವರಿಯುತ್ತಿರುವುದು ಸಂತಸ ಎಂದು ಹೇಳಿದರು.
ಕಾರ್ಯಕ್ರಮವನ್ನು ಮಂಗಳೂರಿನ ಶ್ರೀ ಮಂಗಳಾ ದೇವಿ ದೇವಸ್ಥಾನದ ಅನುವಂಶಿಕ ಮುಕ್ತೇಸರರಾದ ಶ್ರೀ ಅರುಣ್ ಐತಾಳ್ ರವರು ನೆರವೇರಿಸಿ ವ್ಯಾಪಾರ ಉದ್ದಿಮೆಯಲ್ಲಿ ಗ್ರಾಹಕರು ಮತ್ತು ನೌಕರರ ಮಧ್ಯೆ ಸ್ನೇಹ ಬಾಂಧವ್ಯ ಇಟ್ಟುಕೊಂಡು ಸಂಸ್ಥೆಯ ಉನ್ನತಿಗೆ ಪ್ರಯತ್ನಿಸುತ್ತಿರುವ ವಿನಯಾನಂದರು ಸಮಾಜಕ್ಕೆ ಬೇಕಾದ ವ್ಯಕ್ತಿ ಇವರಿಂದ ಉತ್ತಮ ಸಮಾಜ ಕಾರ್ಯ ನೆರವೇರಲಿ ಇವರ ಸಂಸ್ಥೆ ಉತ್ತರೋತ್ತರ ಬೆಳಗಲಿ ಎಂದು ಆಶೀರ್ವಚನ ನೀಡಿದರು.
ವೇದಿಕೆಯಲ್ಲಿ ಅತಿಥಿಗಳಾಗಿ ಶ್ರೀ ಮಹಾ ಗಣಪತಿ ದೇವಸ್ಥಾನ ಉರ್ವಸ್ಟೋರ್ ಇದರ ಅಧ್ಯಕ್ಷರಾದ ಸುಧೀಂದ್ರ ರಾವ್ ಶ್ರೀ ಮಂಗಳ ದೇವಿ ದೇವಸ್ಥಾನದ ಅನುವಂಶಿಕ ಮುಕ್ತೇಸರರಾದ ಶ್ರೀ ಹರೀಶ್ ಐತಾಳ್, ಎಸ್ ಎಲ್ ಶೇಟ್ ಡೈಮಂಡ್ ಹೌಸ್ ಲೇಡಿಹಿಲ್ ಇದರ ಮಾಲಕರಾದ ರವೀಂದ್ರ ಶೆಟ್ ಸಂಪಿಗೆ ರೆಸಾರ್ಟ್ ಮೂಡಬಿದ್ರೆ ಇದರ ಮಹಾ ಪ್ರಬಂಧಕರಾದ ಪ್ರಸಾದ್ ಎಂ ಜಿ ಹಾಸನ ಹೊಳೆನರಸೀಪುರದ ಪುಟ್ಟರಾಜು ಗೌಡ ಮಂಗಳೂರಿನ ಬಿಗ್ ಸ್ಟೋರ್ಸ್ ಸೂಪರ್ ಮಾರ್ಕೆಟ್ ನ ಮಾಲಕರಾದ ಅಬ್ದುಲ್ ಹಮೀದ್ ಸರ್ವ ಮಂಗಳ ಎಸೋಸಿಯೆಟ್ಸ್ ನ ಶ್ರೀ ನವೀನ್ ಅಂಚನ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು ವೇದಿಕೆಯಲ್ಲಿ ಶ್ರೀಮತಿ ರಾಜೇಶ್ವರಿ ವಿನಯಾನಂದ ಕುಮಾರಿ ಹರ್ಷಿತ ಬಿಕೆ ಏರಿಯಾ ಸೂಪರ್ ವೈಸರ್ ರೂಪೇಶ್ ಕಡಬ ಮಾನವ ಸಂಪನ್ಮೂಲ ಅಧಿಕಾರಿ ಹರ್ಷಿತ್ ಕುಮಾರ್ ಹಾಗೂ ಗಂಗಾಧರ್ ಉಪಸ್ಥಿತರಿದ್ದರು ಶ್ರೀ ಕೆ ವಿನಯಾನಂದ ಕಾರ್ಯಕ್ರಮ ನಿರೂಪಿಸಿದರು ವಾಸುದೇವರಾವ್ ಕುಡುಪು ಸ್ವಾಗತಿಸಿ ವಂದಿಸಿದರು.