ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಪ್ರಮಾಣವಚನ, ಪ್ರಧಾನಿ ಮೋದಿ, ಶಾ ಭಾಗಿ

ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ರೇಖಾ ಗುಪ್ತಾ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರೊಂದಿಗೆ ಆರು ಶಾಸಕರು ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದರಲ್ಲಿ ಪ್ರವೇಶ್ ವರ್ಮಾ, ಮಂಜಿಂದರ್ ಸಿಂಗ್ ಸಿರ್ಸಾ, ರವೀಂದ್ರ ಇಂದ್ರರಾಜ್, ಕಪಿಲ್ ಮಿಶ್ರಾ, ಆಶಿಶ್ ಸೂದ್ ಮತ್ತು ಪಂಕಜ್ ಸಿಂಗ್ ಅವರ ಹೆಸರುಗಳು ಸೇರಿವೆ. ಪ್ರವೇಶ್ ವರ್ಮಾ ಅವರು ನವದೆಹಲಿ ಕ್ಷೇತ್ರದಿಂದ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಿದ್ದಾರೆ.
ಕಪಿಲ್ ಮಿಶ್ರಾ ಕರವಾಲ್ ನಗರದಿಂದ ಶಾಸಕರಾಗಿದ್ದಾರೆ. ಮಂಜಿಂದರ್ ಸಿಂಗ್ ಸಿರ್ಸಾ ರಾಜೌರಿ ಗಾರ್ಡನ್ ಕ್ಷೇತ್ರದ ಶಾಸಕರು. ಆಶಿಶ್ ಸೂದ್ ಜನಕ್‌ಪುರಿಯ ಶಾಸಕರು. ಪಂಕಜ್ ಸಿಂಗ್ ವಿಕಾಸಪುರಿಯ ಶಾಸಕರು. ರವೀಂದ್ರ ಇಂದ್ರರಾಜ್ ಬವಾನದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ.