ಶ್ರೀ ಬಾಲ ಗಣಪತಿ ಸೇವಾ ಟ್ರಸ್ಟ್ ಆಡಳಿತ ಮಂಡಳಿಗೆ ಆಯ್ಕೆ
ಬಂಟ್ವಾಳ : ಶ್ರೀ ಬಾಲ ಗಣಪತಿ ಸೇವಾ ಟ್ರಸ್ಟ್ ರಿಜಿಸ್ಟರ್ಡ್ ಇದರ ಮುಂದಿನ ಮೂರು ವರ್ಷಗಳಿಗೆ ಆಡಳಿತ ಮಂಡಳಿಗೆನೂತನ ಅಧ್ಯಕ್ಷರಾಗಿ ಯಶವಂತ ದೇರಾಜೆಗುತ್ತು ಅವರು ಆಯ್ಕೆಯಾಗಿದ್ದಾರೆ.

ದೇವಸ್ಥಾನದ ವಠಾರದಲ್ಲಿ ತಾ.ಪಂ.ಮಾಜಿ ಅಧ್ಯಕ್ಷ ಯಶವಂತ ದೇರಾಜೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆದಿದೆ.ಉಳಿದಂತೆ ಈ ಕೆಳಗಿನವರು ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ.
ಕೆ ಸದಾನಂದ ಶೆಟ್ಟಿ ಕಾಂತಾಡಿ(ಗೌರವಾಧ್ಯಕ್ಷರು), ಸುರೇಶ್ ಬಂಗೇರ ಆರ್ಯಾಪು,ಜಯಪ್ರಕಾಶ್ ಪೆರ್ವ(ಉಪಾಧ್ಯಕ್ಷರು),ಸುಬ್ರಹ್ಮಣ್ಯ ಭಟ್ ಮಂಜಿನಡ್ಕ(ಪ್ರಧಾನ ಕಾರ್ಯದರ್ಶಿ), ದೇವದಾಸ ಅನ್ನ ಪ್ಪಾಡಿ,ರಮೇಶ ಅನ್ನಪ್ಪಾಡಿ(ಜೊತೆ ಕಾರ್ಯದರ್ಶಿಗಳು),ಲಿಂಗಪ್ಪ ಎಸ್ ದೋಟ(ಸಂಘಟನಾ ಕಾರ್ಯದರ್ಶಿ), ಚಂದ್ರಶೇಖರ ಕೊಳಕೆ(ಕೋಶಾಧಿಕಾರಿ),ಟ್ರಸ್ಟ್ ಸದಸ್ಯರಾಗಿಪ್ರೇಮಾಜಿ ಶೆಟ್ಟಿ,ಕು ಶೇಶಾ ಅನ್ನಪಾಡಿ,ವಿಶ್ವನಾಥ ಬೆಳ್ಚಾಡ ಕೂಡೂರು,ಸುರೇಶ ಪೂಜಾರಿ ಸಾರ್ತಾವು ಆಯ್ಕೆಯಾಗಿದ್ದಾರೆ. ಎಂದು ಟ್ರಸ್ಟ್ ನ ಪ್ರಕಟಣೆ ತಿಳಿಸಿದೆ.ಸುರೇಶ ಬಂಗೇರ ಸ್ವಾಗತಿಸಿದರು. ರಮೇಶ ಅಣ್ಣಪ್ಪ ಡಿ ವಂದಿಸಿದರು.