48 ದಿನಗಳ ಸಂಧ್ಯಾ ಭಜನೆಗೆ ಚಾಲನೆ
ಬಂಟ್ವಾಳ: ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ದೇವಿ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಪ್ರಯುಕ್ತ ಕುಂಭ ನಿಧಿಯ ಉದ್ಘಾಟನೆ ಮತ್ತು 48 ದಿವಸಗಳ ಸಂಧ್ಯಾ ಭಜನೆಗೆ ಚಾಲನೆ ನೀಡಲಾಯಿತು. ಬ್ರಹ್ಮ ಕಲಶ ಸಮಿತಿಯ ಕೋಶಾಧಿಕಾರಿ ಯವರಾದ ಶ್ರೀ ನಾರಾಯಣ ಹೆಗ್ಡೆ ಬಿ. ಸಿ. ರೋಡ್ ಅವರು ಕುಂಭದ ಉದ್ಘಾಟನೆಯನ್ನು ನೆರವೇರಿಸಿದರು.

ಸಂಧ್ಯಾ ಭಜನೆಯನ್ನುರಕ್ತೇಶ್ವರಿ ದೇವಿ ದೇವಸ್ಥಾನದ ಅರ್ಚಕರಾದ ಶ್ರೀಮತಿ ಮತ್ತು ಶ್ರೀ ರಘುಪತಿ ಭಟ್ ಅವರು ದೀಪ ಪ್ರಜ್ವಲನೆಗೈದು ಚಾಲನೆನೀಡಿದರು.ಶ್ರೀಮತಿ ಮತ್ತು ಶ್ರೀ ಗೋಪಾಲ ಸುವರ್ಣ,ಶ್ರೀಮತಿ ಮತ್ತು ಶ್ರೀ ರಾಜೇಶ್ ಎಲ್ ನಾಯಕ್, ಶ್ರೀಮತಿ ಮತ್ತು ಶ್ರೀ ಸೋಮನಾಥ ನಾಯ್ಡು , ಮತ್ತು ಸದಸ್ಯರಾದ ಶ್ರೀಮತಿ ಮತ್ತು ಶ್ರೀ ಶ್ರೀಧರ ಮಲ್ಲಿ, ಸೇವಾ ಸಮಿತಿಯ ಅಧ್ಯಕ್ಷರಾದ ಬಿ ವಿಶ್ವನಾಥ , ಕಾರ್ಯದರ್ಶಿ ಶಿವಶಂಕರ್,ಕೋಶಾಧಿಕಾರಿ ಬಿ.ಮೋಹನ್, ಸದಸ್ಯರಾದ ಸತೀಶ್ ಕುಮಾರ್, ಬ್ರಹ್ಮ ಕಲಶ ಸಮಿತಿಯ ಕಾರ್ಯಾಧ್ಯಕ್ಷರಾದ ಸಂಜೀವ ಪೂಜಾರಿ ಗುರುಕೃಪ ,ಸಹ ಕೋಶಾಧಿಕಾರಿ ವಸಂತ್ ರಾವ್, ಸಮಿತಿಯ ಉಪಾಧ್ಯಕ್ಷರಾದ ಚಂದ್ರಹಾಸ ಶೆಟ್ಟಿ ರಂಗೋಲಿ, ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಐತಪ್ಪ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು, ಶ್ರೀವತ್ಸ ಭಟ್ ಮತ್ತು ಸುದರ್ಶನ್ ಸಹಕರಿಸಿದರು.