ಕುಮ್ದೇಲ್ : ಶ್ರೀ ಕೋರ್ದಬ್ಬು ದೈವಸ್ಥಾನ. ಪುನಃ ಪ್ರತಿಷ್ಠ ಕಲಶಾಭಿಷೇಕ ಆಮಂತ್ರಣ ಪತ್ರಿಕೆ ಬಿಡುಗಡೆ
ಬಂಟ್ವಾಳ : ತಾಲೂಕಿನ ಪುದು ಗ್ರಾಮದ ಕುಮ್ದೇಲ್ ಇಲ್ಲಿ ಶ್ರೀ ನಾಗಬ್ರಹ್ಮ ಸನ್ನಿಧಿ ಶ್ರೀ ಕೋರ್ದಬ್ಬು ದೈವಸ್ಥಾನವು ಸುಮಾರು 1.25 ಕೋ. ರೂ ವೆಚ್ಚದಲ್ಲಿ ಶಿಲಾಮಯವಾಗಿ ಪುನರ್ ನಿರ್ಮಾಣಗೊಂಡ ಶ್ರೀ ಕೋರಬ್ಬು, ತನ್ನಿಮಾನಿಗ, ಪರಿವಾರ ದೈವಗಳ ಪುನರ್ ಪ್ರತಿಷ್ಠೆ, ಕಲಶಾಭಿಷೇಕ ಹಾಗೂ75ನೇ ವಾರ್ಷಿಕ ನೇಮೋತ್ಸವವು ವೇ.ಮೂ. ಪೊಳಲಿ ಶ್ರೀ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ಎ.20 ರಿಂದ ಎ. 25ರ ತನಕ ನಡೆಯಲಿದ್ದು ಅ ಪ್ರಯುಕ್ತ ಆಮಂತ್ರಣ ಪತ್ರಿಕೆ ಬಿಡುಗಡೆಯು ಕ್ಷೇತ್ರದ ಸಾನಿಧ್ಯದಲ್ಲಿ ಭಾನುವಾರ ನಡೆಸಲಾಯಿತು.

ದೈವಸ್ಥಾನ ಪುನರ್ ನಿರ್ಮಾಣ ಸಮಿತಿಯ ಕಾರ್ಯಧ್ಯಕ್ಷ ಐತಪ್ಪ ಆಳ್ವ ಸುಜೀರುಗುತ್ತು, ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ಸನಾತನ ಹಿಂದೂ ಧರ್ಮದ ಆಚಾರ,ವಿಚಾರ, ಸಂಪ್ರದಾಯಗಳನ್ನು ಗೌರವಿಸಿ, ಜಾತಿ,ಮತ,ಪಂತ,ಬೇಧವಿಲ್ಲದೆ ಎಲ್ಲರೂ ಶ್ರದ್ಧಾಭಕ್ತಿಯಿಂದ ಧಾರ್ಮಿಕ ಆಚರಣೆಗಳಲ್ಲಿ ತೊಡಗಿಸಿಕೊಂಡು ಹಿಂದೂ ಸಮಾಜದ ಉನ್ನತಿಗೆ ಪಣ ತೊಡಬೇಕು ಎಂದರು.
ಕ್ಷೇತ್ರದ ಆಡಳಿತ ಮುಕ್ತೇಸರ ಭಾಸ್ಕರ ಚೌಟ ಕುಮ್ದೇಲ್ ,ಗೌರವಾಧ್ಯಕ್ಷ ಉಮೇಶ್ ಶೆಟ್ಟಿ ಬರ್ಕೆ ,ಕೋಶಾಧಿಕಾರಿ ಕೆ ಹರಿಕೃಷ್ಣ ಪಂಡಿತ್ಮಾತನಾಡಿದರು.
ವೇದಿಕೆಯಲ್ಲಿ ಪುನರ್ ನಿರ್ಮಾಣ ಸಮಿತಿಯ ಗೌರವಧ್ಯಕ್ಷರಾದ ಪ್ರಕಾಶ್ಚಂದ್ರ ರೈ ದೇವಸ್ಯ,ಅಧ್ಯಕ್ಷ ಉಮೇಶ್ ಸಾಲ್ಯಾನ್ ಬೆಂಜನಪದವು, ಕಾರ್ಯಧ್ಯಕ್ಷರಾದ ಚಂದ್ರಶೇಖರ ಗಾಂಭೀರ ಸುಜೀರುಗುತ್ತು,ಪ್ರಮುಖರಾದ ಗಣೇಶ್ ಸುವರ್ಣ ತುಂಬೆ, ರಾಧಾಕೃಷ್ಣ ತಂತ್ರಿ ಬೆಂಜನಪದವು,ಗುರಿಕಾರ ವೆಂಕಪ್ಪ ಕುಮ್ದೇಲ್, ಟ್ರಸ್ಟಿಗಳಾದ ವಿಠ್ಠಲ ಸಾಲಿಯಾನ್ ಕುಮ್ದೇಲ್ , ದೇವದಾಸ ಚೌಟ ಹರೀಶ್ ಪೆಲಪಾಡಿ ಉಪಸ್ಥಿತರಿದ್ದರು.
ರಾಜೇಶ್ ಕುಲಾಲ್ ಸ್ವಾಗತಿಸಿದರು.ಜಗದೀಶ ಕಡೆಗೋಳಿ ವಂದಿಸಿದರು.