ಯುವ ಪೀಳಿಗೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಹೈನು ಸಂಪತ್ತು ಉಳಿಸುವ ಕೆಲಸ ಮಾಡಬೇಕಾಗಿದೆ. ಕೆ.ಪಿ ಸುಚರಿತ ಶೆಟ್ಟಿ
ಪೊಳಲಿ: ಯುವ ಜನತೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಹೈನು ಸಂಪತ್ತನ್ನು ಉಳಿಸುವ ಕೆಲಸ ಮಾಡಬೇಕಾಗಿದೆ ಎಂದು ದ.ಕ.ಹಾಲು ಒಕ್ಕೂಟದ ಅಧ್ಯಕ್ಷರಾದ ಕೆ.ಪಿ ಸುಚರಿತ ಶೆಟ್ಟಿ ಹೇಳಿದರು. ಅವರು ಫೆ.೧೭ರಂದು ಸೋಮವಾರ ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.

ದ.ಕ ಹಾಲು ಒಕ್ಕೂಟದ ಉಪಾಧ್ಯಕ್ಷರಾದ ಎಸ್ ಬಿ. ಜಯರಾಮ ರೈಯವರು ದೀಪ ಪ್ರಜ್ವಲನೆಯನ್ನು ಮಾಡಿ ಶುಭ ಹಾರೈಸಿದರು.


ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಆಡಳಿತಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ದ.ಕ.ಹಾಲು ಒಕ್ಕೂಟದ ನಿರ್ದೇಶಕಿ ಸವಿತಾ ಎನ್ ಶೆಟ್ಟಿ,ವ್ಯವಸ್ಥಾಪಕ ನಿರ್ಧೇಶಕರಾದ ವಿವೇಕ್ ಡಿ. ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮೀ ,ಉಪಾಧ್ಯಕ್ಷರಾದ ರಾಧಕೃಷ್ಣ ತಂತ್ರೀ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಯನ ಕುಮಾರಿ, ದ.ಕ ಹಾಲು ಒಕ್ಕೂಟದ ಮಾಜಿ ನಿರ್ದೇಶಕರಾದ ರಾಧಕೃಷ್ಣ ರೈ ಬೂಡಿಮಾರು, ಉಪ ವ್ಯವಸ್ಥಾಪಕರಾದ ಡಾ.ಚಂದ್ರಶೇಖರ ಭಟ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಎ.ಎಚ್ ರಂಗನಾಥ್ ಅಮ್ಮುಂಜೆ ವಹಿಸಿದ್ದರು.


ಕಟ್ಟಡ ಸಮಿತಿ ಸದಸ್ಯರಾದ ಅಬುಬಕ್ಕರ್ ಸ್ವಾಗತಿಸಿ ಕಾರ್ಯದರ್ಶಿ ರಾಮ ಮೂಲ್ಯ ವಂದಿಸಿದರು, ದ.ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಜಗದೀಶ ಎ.ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭದಲ್ಲಿ ಕರುಣಾಕರ ಆಳ್ವ , ಅಬುಬಕ್ಕರ್, ರಾಧಕೃಷ್ಣ ರೈ ಬೂಡಿಮಾರು, ಅಮ್ಮುಂಜೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎ.ಎಚ್ ರಂಗನಾಥ್ ಅಮ್ಮುಂಜೆ, ಅಮ್ಮುಂಜೆ ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಮೋಂತು ಮರಿಯನ್ ಫೆರ್ನಾಂಡಿಸ್, ಕಾರ್ಯದರ್ಶಿ ರಾಮ ಮೂಲ್ಯ,ಅವರನ್ನು ಅಭಿನಂದಿಸಲಾಯಿತು.



