ಬಂಟ್ವಾಳ:ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಭ ಕ್ಷೇತ್ರದಲ್ಲಿ ವರ್ಷಾವಧಿ ಜಾತ್ರಮಹೋತ್ಸವಕ್ಕೆ ಚಾಲನೆ

ಬಂಟ್ವಾಳ: ಪಾಣೆಮಂಗಳೂರಿಗೆ ಸಮೀಪದ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಭ ಕ್ಷೇತ್ರದಲ್ಲಿ
ವರ್ಷಾವಧಿ ಜಾತ್ರಮಹೋತ್ಸವಕ್ಕೆ ಬುಧವಾರ ರಾತ್ರಿ ಚಾಲನೆ ನೀಡಲಾಯಿತು.ಇದರ ಪ್ರಯುಕ್ತ ಪೂರ್ವಕಟ್ಟು ಸಂಪ್ರದಾಯದಂತೆ ಸಜೀಪ ಶ್ರೀ ನಾಲ್ಕೈತ್ತಾಯ ದೈವದ ಭಂಡಾರ ಅಗಮಿಸಿ ದೈವದ ಅಪ್ಪಣೆ ಪಡೆದು ಬ್ರಹ್ಮಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಧ್ವಜಾರೋಹಣ ದೊಂದಿಗೆ ಐದು ದಿನದ ಜಾತ್ರಾ ಮಹೋತ್ಸವ ಆರಂಭಗೊಂಡಿತು.
ಸಜೀಪ ಮಾಗಣೆ ತಂತ್ರಿಗಳಾದ ಎಂ.ಸುಬ್ರಹ್ಮಣ್ಯ ಭಟ್, ಅರ್ಚಕ ಮಹೇಶ್ ಭಟ್ ,ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆ. ಪ್ರಭಾಕರ ಶೆಟ್ಟಿ,ಅಭಿವೃದ್ಧಿ ಸಮಿತಿ ಅಧ್ಯಕ್ಷ ನೋಯಿ ಶಶಿರಾಜ ರಾವ್,ದೇವಳದ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್, ಮಾಡದಾರುಗುತ್ತು ಗಡಿ ಪ್ರಧಾನರಾದ ನಾರಣ ಆಳ್ವ ಯಾನೆ ಶಶಿಧರ ರೈ, ಮಾಗಣೆಯಗುತ್ತು ಮನೆತನದವರು, ವ್ಯವಸ್ಥಾಪನ ಸಮಿತಿ ಸದಸ್ಯರು,ಗ್ರಾಮಸ್ಥರು,ಭಗವದ್ಬಕ್ತರು ಉಪಸ್ಥಿತರಿದ್ದರು.ಬಳಿಕ ಪ್ರಥಮ ದಿನದ ದೇವರ ಬಲಿ ಉತ್ಸವ, ಅನ್ನದಾನ ಜರಗಿತು.