ಬಂಟ್ವಾಳ: ಕುಲಾಲ ಸೇವಾ ಸಂಘ ಹಾಗೂ ಮಹಿಳಾ ಘಟಕ ತುಂಬೆ ಇದರ ವಾರ್ಷಿಕೋತ್ಸವ

ಬಂಟ್ವಾಳ: ಕುಲಾಲ ಸೇವಾ ಸಂಘ ಹಾಗೂ ಮಹಿಳಾ ಘಟಕ ತುಂಬೆ ಇದರ ವಾರ್ಷಿಕೋತ್ಸವ ಹಾಗೂ ಮಹಾಸಭೆಯು ತುಂಬೆ ರಾಮಲ್ ಕಟ್ಟೆಯ ಶಾರದಾ ಸಭಾಭವನದಲ್ಲಿ ನಡೆಯಿತು. ವಾರ್ಷಿಕೋತ್ಸವವನ್ನು ಸಂಘದ ಅಧ್ಯಕ್ಷರಾದ ಶಿವಕುಮಾರ್ ಉದ್ಘಾಟಿಸಿದರು.ಮಧ್ಯಾಹ್ನದ ಬಳಿಕ ನಡೆದ ಸಂಘದ ಮಹಾಸಭೆಯನ್ನು ರಾ. ರಾ. ಸಂ. ಫೌಂಡೇಶನ್ನ ಅಧ್ಯಕ್ಷರಾದ
ರಾಧಾಕೃಷ್ಣ ಬಂಟ್ವಾಳ್ ಉದ್ಘಾಟಿಸಿ ಮಾತನಾಡಿ ತುಂಬೆ ಕುಲಾಲ ಸೇವಾ ಸಂಘದ ಕಾರ್ಯಚಟುವಟಿಕೆಗಳು ಇತರ ಸಂಘಗಳಿಗೆ ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರಿನ ನ್ಯಾಯವಾದಿ ರಾಮಪ್ರಸಾದ್ ಮಾತನಾಡಿ ಕುಲಾಲ ಸಮಾಜದ ಆರ್ಥಿಕವಾಗಿ ಹಿಂದುಳಿದವರನ್ನು ಕೇಂದ್ರವಾಗಿಟ್ಟು ಕಾರ್ಯಕ್ರಮಗಳನ್ನು ರೂಪಿಸಿ ಸಮಾಜದ ಮುಖ್ಯ ವಾಹಿನಿಗೆ ಬರುವಂತೆ ಮಾಡುವ ಕಾರ್ಯ ಶ್ಲಾಘನೀಯವಾಗಿದೆ ಎಂದರು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಶಿವಕುಮಾರ್ ವಹಿಸಿದ್ದರು. ಮಹಿಳಾ ಘಟಕದ ಅಧ್ಯಕ್ಷೆ ಲತಾಗೋಪಾಲ ಗೋವಿಂತೊಟ,ಉಪಾಧ್ಯಕ್ಷೆ ಪ್ರಿಯಾಸತೀಶ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಬಲೆ ತೆಲಿಪಲೆ ಖ್ಯಾತಿಯ ನಿತಿನ್ ತುಂಬೆ,ಪ್ರಗತಿಪರ ಕೃಷಿಕೆ ಹೊನ್ನಮ್ಮ ಕೂಸಪ್ಪಮೂಲ್ಯ ಪ್ರತಿಭಾನ್ವಿತ ವಿದ್ಯಾರ್ಥಿನಿಯರಾದ ಕು. ನಿಧಿಷಾ,ಕು. ಸಂಜನಾ ಇವರನ್ನು ಗೌರವಿಸಲಾಯಿತು.ಹರೀಶ್ ಪೆರ್ಲಬೈಲು ಮತ್ತು ಉಮಾ ಲಿಂಗಪ್ಪ ಸನ್ಮಾನ ಪತ್ರವನ್ನು ವಾಚಿಸಿದರು.ಕು. ನಿಧಿಷಾ ಪ್ರಾರ್ಥಿಸಿದರು. ಸಂಘಟನಾ ಕಾರ್ಯದರ್ಶಿ ಭಾಸ್ಕರ್ ಕುಲಾಲ್ ಸ್ವಾಗತಿಸಿದರು.ಗೌರವ ಸಲಹೆಗಾರರಾದ ಶೇಷಪ್ಪ ಮಾಸ್ಟರ್ ಪ್ರಸ್ತಾವನೆಗೈದರು. ಸದಾನಂದ ಕುಲಾಲ್ ವರದಿ ವಾಚಿಸಿದರು.ಇದಕ್ಕು ಮೊದಲು ಮಕ್ಕಳಿಗೆ ಹಾಗೂ ಸಂಘದ ಸದಸ್ಯರಿಗೆ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು.
ಶಿಕ್ಷಕಿ ಭಾರತಿ ಶೇಷಪ್ಪ, ಕು. ಧನ್ಯ ಮತ್ತು ದಿನೇಶ್ ಪೆರ್ಲಬೈಲ್ ,ಹರೀಶ್ ಪೆರ್ಲಬೈಲು, ಅಶೋಕ್ ರಾಮಲ್ ಕಟ್ಟೆ, ಕೃಷ್ಣ ಪೆರ್ಲಬೈಲು ಐತಪ್ಪ ಕುಲಾಲ್, ಸಂದೀಪ್ ಕುಲಾಲ್, ಗೋಪಾಲ್ ಬೊಲ್ಲಾರಿ, ಶೇಷಪ್ಪ ಮಾಸ್ಟರ್, ಕೀರ್ತಿಶ್ ಕುಲಾಲ್,ಲಿಂಗಪ್ಪ ಕುಲಾಲ್, ಶೋಭಾ ಭಾಸ್ಕರ್, ಶೋಭಾ ಸದಾನಂದ್, ಮಾಲತಿ ದಿನೇಶ್, ಭಾರತಿ ಐತಪ್ಪ, ಬಬಿತ ಅಶೋಕ್, ಮಿತುಲಾ ಕಿಶೋರ್ ವಿವಿಧ ವ್ಯವಸ್ಥೆಗಳಿಗೆ ಸಹಕರಿಸಿದರು. ಕಾರ್ಯದರ್ಶಿ ಸಂದೀಪ್ ಮುದಲ್ಮೆ ವಂದಿಸಿದರು. ಸೌಮ್ಯದಿವಾಕರ, ಭಾರತಿ ಶೇಷಪ್ಪ ಕಾರ್ಯಕ್ರಮ ನಿರೂಪಿಸಿದರು.