ಬಂಟ್ವಾಳ: ಪುಂಚಮೆ ಹಾಲು ಉತ್ಪಾದಕರ ಸಾಹಕಾರಿ ಸಂಘದ ಅಧ್ಯಕ್ಷರಾಗಿ ವಾಮನ ಪೂಜಾರಿ ಸೂರ್ಲ ಆಯ್ಕೆ

ಬಂಟ್ವಾಳ: ಪುಂಚಮೆ ಹಾಲು ಉತ್ಪಾದಕರ ಸಾಹಕಾರಿ ಸಂಘದ ಅಧ್ಯಕ್ಷರಾಗಿ ವಾಮನ ಪೂಜಾರಿ ಸೂರ್ಲ ಆಯ್ಕೆ ಆಗಿದ್ದಾರೆ. ಉಪಾಧ್ಯಕ್ಷರಾಗಿ ರಾಧಕ್ರಷ್ಣ ರೈ ಆಯ್ಕೆ ಮಾಡಲಾಗಿದೆ. ಇನ್ನು ವಿಸ್ತರಣಾಧಿಕಾರಿ ಜಗದೀಶ್ ಅವರು ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಎರಡನೇ ಬಾರಿಗೆ ವಾಮನ ಪೂಜಾರಿ ಸೂರ್ಲ ಹಾಗೂ ಉಪಾಧ್ಯಕ್ಷರಾಗಿ ರಾಧಕ್ರಷ್ಣ ರೈ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಪುಂಚಮೆ ಹಾಲು ಉತ್ಪಾದಕರ ಸಾಹಕಾರಿ ಸಂಘದಲ್ಲಿ 5 ವರ್ಷಕ್ಕೊಮ್ಮೆ ನಡೆಯುವ ಆಡಳಿತ ಚುನಾವಣೆಯಲ್ಲಿ 13 ಸ್ಥಾನಗಳಲ್ಲಿ 11 ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಅದರಲ್ಲಿ ಎರಡು ಸ್ಥಾನ ಉಳಿದಿದೆ.
ಸಾಮಾನ್ಯ ಕ್ಷೇತ್ರದಿಂದ ವಾಮನ ಪೂಜಾರಿ ಸೂರ್ಲ, ಯಾದವ ಮೂಲ್ಯ, ವಾಮನ ಪೂಜಾರಿ ತೋಡಬಳಿ, ಚಾರ್ಲ್ಸ್ ಡಿಸೋಜಾ, ಸುಂದರ ಮೂಲ್ಯ, ಅಣ್ಣು ಮೂಲ್ಯ, ಮೋಹಿನಿ, ಹಿ.ವರ್ಗದಿಂದ ರಾಧಾಕೃಷ್ಣ ರೈ, ಮಹಿಳಾ ವರ್ಗದಿಂದ ಲೀಮಾ ಲೋಬೋ, ವೃಂದಾಕ್ಷಿ, ಪ,ಜಾ.ವರ್ಗದಿಂದ ಸರೋಜಿನಿ ಆಯ್ಕೆಯಾಗಿದ್ದಾರೆ. ಇನ್ನು ಹಿ.ವರ್ಗದಿಂದ ಹಾಗೂ ಪ.ಪ.ಯಿಂದ ಯಾವುದೇ ಅರ್ಜಿ ಸಲ್ಲಿಕೆ ಆಗಿರದ ಕಾರಣ ಆ ಎರಡು ಸ್ಥಾನಗಳು ಖಾಲಿ ಉಳಿದಿದೆ.