ಕಲ್ಲಡ್ಕ ಶಾಲೆಯಲ್ಲಿ ಮಕ್ಕಳ ಸಾಮೂಹಿಕ ಹುಟ್ಟುಹಬ್ಬ ಮತ್ತು ಭಜನಾ ಕಾರ್ಯಕ್ರಮ
ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಹಿರಿಯ ಪಾಥಮಿಕ ಶಾಲೆಯ ಜನವರಿ ತಿಂಗಳಲ್ಲಿ ಹುಟ್ಟಿದ ಮಕ್ಕಳ ಹುಟ್ಟುಹಬ್ಬ ಮತ್ತು ಭಜನಾ ಕಾರ್ಯಕ್ರಮ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ’‘ನಳಂದ ನೃತ್ಯ ನಿಪುಣೆ’ ಪ್ರಶಸ್ತಿ ಪುರಸ್ಕೃತೆ, ಲೆಕ್ಕ ಪರಿಶೋಧಕಿಯಾಗಿರುವ ವಿದೂಷಿ ದಿವ್ಯಾ ಪ್ರಭಾತ್ ಮಾತನಾಡಿ, ನಾವು ಹೋಗುವ ದಾರಿ ಸರಿಯಾಗಿದ್ದರೆ ಸುನೀತಿಯಿಂದ ಸುಸಂತ್ಕೃರಾಗಿ ಬಾಳಬಹುದು. ಜೀವನದುದ್ದಕ್ಕೂ ವಿದ್ಯೆಗಿಂತ ದೊಡ್ಡ ಮಹತ್ತರವಾದ ಧನವು ಇನ್ನೊಂದು ಇಲ್ಲ. ಪ್ರತಿಯೊಬ್ಬರು ಭಾರತೀಯ ಶಾಸ್ತ್ರೀಯ ಕಲೆಯ ಅಭ್ಯಾಸ ಹಾಗೂ ಅಧ್ಯಯನ ಮಾಡಬೇಕು ಎಂದು ಹೇಳಿದರು.

ವಿದ್ವಾನ್ ದೀಪಕ್ ಕುಮಾರ್ ಅವರು ವಿದುಷಿ ದಿವ್ಯಾ ಪ್ರಭಾತ್ ಅವರನ್ನು ಪರಿಚಯಿಸಿದರು. ಈ ಸಂದರ್ಭ ವಿದುಷಿ ದಿವ್ಯಾ ಪ್ರಭಾತ್ ಅವರನ್ನು ಸನ್ಮಾನಿಸಲಾಯಿತು.
ಇದಕ್ಕು ಮೊದಲು ವಿದುಷಿ ದಿವ್ಯಾ ಪ್ರಭಾತ್ ಅವರು ಶಾರದಾ ಸ್ತುತಿಯೊಂದಿಗೆ ಶಿವ ಹಾಗೂ ಶ್ರೀಕೃಷ್ಣನ ಬಾಲಲೀಲೆಗಳನ್ನು ಭರತನಾಟ್ಯ ನೃತ್ಯರೂಪಕ ಮೂಲಕ ಪ್ರದರ್ಶಿಸಿದರು.
ನಂತರ ೨ನೇ ತರಗತಿಯ ವಿದ್ಯಾರ್ಥಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.
ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಅಭಿನಂದಿಸಲಾಯಿತು.
ಅಧ್ಯಾಪಕ ವೃಂದವು ಹುಟ್ಟುಹಬ್ಬ ಆಚರಿಸಿಕೊಳ್ಳುವ ಮಕ್ಕಳಿಗೆ ಆರತಿ ಬೆಳಗಿ, ಅಕ್ಷತೆ ಹಾಕಿ, ತಿಲಕಧಾರಣೆ ಮಾಡಿ, ಸಿಹಿ ನೀಡಿದರು. ವಿದ್ಯಾರ್ಥಿಗಳು ಭಾರತಮಾತೆಗೆ ಪುಷ್ಪಾರ್ಚನೆ ಮಾಡಿ, ನಿಧಿ ಸಮರ್ಪಿಸಿದರು.
ವಿದ್ಯಾರ್ಥಿ ಅಪ್ರಮೇಯ ತೋಳ್ಪಾಡಿ ಎಸ್ ವೈಯುಕ್ತಿಕ ಗೀತೆ ಹಾಡಿದನು.
ವಿದುಷಿ ದಿವ್ಯಾ ಪ್ರಭಾತ್ ಅವರ ಮಾತೃಶ್ರೀ ಹಾಗೂ ವಿದ್ವಾನ್ ದೀಪಕ್ ಕುಮಾರ್ ಅವರ ಮಾತೃಶ್ರೀ ಮತ್ತು ಸಹೋದರ ಹಾಗೂ ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು ಉಪಸ್ಥಿತರಿದ್ದರು.
ಅಧ್ಯಾಪಕರಾದ ಸುಮಂತ್ ಆಳ್ವ ಸ್ವಾಗತಿಸಿ , ವಿದ್ಯಾರ್ಥಿನಿಯರಾದದ ಇಶಿಕಾ ವಂದಿಸಿದರು. ಶ್ರೀಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು,