ಮದರಸ ಆರಂಭಿಸಲು ಹುನ್ನಾರ : ಕ್ರಮಕ್ಕೆ ಆಗ್ರಹಿಸಿ ಗ್ರಾ.ಪಂ.ಗೆ ಮನವಿ
ಬಂಟ್ವಾಳ: ಸರಕಾರಿ ಜಾಗದಲ್ಲಿ ಸ್ಥಳೀಯಗ್ರಾಮ ಪಂಚಾಯತ್ ನ ಅನುಮತಿ ಇಲ್ಲದೆ ಅಕ್ರಮವಾಗಿ ಕಟ್ಟಡ ನಿರ್ಮಿಸಿ ಅದರಲ್ಲಿ ಮದರಸ ಆರಂಭಿಸಲು ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿರುವ ಗ್ರಾಮಸ್ಥರು ಇದನ್ನು ತಡೆ ಹಿಡಿಯುವಂತೆ ಕರಿಯಂಗಳ ಗ್ರಾಮ ಪಂಚಾಯತ್ ಗೆ ಮನವಿ ಸಲ್ಲಿಸಿದ್ದಾರೆ.

ಬಂಟ್ವಾಳ ತಾಲೂಕಿನ ಕರಿಯಂಗಳ ಸಮೀಪದ ಪುಂಚಮೆಯಲ್ಲಿ ಸರ್ವೇ ನಂಬರ್ 152/2A2 -0.20 ಸೆಂಟ್ಸ್ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಿಸಿ ಅದರಲ್ಲಿ ಮದರಸ (ಇಸ್ಲಾಮಿಕ್ ಎಜುಕೇಶನ್ ಸೆಂಟರ್) ಮದರಸ ನಿರ್ಮಾಣಕ್ಕೆ ಯತ್ನಿಸಲಾಗುತ್ತಿದೆ.
ಇದಕ್ಕೆಕರಿಯಂಗಳ ಗ್ರಾಮ ಪಂಚಾಯಿತ್ ನಿಂದ ಅನುಮತಿ ಪಡೆಯದೆ ಕಟ್ಟಡ ನಿರ್ಮಿಸಿ ಇದೀಗ ಮಸೀದಿ ನಿರ್ಮಿಸಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಬಗ್ಗೆ ಗ್ರಾಮಸ್ಥರು ಗ್ರಾಮ ಪಂಚಾಯಿತ್ ಗೆ ದೂರು ನೀಡಿದ್ದಲ್ಲದೆ ಜಿಲ್ಲಾಧಿಕಾರಿ ಹಾಗೂ ತಹಶಿಲ್ದಾರ್ ಅವರಿಗೂ ಮನವಿ ಮಾಡಿದ್ದರೂ, ಕರಿಯಂಗಳ ಗ್ರಾಮ ಪಂಚಾಯಿತಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಮಂಗಳವಾರ ಸ್ಥಳೀಯರು ಗ್ರಾಮ ಪಂಚಾಯಿತ್ ಗೆ ತೆರಳಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಗ್ರಾಮದ ಪ್ರಮುಖರಾದ ವೆಂಕಟೇಶ್ ನಾವಡ ಪೊಳಲಿ , ಯಶವಂತ್ ಪೊಳಲಿ , ರೋಶನ್ ಅಮೀನ್ , ಲೋಕೇಶ್ ಭರಣಿ, ಯೋಗೀಶ್ ಪುಂಚಮೆ,ಶಶಿರಾಜ್ ಹಾಗೂ ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.