Published On: Fri, Feb 7th, 2025

ಫೆ.11-13 ವರೆಗೆ ಕಟ್ಟೆಮಾರು ಕ್ಷೇತ್ರದಲ್ಲಿ ವಾರ್ಷಿಕ ಕೋಲೋತ್ಸವ

ಬಂಟ್ವಾಳ : ತಾಲೂಕಿನ  ಶ್ರೀ ಮಂತ್ರ ದೇವತಾ ಕ್ಷೇತ್ರ ಸಾನಿದ್ಯ ಕಟ್ಟೆಮಾರು ಶ್ರೀ ಮಂತ್ರ ದೇವತೆ, ಸ್ವಾಮಿ ಕೊರಗಜ್ಜ ಮತ್ತು ಶ್ರೀ ಗುಳಿಗ ದೈವಗಳ ವಾರ್ಷಿಕ ಕೋಲೋತ್ಸವ ಕಾರ್ಯಕ್ರಮವು  ಫೆ. 11 ರಿಂದ 13 ರ ವರೆಗೆ ನಡೆಯಲಿದೆ ಎಂದು ಕ್ಷೇತ್ರದ ಧರ್ಮದರ್ಶಿ  ಮನೋಜ್ ಕುಮಾರ್ ಕಟ್ಟೆಮಾರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫೆ‌ 11ರಂದು ಬೆಳಿಗ್ಗೆ 10 ಗಂಟೆಗೆ ಶ್ರೀ ಸತ್ಯನಾರಾಯಣ ಪೂಜೆ, ದೈವದ ದರ್ಶನ ಸೇವೆ ಬಳಿಕ ಅನ್ನಸಮಕತರ್ಪಣೆ ಜರಗಲಿದೆ.
ಮಧ್ಯಾಹ್ನ ಗಂಟೆ 2 ರಿಂದ ಭಜನಾ ಸಂಕೀರ್ತನೆ ನೆರವೇರಲಿದೆ.
ಸಂಜೆ ಗಂಟೆ 6 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ,7:00 ಗಂಟೆಗೆ  ಮೋಹನ್ ಚೌಟ ಪುಂಚೋಳಿಮಾರು ಗುತ್ತು ರವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ಜರಗಲಿದೆ

ಮಧ್ಯ ಪ್ರದೇಶ ಉಜ್ಜಯಿನಿ ಯ ಅಖಿಲ ಭಾರತೀಯ ನಾಥ ಸಂಪ್ರದಾಯ ಬರ್ತ್ರ್ ವರಿ ಗುಫಾ ಮಠಾಧೀಶರಾದ ಯೋಗಿ ಪೀರ್ ರಾಮನಾಥ್ ಜಿ ಮಹಾರಾಜ್ ಆಶೀರ್ವಚನ ನೀಡಲಿದ್ದಾರೆ.ಹಲವಾರು ಗಣ್ಯರು ಮುಖ್ಯ ಅತಿಥಿಗಳಾಗಿ  ಭಾಗವಹಿಸಲಿರುವರು.
ಬಳಿಕ ದೊಂದಿಬೆಳಕಿನಲ್ಲಿ ಶ್ರೀ ಮಂತ್ರ ದೇವತೆ ದೈವದ ವೈಭವದ ಕೋಲೊತ್ಸವ* ಜರಗಲಿದೆ.
ಫೆ. 12 ರಂದು ಸಂಜೆ 7:00ಗೆ ಸ್ವಾಮಿ ಕೊರಗಜ್ಜ ಹಾಗೂ ಶ್ರೀ ಗುಳಿಗ ದೈವಗಳ ಕೋಲೊತ್ಸವ ನಡೆಯಲಿದ್ದು, 13 ರಂದು ದೈವಗಲಿಗೆ  ಅಗೇಲು ಸೇವೆ ಜರಗಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter