ಪಚ್ಚನಾಡಿ ಕೆರಮದ ಸರ್ಕಾರಿ ಜಾಗದಲ್ಲಿ ಅನಧಿಕೃತ ಮನೆಗಳ ನಿರ್ಮಾಣ
ಕಾಮಗಾರಿ ಸ್ಥಗಿತಕ್ಕೆ ಮನಪಾ ನೋಟೀಸು
ಕೈಕಂಬ : ಮಂಗಳೂರು ಮಹಾನಗರ ಪಾಲಿಕೆಯ ಪಚ್ಚನಾಡಿ ವಾರ್ಡ್ನ ಸಂತೋಷನಗರದ ಕೆರಮ ಎಂಬಲ್ಲಿ ಸುಮಾರು ೫೦ ಸೆಂಟ್ಸ್ ಸರ್ಕಾರಿ(ಕುಮ್ಕಿ) ಜಾಗದಲ್ಲಿ ಸ್ಥಳೀಯ ರಾಜಕೀಯ ಪ್ರಭಾವಿ ವ್ಯಕ್ತಿಯೊಬ್ಬರ ಬೆಂಬಲ ಪಡೆದು ಕೆಲವು ಅಕ್ರಮ ಮನೆ ನಿರ್ಮಿಸುತ್ತಿರುವ ವಿಜಯ ಕುಮಾರ್ ಶೆಟ್ಟಿ ಎಂಬವರಿಗೆ ನೋಟಿಸು ಜಾರಿಗೊಳಿಸಿರುವ ಮನಪಾ ನಗರ ಮತ್ತು ಗ್ರಾಮಾಂತರ ಯೋಜನಾ ಜಂಟಿ ನಿರ್ದೇಶಕರು ತಕ್ಷಣದಿಂದ ಜಾರಿಗೆ ಬರುವಂತೆ ಕಟ್ಟಡ ನಿರ್ಮಾಣ ಕಾರ್ಯ ಸ್ಥಗಿತಗೊಳಿಸುವಂತೆ ಆದೇಶಿಸಿದ್ದಾರೆ.

ಪಚ್ಚನಾಡಿಯಲ್ಲಿ ಸರ್ವೇ ನಂಬ್ರ ೬೧/೧೩ರಲ್ಲಿ ಬ್ರಾಹ್ಮಣ ಮಹಿಳೆ ಸೀತಮ್ಮ ಎಂಬವರಿಗೆ ೨ ಎಕ್ರೆ ವರ್ಗದ ಜಾಗ ಮತ್ತು ಸುಮಾರು ೫೦ ಸೆಂಟ್ಸ್ ಕುಮ್ಕಿ ಜಾಗ ಇದ್ದು, ಮಕ್ಕಳಿಲ್ಲದ ಸೀತಮ್ಮ ಅವರು ತನ್ನ ಸಂಬAಧಿ ಗಣೇಶ್ ಭಟ್ ಎಂಬವರಿಗೆ ಜಾಗದ ವೀಲುನಾಮೆ ಮಾಡಿ ಕೊಟ್ಟಿದ್ದರು. ಕೆಲವು ಸಮಯದ ಹಿಂದೆ ಈ ಜಾಗದ ರೆಕಾರ್ಡ್ ಮಾಡಿ ಕೊಡುವಂತೆ ಪರಿಚಯದ ಪ್ರಭಾವಿ ವ್ಯಕ್ತಿಯೊಬ್ಬರಲ್ಲಿ ತಿಳಿಸಿ, ಹಳೆ ದಾಖಲೆ ಪತ್ರ ಒದಗಿಸಿದ್ದರು.

`ಅದು ಸರ್ಕಾರಿ ಜಾಗ’ ಎಂದು ಹೇಳಿದ ಆ ವ್ಯಕ್ತಿ, ನನಗೆ ರೆಕಾರ್ಡ್ ಮಾಡಿ ಕೊಡುವ ಬದಲಾಗಿ ಸ್ಥಳೀಯ ವಿಜಯ ಕುಮಾರ್ ಶೆಟ್ಟಿ ಎಂಬ ಶ್ರೀಮಂತ ವ್ಯಕ್ತಿಯೊಬ್ಬರನ್ನು ಮುಂದಿಟ್ಟುಕೊAಡು ಸದ್ರಿ ಜಾಗವನ್ನು ಖಾಸಗಿಯವರಿಗೆ ಮಾರಾಟ ಮಾಡಿ, ಅನಧಿಕೃತ ಮನೆ ನಿರ್ಮಿಸಲಾಗುತ್ತಿದೆ ಎಂದು ಗಣೇಶ್ ಅವರು ಮಂಗಳೂರು ತಹಶೀಲ್ದಾರ್‌ಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
ತನ್ನ ಅರಿವಿಗೆ ಬರದಂತೆ ಸ್ಥಳೀಯ ಪ್ರಭಾವಿ ವ್ಯಕ್ತಿಯು ವಿಲೇಜ್ ಅಕೌಂಟೆAಟ್ ಸಹಾಯಕರಾಗಿದ್ದ ಗಂಗಾಧರ ಎಂಬವರ ನೆರವು ಪಡೆದುಕೊಂಡು ಸರ್ಕಾರಿ ಭೂಮಿಯ ಪರಿವರ್ತನೆಗೆ ಪ್ರಕ್ರಿಯೆಗಳು ನಡೆದಿವೆ ಎಂಬ ವಿಷಯ ಗಮನಕ್ಕೆ ಬಂದಿದೆ. ಒಂದೊಮ್ಮೆ ಅದು ಸರ್ಕಾರಿ ಜಾಗವಾಗಿದಲ್ಲಿ ಅದರಲ್ಲಿ ಅಕ್ರಮ ನಿರ್ಮಾಣ ಕಾರ್ಯ ನಡೆಸುವಂತಿಲ್ಲ ಎಂಬುದು ಸಾಮಾನ್ಯಜ್ಞಾನ. ಸರ್ಕಾರಿ ಎನ್ನಲಾದ ಜಾಗದಲ್ಲಿ ಏಕಾಏಕಿಯಾಗಿ ಮನೆ ನಿರ್ಮಿಸುತ್ತಿರುವುದು ಕಾನೂನುಬಾಹಿರ. ತನ್ನಲ್ಲಿರುವ ವೀಲುನಾಮೆಯಲ್ಲಿ ೫೦ ಸೆಂಟ್ಸ್ ಕುಮ್ಕಿ ಜಾಗದ ಉಲ್ಲೇಖವಿದೆ. ಅನಧಿಕೃತ ಮನೆ ನಿರ್ಮಾಣ ಕಾರ್ಯಕ್ಕೆ ತಡೆ ಹೇರಿ ತನ್ನ ಜಾಗಕ್ಕೆ ರಕ್ಷಣೆ ಒದಗಿಸಬೇಕು ಎಂದು ಭಟ್ ಮನವಿ ಮಾಡಿಕೊಂಡಿದ್ದಾರೆ.
ದೂರರ್ಜಿಯ ಪರಿಶೀಲಿಸಿದ ಮನಪಾ ನಗರ ಮತ್ತು ಗ್ರಾಮಾಂತರ ಯೋಜನಾ ಜಂಟಿ ನಿರ್ದೇಶಕರು ಪಚ್ಚನಾಡಿಯ ಕೆರಮದಲ್ಲಿ ಅನಧಿಕೃತವಾಗಿ ೬ ಮನೆ ನಿರ್ಮಿಸುತ್ತಿರುವ ವಿಜಯ್ ಕುಮಾರ್ ಶೆಟ್ಟಿಗೆ ಜ. ೩೦ರಂದು ನೊಟೀಸು ಜಾರಿ ಮಾಡಿ, `ಕಟ್ಟಡ ನಿರ್ಮಾಣ ಕಾರ್ಯಕ್ಕೆ ಕಡ್ಡಾಯವಾಗಿ ಪರವಾನಗಿ ಪಡೆದುಕೊಳ್ಳಬೇಕು. ಈ ಬಗ್ಗೆ ಮುಂದಿನ ೩ ದಿನದೊಳಗೆ ಲಿಖಿತ ವಿವರಣೆ ನೀಡಬೇಕು. ತಪ್ಪಿದಲ್ಲಿ ಕೆಎಂಸಿ ಕಾಯ್ದೆಯನ್ವಯ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಸಿದ್ದಾರೆ.
`ಖಾಸಗಿ ವ್ಯಕ್ತಿಯೊಬ್ಬರು ಪಚ್ಚನಾಡಿಯ ಕೆರಮದ ಸರ್ಕಾರಿ ಜಾಗ ಮಾರಾಟ ಮಾಡಿದ್ದು, ಸಂಬAಧಪಟ್ಟ ಇಲಾಖೆಗಳ ಅಧಿಕೃತ ಪರವಾನಿಗೆ ಇಲ್ಲದೆ ಅಲ್ಲಿ ಮನೆ ನಿರ್ಮಿಸಲಾಗುತ್ತಿದೆ. ಸರ್ಕಾರಿ ಜಾಗ ಖರೀದಿಸಿ ಮನೆ ಕಟ್ಟಿಕೊಳ್ಳುವವರು ಮುಂಜಾಗೃತೆ ವಹಿಸಿಕೊಳ್ಳಬೇಕು. ಜೊತೆಗೆ ಜನಪ್ರತಿನಿಧಿಗಳು ಕಾನೂನು ಪಾಲಿಸುವುದರೊಂದಿಗೆ ಜನಸಾಮಾನ್ಯರಿಗೆ ಮಾದರಿಯಾಗಬೇಕು. ಆದರೆ ಇಲ್ಲಿನ ಸ್ಥಿತಿ
ಬೇಲಿಯೇ ಎದ್ದು ಹೊಲ ಮೇಯ್ದರೆ ಹೇಗೆ ಎಂಬAತಾಗಿದೆ ” ಎಂದು ಸಾಮಾಜಿಕ ಹೋರಾಟಗಾರ ಮೋಹನ್ ಪಚ್ಚನಾಡಿ ಹೇಳಿದರು.