ಪುಂಚಮೆ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯಲ್ಲಿ 11 ಮಂದಿ ನಿರ್ದೇಶಕರು ಆಯ್ಕೆ

ಬಂಟ್ಚಾಳ : ಪುಂಚಮೆ ಹಾಲು ಉತ್ಪಾದಕರ ಸಹಕಾರ ಸಂಘ ನಿ.,ದ ಮುಂದಿನ ಐದು ವರ್ಷಗಳ ಆಡಳಿತ ಸಮಿತಿಗೆ ನಡೆದ ಚುನಾವಣೆಯಲ್ಲಿ ನೂತನವಾಗಿ 13 ಸ್ಥಾನದ ಪೈಕಿ 11 ಮಂದಿ ನಿರ್ದೇಶಕರು ಆಯ್ಕೆಯಾಗಿದ್ದು,ಎರಡು ಸ್ಥಾನ ಖಾಲಿ ಉಳಿದಿದೆ.
ಸಾಮಾನ್ಯ ಕ್ಷೇತ್ರದಿಂದ ವಾಮನಪೂಜಾರಿ ಸೂರ್ಲ,ಯಾದವ ಮೂಲ್ಯ, ವಾಮನ ಪೂಜಾರಿ ತೋಡಬಳಿ,ಚಾಲ್ಸ್ ಡಿ’ಸೋಜಾ,
ಸುಂದರ ಮೂಲ್ಯ,ಅಣ್ಣು ಮೂಲ್ಯ,ಮೋಹಿನಿ,ಹಿ.ವರ್ಗ’ ಎ’ ಕ್ಷೇತ್ರ ರಾಧಕೃಷ್ಣ ರೈ,ಮಹಿಳಾ ಮೀಸಲು ಕ್ಷೇತ್ರದಿಂದ ಲೀನಾ ಲೋಬೋ,ವೃಂದಾಕ್ಷಿ,ಪ.ಜಾ.ಕ್ಷೇತ್ರದಿಂದ ಸರೋಜಿನಿ ಅವರು ಆಯ್ಕೆಯಾಗಿದ್ದಾರೆ.
ಹಿಂ.ವರ್ಗ ” ಬಿ ” ಸ್ಥಾನ ಹಾಗೂ ಪ. ಪಂ. ಮೀಸಲು ಸ್ಥಾನಕ್ಜೆ ನಾಮಪತ್ರ ಸಲ್ಲಿಕೆಯಾಗದ ಕಾರಣ ಈ ಎರಡು ಸ್ಥಾನ ಖಾಲಿ ಇರುತ್ತದೆ ಎಂದು ಚುನಾವಣಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಮಂಗಳೂರು ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಎನ್.ಜೆ.ಗೋಪಾಲ್ ಅವರುಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.ಸಂಘದ ಕಾರ್ಯದರ್ಶಿ ಹಾಗೂ ಸಿಬ್ಬಂದಿಗಳು ಸಹಕರಿಸಿದರು.