ಬಂಟ್ವಾಳ: ನೇರಳಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದಿನ ಐದು ವರ್ಷದ ಅವಧಿಯ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬಂಬಲಿತ ಸಹಕಾರ ಪ್ರಕೋಷ್ಠದ 13 ಮಂದಿ ಅಭ್ಯರ್ಥಿಗಳು ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ.


ಸಾಮಾನ್ಯ ಕ್ಷೇತ್ರದಿಂದ  ಪುಷ್ಪರಾಜ್ ಚೌಟ, ನಾರಾಯಣ ಶೆಟ್ಟಿ, ರಾಘವ, ಸನತ್ ಕುಮಾರ್ ರೈ, ಶ್ರೀನಿವಾಸ ಪೂಜಾರಿ, ಅಶೋಕ್ ರೈ ಎನ್ .ಕೆ., ಹಿಂ. ವರ್ಗ ‘ಎ’ ಕ್ಷೇತ್ರದಿಂದ ವೆಂಕಟೇಶ್ ಕೋಟ್ಯಾನ್ , ಹಿಂ. ವರ್ಗ ‘ ಬಿ’ ಕ್ಷೇತ್ರದಿಂದ ತನಿಯಪ್ಪ ಗೌಡ, ಮಹಿಳಾ ಮೀಸಲು ಕ್ಷೇತ್ರದಿಂದ ಭಾರತಿ, ಶಕೀಲಾ ಕೃಷ್ಣ ಪೂಜಾರಿ, ಪ.ಜಾ. ಮೀಸಲು ಕ್ಷೇತ್ರದಿಂದ ಸಂಕಪ್ಪ ಜೆ., ಪ.ಪಂ. ಮೀಸಲು ಕ್ಷೇತ್ರದಿಂದ ಸುಧಾಕರ ಪಿ., ಸಾಲಗಾರರಲ್ಲದ ಕ್ಷೇತ್ರದಿಂದ ಕೆ. ಅರುಣ್ ಕುಮಾರ್ ರವರು ಗೆಲುವು ಸಾಧಿಸಿದ್ದಾರೆ.


ಸಹಾಕಾರ ಸಂಘಗಳ ಉಪನಿಬಂಧಕರ ಕಚೇರಿಯ ಪ್ರಥಮ ದರ್ಜೆ ಸಹಾಯಕರಾದ ವಿಲಾಸ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.  ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಶೋಧ ಹಾಗೂ ಸಿಬ್ಬಂದಿಗಳು ಸಹಕರಿಸಿದರು.

ಬಿಜೆಪಿ ಬೆಂಬಲಿತ ಸಹಕಾರ ಪ್ರಕೋಷ್ಠದ ವಿಜೇತ ಅಭ್ಯರ್ಥಿಗಳನ್ನು ಶಾಸಕ ರಾಜೇಶ್ ನಾಯ್ಕ್ ,ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್ ಮತ್ತಿತರ ಪ್ರಮುಖರು ಅಭಿನಂದಿಸಿದ್ದಾರೆ.

By suddi9

Leave a Reply

Your email address will not be published. Required fields are marked *