ಬಂಟ್ವಾಳ: ಅಚಲ ಕಾಯಕನಿಷ್ಠರಾಗಿದ್ದ ಮಡಿವಾಳ ಮಾಚಿದೇವ ಅವರು ವಚನ ಸಾಹಿತ್ಯ ಮತ್ತು ಧರ್ಮದ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಬಂಟ್ವಾಳ ತಹಶೀಲ್ದಾರ್ ಡಿ.ಅರ್ಚನಾ ಭಟ್ ಅವರು ಹೇಳಿದ್ದಾರೆ.


ಬಿ.ಸಿ.ರೋಡಿನ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಶನಿವಾರ ನಡೆದಬಂಟ್ವಾಳ ತಾಲೂಕು ಮಟ್ಟದ ಮಡಿವಾಳ ಮಾಚಿದೇವ ಜಯಂತಿ ಆಚರಣೆಯಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಪುಷ್ಪ ಅರ್ಚನೆ ಗಡಸ ಬಳಿಕ ಮಾತನಾಡಿದ  ಅವರು ಮಾಚಿದೇವರ ವಚನಗಳ ಸಂದೇಶದಂತೆ ಇಂದು ಮನಗಳಲ್ಲಿರುವ ಕೊಳೆಯನ್ನು ತೊಳೆಯುವ ಅನಿವಾರ್ಯತೆ ಇದೆ  ಎಂದರು.


ಈ ಸಂದರ್ಭದಲ್ಲಿ ಕೇಂದ್ರ ಸ್ಥಾನೀಯ ಉಪತಹಶೀಲ್ದಾರರಾದ ನರೇಂದ್ರನಾಥ ಮಿತ್ತೂರು, ತಾಲೂಕು ಕಛೇರಿ ಸಿಬ್ಬಂದಿ, ಗ್ರಾಮ ಆಡಳಿತ ಅಧಿಕಾರಿಯವರು, ಗ್ರಾಮ ಸಹಾಯಕರು ಹಾಜರಿದ್ದರು. 

By suddi9

Leave a Reply

Your email address will not be published. Required fields are marked *