ಬೀದರ್: ಮಂಗ ಓಡಿಸಲು ಹೋದ ವೇಳೆ ಹೆಜ್ಜೇನು ದಾಳಿ ಮರದ ಮೇಲಿಂದ ಬಿದ್ದು ವ್ಯಕ್ತಿ ಸಾವು

ಬೀದರ್: ಜಮೀನಲ್ಲಿ ಬಂದ ಮಂಗ ಓಡಿಸಲು ಮರದ ಮೇಲೆ ಹತ್ತಿದ್ದ ವ್ಯಕ್ತಿ ಮೇಲೆ ಹೆಜ್ಜೆನು ದಾಳಿ ಮಾಡಿದ್ದು ಮರದ ಮೇಲಿನಿಂದ ಬಿದ್ದು ವ್ಯಕ್ತಿ ಮೃತಪಟ್ಟಿರುವ ಘಟನೆ ಬೀದರ್ ಜಿಲ್ಲೆಯ ಹುಲಸೂರ ತಾಲೂಕಿನ ಗಡಿಗೌಂಡಗಾಂವ ಗ್ರಾಮದಲ್ಲಿ ನಿನ್ನೆ ಸಂಜೆ ನಡೆದಿದೆ.ಗೌಡಗಾಂವ ಗ್ರಾಮದ ಯುವರಾಜ ನಾಗಶಟ್ಟಿ ಬಿರಾದಾರ (42) ಹೆಜ್ಜೆನು ದಾಳಿಗೆ ಹೆದರಿ ಮರದ ಮೇಲಿಂದ ಬಿದ್ದು ಮೃತಪಟ್ಟಿದ್ದಾರೆ. ತನ್ನ ಜಮೀನಿನಲ್ಲಿ ಬಂದಿದ್ದ ಮಂಗಗಳನ್ನು ಓಡಿಸಲೆಂದು ತನ್ನ ತಂದೆ ಹಾಗೂ ಸಹೋದರನೊಂದಿಗೆ ಈತ ತೆರಳಿದ್ದ, ಜಮೀನಿನಲ್ಲಿಯ ಮಾವಿನ ಮರದಲ್ಲಿ ಇದ್ದ ಹೆಜ್ಜೆನು ಓಡಿಸಲೆಂದು ಮರದ ಕೆಳಗೆ ಬೆಂಕಿ ಹಚ್ಚಿದ್ದು, ಇದೇ ವೇಳೆ ಮಾವಿನ ಮರದಲ್ಲಿ ಇದ್ದ ಮಂಗಗಳನ್ನು ಓಡಿಸಲೆಂದು ಈತ ಮರ ಹತ್ತಿದ್ದಾನೆ. ಮರ ಹತ್ತಿದ ವೇಳೆ ಏಕಾ ಏಕಿಯಾಗಿ ಈತನ ಮೇಲೆ ಹೆಜ್ಜೆನಿನ ನೋಣಗಳು ದಾಳಿ ನಡೆಸಿವೆ. ಇದರಿಂದಾಗಿ ಮರದ ಮೇಲಿಂದ ಈತ ಕೆಳಗಡೆ ಬಿದ್ದಿದ್ದಾನೆ ಇದರಿಂದಾ ಗಂಭೀರವಾಗಿ ಗಾಯಗೊಂಡಿದ್ದಾನೆ.
ಈತನಿಗೆ ಚಿಕಿತ್ಸೆಗೆಂದು ತಕ್ಷಣ ಬಸವಕಲ್ಯಾಣ ನಗರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಆಸ್ಪತ್ರೆಗೆ ಬರುವ ಮುನ್ನವೆ ಈತ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದು ಬಂದಿದೆ. ಸುದ್ದಿ ತಿಳಿದ ಸಿಪಿಐ ಅಲಿಸಾಬ್, ಪಿಎಸ್‌ಐ ಶಿವಪ್ಪ ಮೇಟಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿದ್ದು, ತನಿಖೆ ಮುಂದುವೆರೆಸಿದ್ದಾರೆ. ಈ ಕುರಿತು ಹುಲಸೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.